ಬಂಗಾರ ಖರೀದಿಸಲು ಇಂದು ಸುವರ್ಣಾವಕಾಶ: ಚಿನ್ನದ ಬೆಲೆ ಮತ್ತೆ ಇಳಿಕೆ

ಚಿನ್ನದ

ನವದೆಹಲಿ, ನವೆಂಬರ್ 16: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸೋಮವಾರವೂ ಇಳಿಮುಖವಾಗಿವೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಕುಸಿಯುತ್ತಿರುವ ಬಂಗಾರದ ಬೆಲೆ ಈಗ ಖರೀದಿದಾರರಿಗೆ ಸ್ವಲ್ಪ ನೆಮ್ಮದಿ ನೀಡಿದೆ. ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 75 ರೂಪಾಯಿಗಳಷ್ಟು ಇಳಿಕೆಯಾಗಿದ್ದು, ಬೆಳ್ಳಿಯ ಬೆಲೆ ಗ್ರಾಮ್‌ಗೆ 5 ರೂಪಾಯಿ ತಗ್ಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಬಂಗಾರದ ಬೆಲೆ ಒಟ್ಟಾರೆಯಾಗಿ ಒಂದು ಸಾವಿರ ರೂಪಾಯಿಗಳಿಗಿಂತ ಹೆಚ್ಚು ಇಳಿಕೆಯಾಗಿದೆ.

ಇಂದಿನ ಚಿನ್ನದ ಬೆಲೆ ವಿವರ
ಇಂದಿನ ಮಾರುಕಟ್ಟೆ ದರದ ಪ್ರಕಾರ, 22 ಕ್ಯಾರಟ್ ಚಿನ್ನದ ಬೆಲೆ 12,615 ರೂಪಾಯಿಗಳಿಂದ 12,540 ರೂಪಾಯಿಗಳಿಗೆ ಕುಸಿದಿದೆ. ಅದೇ ರೀತಿ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 13,680 ರೂಪಾಯಿಗಳಾಗಿದೆ. 18 ಕ್ಯಾರಟ್ ಚಿನ್ನದ ಬೆಲೆ 10,260 ರೂಪಾಯಿಗಳಷ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 1,25,400 ರೂಪಾಯಿ ಇದ್ದು, 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 1,36,800 ರೂಪಾಯಿಗಳಾಗಿದೆ.

ಬೆಳ್ಳಿ ಬೆಲೆ
ಬೆಳ್ಳಿಯ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ಇಂದು ಒಂದು ಗ್ರಾಂ ಬೆಳ್ಳಿಯ ಬೆಲೆ 190 ರೂಪಾಯಿಗಳಷ್ಟಿದೆ. 100 ಗ್ರಾಂ ಬೆಳ್ಳಿಯ ಬೆಲೆ 19,000 ರೂಪಾಯಿಗಳಾಗಿದೆ. ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಕೋಲ್ಕತಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 190 ರೂಪಾಯಿಗಳಲ್ಲಿ ಯಥಾಸ್ಥಿತಿಯಲ್ಲಿದೆ.

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ)

ಅಂತಾರಾಷ್ಟ್ರೀಯ ಮತ್ತು ಎಂಸಿಎಕ್ಸ್ ದರಗಳು
ಅಂತಾರಾಷ್ಟ್ರೀಯ ಸ್ಪಾಟ್ ದರಗಳೂ ಕಡಿಮೆಯಾಗಿವೆ. ಭಾರತದಲ್ಲಿ ಸ್ಪಾಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಯಥಾಸ್ಥಿತಿಯಲ್ಲಿದ್ದರೂ, ಎಂಸಿಎಕ್ಸ್ ಫ್ಯೂಚರ್ಸ್ ಬೆಲೆಯಲ್ಲಿ ಇಳಿಮುಖವಾಗಿದೆ. ಎಂಸಿಎಕ್ಸ್ ಫ್ಯೂಚರ್ಸ್ (ಡಿಸೆಂಬರ್ 4ರ ಡೆಲಿವರಿಗೆ) ಚಿನ್ನದ ಬೆಲೆ ಪ್ರತಿ ಗ್ರಾಂಗೆ 13,506 ರೂಪಾಯಿ ಇದ್ದು, ಬೆಳ್ಳಿ ಪ್ರತಿ ಗ್ರಾಂಗೆ 170 ರೂಪಾಯಿಗಳಾಗಿದೆ. ಭಾರತದಲ್ಲಿ ಸ್ಪಾಟ್ ದರಗಳ ಪ್ರಕಾರ ಚಿನ್ನ ಪ್ರತಿ ಗ್ರಾಂಗೆ 13,580 ರೂಪಾಯಿ ಮತ್ತು ಬೆಳ್ಳಿ ಪ್ರತಿ ಗ್ರಾಂಗೆ 178 ರೂಪಾಯಿಗಳಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪಾಟ್ ಗೋಲ್ಡ್ ಪ್ರತಿ ಗ್ರಾಂಗೆ 123.82 ಡಾಲರ್ (ಸುಮಾರು 11,644 ರೂಪಾಯಿ) ಮತ್ತು ಸ್ಪಾಟ್ ಸಿಲ್ವರ್ ಪ್ರತಿ ಗ್ರಾಂಗೆ 1.524 ಡಾಲರ್ (ಸುಮಾರು 143 ರೂಪಾಯಿ) ಇದೆ.

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ)

ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಕಂಡುಬರುತ್ತಿರುವ ಈ ಇಳಿಕೆಯು ಮದುವೆ ಮತ್ತು ಹಬ್ಬದ ಸೀಸನ್‌ನಲ್ಲಿ ಖರೀದಿಸಲು ಯೋಚಿಸುತ್ತಿರುವವರಿಗೆ ಸ್ವಲ್ಪ ಮಟ್ಟಿನ ಪರಿಹಾರವನ್ನು ನೀಡಿದೆ. ಆದರೆ, ಮುಂದಿನ ದಿನಗಳಲ್ಲಿ ಬೆಲೆಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version