=ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Price) ಮತ್ತೆ ಕುಸಿತ ಕಂಡಿದ್ದು, ಇಂದು (ಜುಲೈ 29) ಮಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಗಣನೀಯ ಇಳಿಕೆಯಾಗಿದೆ. ಹೂಡಿಕೆದಾರರು ಹಣದುಬ್ಬರ ಮತ್ತು ಭವಿಷ್ಯದ ಬಡ್ಡಿದರ ದಿಕ್ಕಿನ ಬಗ್ಗೆ ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ನಿಂದ ಸ್ಪಷ್ಟತೆಗಾಗಿ ಕಾಯುತ್ತಿರುವ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದೆ. ಅಲ್ಲದೆ, ದೃಢವಾದ ಅಮೆರಿಕನ್ ಡಾಲರ್ ವಿದೇಶಿ ಖರೀದಿದಾರರಿಗೆ ಅಮೂಲ್ಯ ಲೋಹಗಳನ್ನು ದುಬಾರಿಯನ್ನಾಗಿಸಿದೆ.
ಭೌಗೋಳಿಕ-ರಾಜಕೀಯದಿಂದ ಚಿನ್ನದ ಬೆಲೆ ಇಳಿಕೆ
ಫೆಬ್ರವರಿಯಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು, ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ಫೆಡರಲ್ ರಿಸರ್ವ್‌ನ ನೀತಿಗಳು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತಿವೆ. ಜೂನ್ 23ರ ನಂತರ ಬಹುತೇಕ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹13,000 – ₹13,500 ನಡುವೆ ಸ್ಥಿರವಾಗಿದೆ. ಆದರೆ, ಕಳೆದ ಎರಡು ದಿನಗಳಲ್ಲಿ ಸತತವಾಗಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಒಂದೆರಡು ದಿನ ಏರುವ ಚಿನ್ನ ಮತ್ತೆ ಕುಸಿಯುತ್ತಿರುವುದು ಗ್ರಾಹಕರಲ್ಲಿ ನಿರಾಳತೆ ಮೂಡಿಸಿದೆ.
ಮಂಗಳೂರಿನಲ್ಲಿ ಚಿನ್ನದ ದರ (ಜುಲೈ 29, 2026)
ಜುಲೈ 29ರಂದು ಬುಧವಾರ ಬೆಳಗ್ಗಿನ ವಹಿವಾಟಿನಲ್ಲಿ ಮಂಗಳೂರಿನ ಚಿನ್ನದ ಬೆಲೆ ಕುಸಿತ ದಾಖಲಿಸಿದೆ
-
24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ): 1 ಗ್ರಾಂಗೆ ₹14,351 (-66 ರೂ. ಕುಸಿತ), 10 ಗ್ರಾಂಗೆ ₹1,43,510
-
22 ಕ್ಯಾರೆಟ್ ಚಿನ್ನ (ಆಭರಣ): 1 ಗ್ರಾಂಗೆ ₹13,155 (-60 ರೂ. ಕುಸಿತ), 10 ಗ್ರಾಂಗೆ ₹1,31,550
-
18 ಕ್ಯಾರೆಟ್ ಚಿನ್ನ: 1 ಗ್ರಾಂಗೆ ₹10,763 (-50 ರೂ. ಕುಸಿತ), 10 ಗ್ರಾಂಗೆ ₹1,07,630
ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು)
| ನಗರ | 24 ಕ್ಯಾರೆಟ್ (₹/ಗ್ರಾಂ) | 22 ಕ್ಯಾರೆಟ್ (₹/ಗ್ರಾಂ) |
