ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್..ಇಂದು ಚಿನ್ನ-ಬೆಳ್ಳಿ ದರ ಇಳಿಕೆ

Untitled design 2026 03 17T100759.544

ಮದುವೆ ಸೀಸನ್ ಶುರುವಾಗುತ್ತಿದೆ, ಮನೆಗೆ ಒಂದಿಷ್ಟು ಚಿನ್ನದ ಆಭರಣ ಮಾಡಿಸಬೇಕು ಎಂದುಕೊಂಡಿರುವವರಿಗೆ ಇಲ್ಲೊಂದು ಭರ್ಜರಿ ಸಿಹಿಸುದ್ದಿ. ಸತತವಾಗಿ ಏರಿಕೆ ಕಂಡು ಗ್ರಾಹಕರನ್ನು ಆತಂಕಕ್ಕೀಡು ಮಾಡಿದ್ದ ಬಂಗಾರದ ಬೆಲೆ ಇದೀಗ ದಿಢೀರನೇ ಪಾತಾಳಕ್ಕೆ ಜಿಗಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರುಪೇರಿನ ಪರಿಣಾಮ ಭಾರತದ ಮಾರುಕಟ್ಟೆಯಲ್ಲೂ ಎದ್ದುಕಾಣುತ್ತಿದ್ದು, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಮಾರ್ಚ್ 17, 2026 ರ ಇಂದಿನ ಮಾರುಕಟ್ಟೆ ವರದಿ ಪ್ರಕಾರ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಬರೋಬ್ಬರಿ ₹2,050 ರೂ. ಕಡಿಮೆಯಾಗಿದೆ. ಅದೇ ರೀತಿ 24 ಕ್ಯಾರೆಟ್ ಶುದ್ಧ ಚಿನ್ನದ (ಅಪರಂಜಿ) ಬೆಲೆ ₹2,240 ರೂ. ನಷ್ಟು ಇಳಿಕೆಯಾಗಿದೆ. ಮಾರ್ಚ್ ತಿಂಗಳ ಒಟ್ಟಾರೆ ಟ್ರೆಂಡ್ ಗಮನಿಸಿದರೆ, ಚಿನ್ನದ ಬೆಲೆಯಲ್ಲಿ ಶೇ. 7ರಷ್ಟು ಭಾರಿ ಕುಸಿತವಾಗಿರುವುದು ಸ್ಪಷ್ಟವಾಗಿದೆ. ಇದು ಮಧ್ಯಮ ವರ್ಗದ ಜನರು ಹಾಗೂ ಆಭರಣ ಪ್ರಿಯರಿಗೆ ತುಸು ನೆಮ್ಮದಿ ತಂದಿದೆ.

ಬೆಂಗಳೂರಿನಲ್ಲಿ ಚಿನ್ಹ-ಬೆಳ್ಳಿ ಬೆಲೆ ಎಷ್ಟಿದೆ? (17 ಮಾರ್ಚ್ 2026)

ಬೆಂಗಳೂರು ಮಾರುಕಟ್ಟೆಯಲ್ಲಿ ಇಂದು ಬೆಳಿಗ್ಗೆ 7:00 AM ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ

ಗ್ರಾಂ ಲೆಕ್ಕದಲ್ಲಿ ಚಿನ್ನದ ದರ (ಬೆಂಗಳೂರು)
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (1 ಗ್ರಾಂ)
ನಗರ 22K ಬೆಲೆ (1 ಗ್ರಾಂ)
ಬೆಂಗಳೂರು ₹14,429
ಚೆನ್ನೈ ₹14,709
ಮುಂಬೈ ₹14,429
ದೆಹಲಿ ₹14,444
ಕೋಲ್ಕತ್ತಾ ₹14,429
ಹೈದರಾಬಾದ್ ₹14,429
ಕೇರಳ ₹14,429
ಪುಣೆ ₹14,429
ಅಹಮದಾಬಾದ್ ₹14,434
ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (1 ಕೆಜಿ)
ನಗರ 1 ಕೆಜಿ ಬೆಳ್ಳಿ ಬೆಲೆ
ಬೆಂಗಳೂರು ₹2,69,900
ಚೆನ್ನೈ ₹2,75,900
ಮುಂಬೈ ₹2,69,900
ದೆಹಲಿ ₹2,69,900
ಕೋಲ್ಕತ್ತಾ ₹2,69,900
ಹೈದರಾಬಾದ್ ₹2,75,900
ಕೇರಳ ₹2,75,900
ಗ್ರಾಹಕರಿಗೆ ಸಲಹೆ

ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, ಮದುವೆ ಅಥವಾ ಇತರೆ ಶುಭ ಕಾರ್ಯಗಳಿಗಾಗಿ ಆಭರಣ ಖರೀದಿಸಲು ಯೋಜಿಸಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಆದರೆ, ಮಾರುಕಟ್ಟೆಯಲ್ಲಿ ಮತ್ತಷ್ಟು ಏರುಪೇರಾಗುವ ಸಾಧ್ಯತೆ ಇರುವುದರಿಂದ ನಿಯಮಿತವಾಗಿ ದರ ಗಮನಿಸಿ, ಸೂಕ್ತ ಸಮಯದಲ್ಲಿ ಖರೀದಿ ಮಾಡುವುದು ಉತ್ತಮ.

Exit mobile version