ಚಿನ್ನ ಖರೀದಿಸೋ ಪ್ಲ್ಯಾನ್ ಇದ್ಯಾ? ಇಂದಿನ ಗೋಲ್ಡ್‌ ರೇಟ್‌ ತಿಳಿದುಕೊಳ್ಳಿ!

ಮಾರಾಟ (25)

ನವದೆಹಲಿ, ಸೆಪ್ಟೆಂಬರ್ 13: ಚಿನ್ನದ ಬೆಲೆ ಈ ವಾರ ನಿರಂತರವಾಗಿ ದಿನವೂ ಏರಿಳಿತ ಕಾಣುತ್ತಿದೆ. ಒಂದು ದಿನ ಏರಿದರೆ, ಮರುದಿನ ಇಳಿಕೆ, ಮತ್ತೆ ಏರಿಕೆ, ಮತ್ತೆ ಇಳಿಕೆ ಹೀಗೆ ಏರಿಳಿತ ಮುಂದುವರಿಯುತ್ತಿದೆ. ಈ ವಾರಾಂತ್ಯದಲ್ಲಿ ಅದರ ಬೆಲೆ ಗ್ರಾಂಗೆ 155 ರೂ ಹೆಚ್ಚಳಗೊಂಡಿದೆ. ವಿದೇಶಗಳಲ್ಲಿ ಅಲ್ಪ ವ್ಯತ್ಯಯಗಳು ಮುಂದುವರಿದಿವೆ. ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿ ಬೆಲೆ ಹೆಚ್ಚು ಸ್ಥಿರವಾಗಿದೆ. ಅಂತಾರಾಷ್ಟ್ರೀಯ ಸ್ಪಾಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತುಸು ಹೆಚ್ಚಿವೆ.

ಭಾರತದಲ್ಲಿ ಇಂದಿನ ಚಿನ್ನ, ಬೆಳ್ಳಿ ಬೆಲೆ

ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 1,41,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,54,580 ರುಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 24,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,41,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಂಗೆ 24,500 ರುಪಾಯಿಯಲ್ಲಿದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 25,000 ರೂ ಇದೆ. 22 ಕ್ಯಾರಟ್ ಚಿನ್ನದ ಬೆಲೆ 14,015 ರೂನಿಂದ 14,170 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಎಲೆ 15,458 ರೂ ಆಗಿದೆ.

ಚಿನ್ನ ಮತ್ತು ಬೆಳ್ಳಿ ಬೆಲೆ (ಗ್ರಾಂಗೆ)
ಲೋಹ ಪ್ರಮಾಣ ಬೆಲೆ (ರೂ)
24 ಕ್ಯಾರಟ್ ಚಿನ್ನ 1 ಗ್ರಾಂ 15,458
22 ಕ್ಯಾರಟ್ ಚಿನ್ನ 1 ಗ್ರಾಂ 14,170
18 ಕ್ಯಾರಟ್ ಚಿನ್ನ 1 ಗ್ರಾಂ 11,594
ಬೆಳ್ಳಿ 1 ಗ್ರಾಂ 245
22 ಕ್ಯಾರಟ್ ಚಿನ್ನ 10 ಗ್ರಾಂ 1,41,700
24 ಕ್ಯಾರಟ್ ಚಿನ್ನ 10 ಗ್ರಾಂ 1,54,580
ಬೆಳ್ಳಿ 100 ಗ್ರಾಂ 24,400
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ)
ನಗರ ಬೆಲೆ (ರೂ)
ಬೆಂಗಳೂರು 14,170
ಚೆನ್ನೈ 14,170
ಮುಂಬೈ 14,170
ದೆಹಲಿ 14,185
ಕೋಲ್ಕತಾ 14,170
ಕೇರಳ 14,170
ಅಹ್ಮದಾಬಾದ್ 14,175
ಜೈಪುರ 14,185
ಲಕ್ನೋ 14,185
ಭುವನೇಶ್ವರ 14,170
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂಗೆ)
ನಗರ ಬೆಲೆ (ರೂ)
ಬೆಂಗಳೂರು 245
ಚೆನ್ನೈ 250
ಮುಂಬೈ 245
ದೆಹಲಿ 245
ಕೋಲ್ಕತಾ 245
ಕೇರಳ 250
ಅಹ್ಮದಾಬಾದ್ 245
ಜೈಪುರ 245
ಲಕ್ನೋ 245
ಭುವನೇಶ್ವರ 250
ಪುಣೆ 245
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ 1 ಗ್ರಾಂಗೆ 139.82 ಡಾಲರ್ (13,360 ರುಪಾಯಿ) ಇದೆ. ಸ್ಪಾಟ್ ಸಿಲ್ವರ್ 1 ಗ್ರಾಂಗೆ 2.073 ಡಾಲರ್ (198 ರುಪಾಯಿ) ಇದೆ. ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 15,458 ರುಪಾಯಿ ಇದ್ದರೆ, ಮಲೇಷ್ಯಾದಲ್ಲಿ 585 ರಿಂಗಿಟ್ (13,735 ರುಪಾಯಿ), ದುಬೈಯಲ್ಲಿ 524 ಡಿರಾಮ್ (13,635 ರುಪಾಯಿ), ಅಮೆರಿಕದಲ್ಲಿ 143.50 ಡಾಲರ್ (13,714 ರುಪಾಯಿ), ಸಿಂಗಾಪುರದಲ್ಲಿ 187.20 ಸಿಂಗಾಪುರ್ ಡಾಲರ್ (14,119 ರುಪಾಯಿ), ಕತಾರ್ನಲ್ಲಿ 524 ಕತಾರಿ ರಿಯಾಲ್ (13,738 ರೂ), ಸೌದಿ ಅರೇಬಿಯಾದಲ್ಲಿ 539 ಸೌದಿ ರಿಯಾಲ್ (13,716 ರುಪಾಯಿ), ಓಮನ್ನಲ್ಲಿ 55.65 ಒಮಾನಿ ರಿಯಾಲ್ (13,814 ರುಪಾಯಿ) ಹಾಗೂ ಕುವೇತ್ನಲ್ಲಿ 43.33 ಕುವೇತಿ ದಿನಾರ್ (13,504 ರುಪಾಯಿ) ಇದೆ.

