ಚಿನ್ನ ಖರೀದಿಸುವ ಆಸೆ ಇದ್ದರೆ ಈಗಲೇ ಖರೀದಿಸಿ: ಗೋಲ್ಡ್‌ ಬೆಲೆ ಮತ್ತಷ್ಟು ಏರಿಕೆ ಆಗೋದು ಖಚಿತ..!

Untitled design 2026 01 21T180857.325

ಚಿನ್ನ ಖರೀದಿಸುವ ಯೋಚನೆಯಲ್ಲಿದ್ದೀರಾ ? ಹಾಗಿದ್ದರೆ ತಡ ಮಾಡಬೇಡಿ ಮಾಡದೇ ಈಗಲೇ ಖರೀಧಿಸಿ. ಯಾಕೆಂದರೆ ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ಮೂರು ಲಕ್ಷ ರೂಪಾಯಿ ತಲುಪಿದರೂ ಆಶ್ಚರ್ಯ ಪಡಬೇಕಿಲ್ಲ. ಕೇವಲ ಆಭರಣಕ್ಕಾಗಿ ಮಾತ್ರವಲ್ಲದೆ, ದೇಶದ ಆರ್ಥಿಕ ಭದ್ರತೆಯ ದೃಷ್ಟಿಯಿಂದ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೇ ಈಗ ಬಂಗಾರದ ಬೇಟೆಗೆ ಇಳಿದಿವೆ.

ಪೋಲೆಂಡ್‌ನಿಂದ ಭರ್ಜರಿ ಚಿನ್ನ ಖರೀದಿ:

ಇತ್ತೀಚಿನ ವರದಿಗಯಂತೆ, ಪೋಲೆಂಡ್ ಸೆಂಟ್ರಲ್ ಬ್ಯಾಂಕ್ ಬರೋಬ್ಬರಿ 150 ಟನ್ ಚಿನ್ನ ಖರೀದಿಗೆ ಮುಂದಾಗಿದೆ. ತನ್ನ ಒಟ್ಟು ಚಿನ್ನದ ಸಂಗ್ರಹದ ಮಿತಿಯನ್ನು 700 ಟನ್‌ಗೆ ಏರಿಸಲು ಪೋಲೆಂಡ್ ನಿರ್ಧರಿಸಿದ್ದು, ದೀರ್ಘಕಾಲೀನ ಹಣಕಾಸು ಸುಭದ್ರತೆಗಾಗಿ ಈ ಕ್ರಮ ಕೈಗೊಂಡಿದೆ. ಅಂತರಾಷ್ಟ್ರೀಯ ಅಸ್ಥಿರತೆಯ ನಡುವೆ ತನ್ನ ಕರೆನ್ಸಿಯ ಮೌಲ್ಯವನ್ನು ಕಾಪಾಡಿಕೊಳ್ಳಲು ಪೋಲೆಂಡ್ ಈ ನಿರ್ಧಾರ ಕೈಗೊಂಡಿದೆ.

ರಷ್ಯಾ-ಚೀನಾ ಗೋಲ್ಡ್ ಗೇಮ್

ಉಕ್ರೇನ್-ರಷ್ಯಾ ಯುದ್ಧದ ನಂತರ ಚಿನ್ನದ ಬೆಲೆ ರಾಕೆಟ್ ವೇಗದಲ್ಲಿ ಏರಿದೆ. ವಿಶೇಷವೆಂದರೆ, ರಷ್ಯಾ ತನ್ನ ಬಳಿಯಿದ್ದ ಚಿನ್ನದ ಸಂಗ್ರಹದ ಮೂಲಕವೇ ಸುಮಾರು 216 ಬಿಲಿಯನ್ ಡಾಲರ್ ಲಾಭ ಮಾಡಿಕೊಂಡಿದೆ. ವ್ಲಾಡಿಮಿರ್ ಪುಟಿನ್ ನೇತೃತ್ವದ ರಷ್ಯಾ ಈಗ ಮತ್ತಷ್ಟು ಚಿನ್ನ ಖರೀದಿಗೆ ಒಲವು ತೋರುತ್ತಿದೆ. ರಷ್ಯಾದ ಈ ನಡೆಯನ್ನೇ ಅನುಸರಿಸುತ್ತಿರುವ ಚೀನಾ ಕೂಡ ಮಾರುಕಟ್ಟೆಯಲ್ಲಿರುವ ಚಿನ್ನವನ್ನು ಖರೀದಿಸಲು ಮುಂದಾಗಿದೆ.

ಯಾವುದೇ ದೇಶದ ಕೇಂದ್ರೀಯ ಬ್ಯಾಂಕ್ ಹೊಸ ಕರೆನ್ಸಿಯನ್ನು ಮುದ್ರಿಸಬೇಕಾದರೆ, ಅದರ ಹಿಂದೆ ಅಷ್ಟೇ ಮೌಲ್ಯದ ಚಿನ್ನದ ಸಂಗ್ರಹವಿರುವುದು ಅತ್ಯಗತ್ಯ. ಚಿನ್ನದ ಸಂಗ್ರಹ ಹೆಚ್ಚಾದಷ್ಟೂ ಆ ದೇಶದ ಕರೆನ್ಸಿ ಮೌಲ್ಯ ಜಾಗತಿಕ ಮಟ್ಟದಲ್ಲಿ ಗಟ್ಟಿಯಾಗುತ್ತದೆ. ಈ ಕಾರಣಕ್ಕಾಗಿಯೇ ದೊಡ್ಡ ರಾಷ್ಟ್ರಗಳು ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಿ ಚಿನ್ನದ ಮೊರೆ ಹೋಗುತ್ತಿವೆ.

ಭಾರತದ ಸ್ಥಾನಮಾನವೇನು ?

ಚಿನ್ನದ ಸಂಗ್ರಹದಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. ಪ್ರಸ್ತುತ ಭಾರತದ ಬಳಿ 880 ಟನ್ ಚಿನ್ನದ ಸಂಗ್ರಹವಿದ್ದು, ಇದರ ನಿರ್ವಹಣೆಯನ್ನು ಭಾರತೀಯ ರಿಸರ್ವ ಬ್ಯಾಂಕ್ (RBI) ಮಾಡುತ್ತಿದೆ. ವಿಶ್ವದ ಟಾಪ್ 10 ಚಿನ್ನ ಸಂಗ್ರಹ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತವು 4ನೇ ಸ್ಥಾನದಲ್ಲಿದೆ. ಅಮೆರಿಕ, ಚೀನಾ ಮತ್ತು ಜಪಾನ್ ನಂತರದ ಸ್ಥಾನ ಭಾರತದ್ದಾಗಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ಮತ್ತು ಪೂರೈಕೆ ಮಿತವಾಗಿರುವುದರಿಂದ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ. ಹೂಡಿಕೆಯ ದೃಷ್ಟಿಯಿಂದ ಚಿನ್ನವು ಅತ್ಯಂತ ಸುರಕ್ಷಿತ ಆಯ್ಕೆಯಾಗಿದ್ದು, ಬೆಲೆ ಮತ್ತಷ್ಟು ಏರುವ ಮುನ್ನವೇ ಗ್ರಾಹಕರು ಚಿನ್ನ ಖರೀದಿಸಿ.

Exit mobile version