ಬಂಗಾರ ಪ್ರಿಯರಿಗೆ ಶಾಕ್‌: ಇಂದು ಚಿನ್ನ & ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ

Untitled design (35)

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಂಗಾರದ ಬೆಲೆ ಏರಿಕೆ ಹಾದಿ ಹಿಡಿದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಆರ್ಥಿಕ ಏರಿಳಿತದ ನೇರ ಪ್ರಭಾವ ಈಗ ಬೆಂಗಳೂರಿನ ಚಿನ್ನದ ಅಂಗಡಿಗಳ ಮೇಲೂ ಬಿದ್ದಿದ್ದು, ಬಂಗಾರ ಮತ್ತು ಬೆಳ್ಳಿ ಎರಡೂ ಬೆಲೆಗಳು ಗಗನಕ್ಕೇರಿವೆ. ಕಳೆದ ಕೆಲವು ದಿನಗಳಿಂದ ಸಮಾಧಾನಕರವಾಗಿದ್ದ ದರ, ಇಂದು ದಿಢೀರನೆ ಬೆಲೆ ಏರಿಕೆ ಆಗಿರುವುದು ಆಭರಣ ಪ್ರಿಯರಲ್ಲಿ ಆತಂಕ ಮೂಡಿಸಿದೆ.

ಇಂದು (ಶನಿವಾರ, ಮಾರ್ಚ್ 28) ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಬದಲಾವಣೆ ಕಂಡುಬಂದಿದೆ. ಪ್ರತಿ 10 ಗ್ರಾಂ 24 ಕ್ಯಾರೆಟ್ (ಅಪರಂಜಿ) ಚಿನ್ನದ ಬೆಲೆ ಬರೋಬ್ಬರಿ ₹2,510 ರಷ್ಟು ಏರಿಕೆ ಕಂಡಿದೆ.

ಮಾರ್ಚ್ ತಿಂಗಳ ಆರಂಭದಿಂದಲೂ ಚಿನ್ನದ ಬೆಲೆಯಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದ್ದು, ಗ್ರಾಹಕರು ಚಿನ್ನ ಖರೀದಿಸಲು ಹೋದರೆ ಬೆಲೆ ಕೇಳಿ ದಂಗಾಗುವಂತಾಗಿದೆ. ಈ ತಿಂಗಳು 24 ಕ್ಯಾರೆಟ್ ಚಿನ್ನದ ಗರಿಷ್ಠ ಬೆಲೆ ₹17,051 ಮುಟ್ಟಿದ್ದರೆ, ಕನಿಷ್ಠ ಬೆಲೆ ₹13,565 ದಾಖಲಾಗಿತ್ತು.

ಬೆಳ್ಳಿ ಬೆಲೆಯಲ್ಲಿ ಭಾರಿ ಜಿಗಿತ

ಕೇವಲ ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆ ಕೂಡ ಹೆಚ್ಚಾಗಿದೆ. ನಿನ್ನೆ ಬೆಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿತ್ತು. ಆದರೆ ಇಂದು ಒಂದೇ ಸಮನೆ ಪ್ರತಿ ಕೆಜಿಗೆ 5,000 ರೂಪಾಯಿ ಏರಿಕೆ ಕಾಣುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ವಾರಾಂತ್ಯದಲ್ಲಿ ಬೆಳ್ಳಿ ಆಭರಣ ಅಥವಾ ಪೂಜಾ ಸಾಮಗ್ರಿ ಖರೀದಿಸುವ ಪ್ಲಾನ್ ಮಾಡಿದ್ದವರಿಗೆ ಈ ಬೆಲೆ ಏರಿಕೆ ದೊಡ್ಡ ಹೊಡೆತ ನೀಡಿದೆ.

ಪ್ರಮುಖ ನಗರಗಳಲ್ಲಿನ ದರ (100 ಗ್ರಾಂ 24K ಚಿನ್ನಕ್ಕೆ): ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ಸರಿಸುಮಾರು ಒಂದೇ ಆಗಿದ್ದರೂ, ಚೆನ್ನೈನಲ್ಲಿ ದರ ಕೊಂಚ ಹೆಚ್ಚಿದೆ:

ಏರಿಕೆಗೆ ಕಾರಣವೇನು ?

ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ಬದಲಾವಣೆಗಳು, ಡಾಲರ್ ಮೌಲ್ಯದಲ್ಲಿನ ಏರಿಳಿತ ಮತ್ತು ಜಾಗತಿಕ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೊರೆ ಹೋಗುತ್ತಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

Exit mobile version