ನವದೆಹಲಿ, ಜೂನ್ 7: ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ವಾರಾಂತ್ಯದಲ್ಲಿ ಸಿಹಿ ಸುದ್ದಿಯೊಂದು ದೊರೆತಿದೆ. ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ದಾಖಲಾಗಿದ್ದು, ಹತ್ತು ಗ್ರಾಂ ಆಭರಣ ಚಿನ್ನದ ಬೆಲೆಲ್ಲಿ ₹2,750 ರಷ್ಟು ಕಡಿಮೆಯಾಗಿದೆ. ಇದರೊಂದಿಗೆ ಚಿನ್ನದ ಬೆಲೆ ಕಳೆದ ಕೆಲವು ದಿನಗಳಲ್ಲಿನ ಗರಿಷ್ಠ ಮಟ್ಟದಿಂದ ಕೆಳಗಿಳಿದಿದೆ.
ಭಾರತದಲ್ಲಿ ಸದ್ಯ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,000 ಆಗಿದ್ದು, 10 ಗ್ರಾಂಗೆ ₹1,40,000ಕ್ಕೆ ಲಭ್ಯವಾಗಿದೆ. ಅದೇ ರೀತಿ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,273 ಆಗಿದ್ದು, 10 ಗ್ರಾಂಗೆ ₹1,52,730ಕ್ಕೆ ತಲುಪಿದೆ. 18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹11,455 ಆಗಿದೆ.
ಚಿನ್ನದ ಜೊತೆಗೆ ಬೆಳ್ಳಿಯ ದರವೂ ಇಳಿಕೆಯಾಗಿದೆ. ದೇಶದ ಬಹುತೇಕ ನಗರಗಳಲ್ಲಿ ಬೆಳ್ಳಿ ಪ್ರತಿ ಗ್ರಾಂಗೆ ₹265ಕ್ಕೆ ಮಾರಾಟವಾಗುತ್ತಿದ್ದು, ಕೆಲವು ರಾಜ್ಯಗಳಲ್ಲಿ ₹270 ದರ ದಾಖಲಾಗಿದೆ. 100 ಗ್ರಾಂ ಬೆಳ್ಳಿಯ ಬೆಲೆ ₹26,500 ಆಗಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ದರ
ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,000 ಆಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ ₹15,273 ಇದೆ. ಬೆಳ್ಳಿ ಪ್ರತಿ ಗ್ರಾಂಗೆ ₹265 ದರದಲ್ಲಿ ಲಭ್ಯವಾಗಿದೆ.
ಇನ್ನು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಈ ಕೆಳಗಿನಂತಿದೆ.
- ಬೆಂಗಳೂರು – ₹14,000
- ಚೆನ್ನೈ – ₹14,200
- ಮುಂಬೈ – ₹14,000
- ದೆಹಲಿ – ₹14,015
- ಕೋಲ್ಕತಾ – ₹14,000
- ಕೇರಳ – ₹14,000
- ಅಹ್ಮದಾಬಾದ್ – ₹14,005
- ಜೈಪುರ – ₹14,015
- ಲಕ್ನೋ – ₹14,015
- ಭುವನೇಶ್ವರ್ – ₹14,000
ಚೆನ್ನೈನಲ್ಲಿ ದೇಶದ ಇತರೆ ಪ್ರಮುಖ ನಗರಗಳಿಗಿಂತ ಚಿನ್ನದ ಬೆಲೆ ಸ್ವಲ್ಪ ಹೆಚ್ಚಾಗಿದೆ.
ವಿದೇಶಗಳಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆ
ಭಾರತ ಮಾತ್ರವಲ್ಲದೆ ಹಲವು ವಿದೇಶಿ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆ ಕುಸಿತ ಕಂಡಿದೆ. ಮಲೇಷ್ಯಾ, ದುಬೈ, ಅಮೆರಿಕ, ಸಿಂಗಾಪುರ್, ಕತಾರ್, ಸೌದಿ ಅರೇಬಿಯಾ, ಓಮನ್ ಹಾಗೂ ಕುವೇತ್ ದೇಶಗಳಲ್ಲಿ ಚಿನ್ನದ ದರ ಇಳಿಕೆಯಾಗಿದ್ದು, ಭಾರತೀಯ ರೂಪಾಯಿಯಲ್ಲಿ ಲೆಕ್ಕ ಹಾಕಿದರೆ ಪ್ರತಿ ಗ್ರಾಂಗೆ ಸುಮಾರು ₹13,500 ರಿಂದ ₹14,000ರ ನಡುವೆ ದರ ದಾಖಲಾಗಿದೆ.
ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಪ್ರಮುಖ ದರಗಳು
- ಮಲೇಷ್ಯಾ – ₹13,633
- ದುಬೈ – ₹13,546
- ಅಮೆರಿಕ – ₹13,588
- ಸಿಂಗಾಪುರ್ – ₹14,074
- ಕತಾರ್ – ₹13,653
- ಸೌದಿ ಅರೇಬಿಯಾ – ₹13,638
- ಓಮನ್ – ₹13,586
- ಕುವೇತ್ – ₹13,610
ಬೆಳ್ಳಿ ದರ ಎಷ್ಟು?
ಬೆಳ್ಳಿಯ ಬೆಲೆ ಕೂಡ ಹೂಡಿಕೆದಾರರ ಗಮನ ಸೆಳೆದಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರ ಹಾಗೂ ಪುಣೆಯಲ್ಲಿ ಪ್ರತಿ ಗ್ರಾಂ ಬೆಳ್ಳಿ ₹265 ದರದಲ್ಲಿದ್ದರೆ, ಚೆನ್ನೈ, ಕೇರಳ ಹಾಗೂ ಭುವನೇಶ್ವರ್‌ನಲ್ಲಿ ₹270 ದರ ದಾಖಲಾಗಿದೆ.