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ)
ದೇಶ ಬೆಲೆ (ಸ್ಥಳೀಯ) ಬೆಲೆ (ರೂ)
ಭಾರತ 15,458 ರುಪಾಯಿ 15,458
ಮಲೇಷ್ಯಾ 585 ರಿಂಗಿಟ್ 13,735
ದುಬೈ 524 ಡಿರಾಮ್ 13,635
ಅಮೆರಿಕ 143.50 ಡಾಲರ್ 13,714
ಸಿಂಗಾಪುರ 187.20 ಸಿಂಗಾಪುರ್ ಡಾಲರ್ 14,119
ಕತಾರ್ 524 ಕತಾರಿ ರಿಯಾಲ್ 13,738
ಸೌದಿ ಅರೇಬಿಯಾ 539 ಸೌದಿ ರಿಯಾಲ್ 13,716
ಓಮನ್ 55.65 ಒಮಾನಿ ರಿಯಾಲ್ 13,814
ಕುವೇತ್ 43.33 ಕುವೇತಿ ದಿನಾರ್ 13,504
ಬೆಲೆ ಏರಿಳಿತಕ್ಕೆ ಕಾರಣಗಳು

ಚಿನ್ನದ ಬೆಲೆ ಏರಿಳಿತಕ್ಕೆ ಹಲವು ಅಂಶಗಳು ಕಾರಣವಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಬೆಲೆ, ಬಡ್ಡಿದರ, ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಹೂಡಿಕೆದಾರರ ವಿಶ್ವಾಸ ಹಾಗೂ ಹೂಡಿಕೆ ಬೇಡಿಕೆ – ಇವೆಲ್ಲ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ. ಭಾರತದಲ್ಲಿ ಮದುವೆ ಸೀಸನ್, ಹಬ್ಬದ ಸಂದರ್ಭಗಳಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುವುದರಿಂದ ಬೆಲೆ ಏರಿಕೆ ಕಾಣುತ್ತದೆ. ಬೆಳ್ಳಿ ಬೆಲೆ ಕೈಗಾರಿಕಾ ಬೇಡಿಕೆ ಹಾಗೂ ಹೂಡಿಕೆ ಬೇಡಿಕೆಯನ್ನು ಅವಲಂಬಿಸಿದೆ.

ಚಿನ್ನ ಖರೀದಿಸುವವರಿಗೆ ಸಲಹೆ

ಚಿನ್ನ ಖರೀದಿಸುವ ಮುನ್ನ ಸ್ಥಳೀಯ ಆಭರಣ ವ್ಯಾಪಾರಿಗಳಲ್ಲಿ ಇಂದಿನ ಬೆಲೆಯನ್ನು ಖಚಿತಪಡಿಸಿಕೊಳ್ಳಿ. ಬೆಲೆ ಏರಿಳಿತದ ಕಾರಣ ದೀರ್ಘಾವಧಿ ಹೂಡಿಕೆಗೆ ಸೂಕ್ತ ಸಮಯವನ್ನು ಆಯ್ಕೆ ಮಾಡಿಕೊಳ್ಳಿ. ಆಭರಣ ಖರೀದಿಸುವಾಗ ಮೇಕಿಂಗ್ ಚಾರ್ಜ್, ಜಿಎಸ್ಟಿ ಹಾಗೂ ಇತರ ಶುಲ್ಕಗಳನ್ನು ಗಮನದಲ್ಲಿಟ್ಟುಕೊಳ್ಳಿ.

Exit mobile version