ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌: ಇಂದಿನ ಚಿನ್ನದ ಬೆಲೆ ಭಾರಿ ಇಳಿಕೆ..!

Untitled design 2025 10 27t113217.269

ಬೆಂಗಳೂರು, ಅಕ್ಟೋಬರ್ 27: ಚಿನ್ನದ ಬೆಲೆಯಲ್ಲಿ ಸತತ ಏರಿಕೆಯ ಧಾಮದ ನಂತರ, ಇಂದು ಸೋಮವಾರ ಸ್ವಲ್ಪ ಕುಸಿತ ಕಂಡಿದೆ. ಒಂದು ಗ್ರಾಮ್‌ಗೆ 100-140 ರೂಪಾಯಿಗಳಷ್ಟು ಚಿನ್ನದ ಬೆಲೆ ಇಳಿಕೆಯಾಗಿದೆ. ಇತ್ತ, ಕಳೆದ ಕೆಲ ದಿನಗಳಿಂದ ಇಳಿಮುಖವಾಗಿದ್ದ ಬೆಳ್ಳಿ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ. ಆದರೆ, ವಿದೇಶಗಳಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಳಿತಗಳು ಕಂಡುಬಂದಿವೆ. ಭಾರತದಲ್ಲಿ ಪ್ರಸ್ತುತ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,14,100 ರೂಪಾಯಿಗಳಾಗಿದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,24,480 ರೂಪಾಯಿಗಳಾಗಿದೆ. 100 ಗ್ರಾಮ್ ಬೆಳ್ಳಿಯ ಬೆಲೆ 15,500 ರೂಪಾಯಿಗಳಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,14,100 ರೂಪಾಯಿಗಳಾಗಿದ್ದು, 100 ಗ್ರಾಮ್ ಬೆಳ್ಳಿಯ ಬೆಲೆ 15,700 ರೂಪಾಯಿಗಳಾಗಿದೆ. ತಮಿಳುನಾಡು, ಕೇರಳ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಬೆಳ್ಳಿಯ ಬೆಲೆ 17,000 ರೂಪಾಯಿಗಳವರೆಗೆ ಇದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಿನದಿಂದ ದಿನಕ್ಕೆ ಬದಲಾವಣೆಗೊಳ್ಳುವುದರಿಂದ, ಗ್ರಾಹಕರು ಖರೀದಿಗೆ ಮುನ್ನ ಅಂಗಡಿಗಳಲ್ಲಿ ದರವನ್ನು ಖಾತರಿಪಡಿಸಿಕೊಳ್ಳುವುದು ಒಳಿತು.

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ (ಅಕ್ಟೋಬರ್ 27, 2025):

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ:

ವಿವಿಧ ಭಾರತೀಯ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್):

ವಿವಿಧ ಭಾರತೀಯ ನಗರಗಳಲ್ಲಿ ಬೆಳ್ಳಿಯ ಬೆಲೆ (1 ಗ್ರಾಮ್):

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್):

ಚಿನ್ನದ ಬೆಲೆಯ ಈ ಕುಸಿತವು ಗ್ರಾಹಕರಿಗೆ ಖರೀದಿಗೆ ಒಂದು ಅವಕಾಶವನ್ನು ಒದಗಿಸಿದೆ. ಆದರೆ, ಈ ಬೆಲೆಗಳ ಮೇಲೆ ಜಿಎಸ್‌ಟಿ, ಮೇಕಿಂಗ್ ಚಾರ್ಜಸ್ ಮತ್ತು ಇತರ ಶುಲ್ಕಗಳು ಸೇರಿಕೊಂಡರೆ ಒಟ್ಟಾರೆ ವೆಚ್ಚ ಹೆಚ್ಚಾಗಬಹುದು. ಆದ್ದರಿಂದ, ಚಿನ್ನ ಅಥವಾ ಬೆಳ್ಳಿ ಖರೀದಿಸುವ ಮುನ್ನ ಪ್ರಮುಖ ಆಭರಣದಂಗಡಿಗಳಲ್ಲಿ ಬೆಲೆಯನ್ನು ಖಾತರಿಪಡಿಸಿಕೊಳ್ಳುವುದು ಸೂಕ್ತ.

Exit mobile version