|---|---|---|
| ದೆಹಲಿ | 14,366 | 13,170 |
| ಮುಂಬೈ | 14,351 | 13,155 |
| ಬೆಂಗಳೂರು | 14,351 | 13,155 |
| ಅಹ್ಮದಾಬಾದ್ | 14,356 | 13,160 |
| ಚೆನ್ನೈ | 14,351 | 13,155 |
| ಕೋಲ್ಕತ್ತಾ | 14,351 | 13,155 |
| ಹೈದರಾಬಾದ್ | 14,351 | 13,155 |
| ಜೈಪುರ | 14,366 | 13,170 |
| ಚಂಡೀಗಢ | 14,366 | 13,170 |
| ಲಕ್ಷ್ಮೌ | 14,366 | 13,170 |
| ಕೊಚ್ಚಿ | 14,351 | 13,155 |
ಬೆಳ್ಳಿಯ ದರ
ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆಯಾಗಿದೆ. ಗ್ರಾಂ ಬೆಲೆ 235 ರೂ ಆಗಿದ್ದು, ಕೆಜಿ ಬೆಳ್ಳಿ ಬೆಲೆ, 2,35,000 ರೂ ದಾಖಲಾಗಿದೆ. ಮಂಗಳೂರಿನಲ್ಲಿ ಬೆಳ್ಳಿಯ ಮೌಲ್ಯ ಮೇ ಆರಂಭದಲ್ಲಿ ಪ್ರತಿ ಕೆಜಿಗೆ ₹2,90,000 ರಷ್ಟಿತ್ತು. ಮೇ 13ರಂದು ಪ್ರತಿ ಕೆಜಿಗೆ ₹3,30,000ಕ್ಕೆ ಏರಿಕೆಯಾಗಿತ್ತು. ಜೂನ್‌ನಲ್ಲಿ ಸ್ವಲ್ಪ ಏರಿಳಿತ ಕಂಡುಬಂದು ಪ್ರತಿ ಕೆಜಿಗೆ ₹2,40,000 ಗೆ ಬಂದು ನಿಂತಿತ್ತು. ಜುಲೈ 11ರಿಂದ ಬೆಳ್ಳಿಯ ದರ ಬಹುತೇಕ ₹2,35,000 ಗೆ ಸ್ಥಿರವಾಗಿತ್ತು. ಇಂದು ಮಂಗಳೂರಿನಲ್ಲಿ ಬೆಳ್ಳಿಯ ದರ ಪ್ರತಿ ಕೆಜಿಗೆ ₹2,38,500 ರೂ.ನಲ್ಲಿ ಸ್ಥಿರವಾಗಿದೆ.
ಫೆಡರಲ್ ರಿಸರ್ವ್ ನೀತಿ ಯಾವಾಗ?
ಈ ವಾರ ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ತನ್ನ ನೀತಿ ಪ್ರಕಟಿಸಲಿದೆ. ಹಣದುಬ್ಬರ ಮತ್ತು ಬಡ್ಡಿದರದ ಕುರಿತು ಸ್ಪಷ್ಟತೆ ಬರುವವರೆಗೆ ಅಮೂಲ್ಯ ಲೋಹಗಳ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಕೆ ಸೀಮಿತವಾಗಿರಲಿದೆ. ಹೂಡಿಕೆದಾರರು ಫೆಡ್‌ನ ಹೇಳಿಕೆಗಾಗಿ ಕಾಯುತ್ತಿದ್ದಾರೆ.
ಗ್ರಾಹಕರಿಗೆ ಸಲಹೆ
ಚಿನ್ನದ ಬೆಲೆಯಲ್ಲಿನ ಇಳಿಕೆಯು ಖರೀದಿದಾರರಿಗೆ ಸಂತಸ ತಂದಿದೆ. ವಿವಾಹ ಋತು ಮುಗಿದ ನಂತರವೂ ಚಿನ್ನದ ಬೆಲೆ ಕುಸಿದಿರುವುದು ಆಭರಣ ಖರೀದಿಗೆ ಅನುಕೂಲಕರ ಸಮಯವಾಗಿದೆ. ಆದರೆ, ಚಿನ್ನದ ಬೆಲೆಯಲ್ಲಿ ಸ್ಥಿರತೆ ಇಲ್ಲದ ಕಾರಣ, ದೊಡ್ಡ ಮೊತ್ತದ ಹೂಡಿಕೆಗೆ ಮುನ್ನ ಮಾರುಕಟ್ಟೆಯ ಮಾಹಿತಿಯನ್ನು ಅಧ್ಯಯನ ಮಾಡುವುದು ಸೂಕ್ತ. ಬೆಳ್ಳಿ ತುಲನಾತ್ಮಕವಾಗಿ ಸ್ಥಿರವಾಗಿದ್ದು, ಅಲ್ಪಾವಧಿಯ ಹೂಡಿಕೆಗೆ ಪರಿಗಣಿಸಬಹುದು.
