ಚಿನ್ನ ಖರೀದಿಗೆ ಸರಿಯಾದ ಸಮಯವೇ? ಇಂದಿನ ದರ ತಿಳಿದುಕೊಳ್ಳಿ!

Untitled design 2025 08 29t103118.246

ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ ಕೆಲವು ವಾರಗಳಿಂದ ಚಿನ್ನದ ಬೆಲೆಯಲ್ಲಿ ಸಾವಿರಾರು ರೂಪಾಯಿಗಳ ಏರಿಕೆ ಕಂಡುಬಂದಿದ್ದು, ಇದೀಗ ಶುಕ್ರವಾರವೂ ಸತತ ನಾಲ್ಕನೇ ದಿನವೂ ಬೆಲೆ ಜಿಗಿತ ಕಂಡಿದೆ. ಈ ಏರಿಕೆಯಿಂದ ಆಭರಣ ಖರೀದಿದಾರರ ಜೇಬಿಗೆ ಭಾರೀ ಹೊರೆಯಾಗಿದೆ.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇಕಡಾ 50ರಷ್ಟು ಸುಂಕ ಹೇರಿರುವುದು ಟ್ರೇಡ್ ಟೆನ್ಷನ್‌ಗೆ ಕಾರಣವಾಗಿದೆ. ಇದರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಈಕ್ವಿಟಿಗಳನ್ನು ಮಾರಾಟ ಮಾಡಿ, ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಒಲವು ತೋರುತ್ತಿದ್ದಾರೆ. ಇದರ ಪರಿಣಾಮವಾಗಿ ಚಿನ್ನದ ಬೆಲೆ ದುಬಾರಿಯಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,02,610 ರೂಪಾಯಿಗಳಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 94,060 ರೂಪಾಯಿಗಳಷ್ಟಿದೆ. ಇನ್ನು ಬೆಳ್ಳಿಯ ಬೆಲೆ ಕೆಜಿಗೆ 100 ರೂಪಾಯಿ ಕಡಿಮೆಯಾಗಿದ್ದು, 1,19,000 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ.

ದೆಹಲಿಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 94,210 ರೂಪಾಯಿಗಳಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,02,760 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ. ಬೆಳ್ಳಿಯ ಬೆಲೆ ಕೆಜಿಗೆ 1,19,900 ರೂಪಾಯಿಗಳಾಗಿದೆ.

ಇತರೆ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ಭಾರತದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂಗೆ) ಮತ್ತು ಬೆಳ್ಳಿಯ ಬೆಲೆ (ಕೆಜಿಗೆ) ಈ ಕೆಳಗಿನಂತಿದೆ:

ನಗರ

24 ಕ್ಯಾರೆಟ್ ಚಿನ್ನ (10 ಗ್ರಾಂ)

ಬೆಳ್ಳಿ (ಕೆಜಿ)

ಬೆಂಗಳೂರು

1,02,610 ರೂ.

1,19,000 ರೂ.

ಮುಂಬೈ

1,02,610 ರೂ.

1,19,900 ರೂ.

ಚೆನ್ನೈ

1,02,610 ರೂ.

1,29,900 ರೂ.

ಕೋಲ್ಕತ್ತಾ

1,02,610 ರೂ.

1,19,900 ರೂ.

ನಾಗ್ಪುರ

1,02,610 ರೂ.

1,19,900 ರೂ.

ಪಾಟ್ನಾ

1,02,660 ರೂ.

1,19,900 ರೂ.

ಸೂರತ್

1,02,660 ರೂ.

1,19,900 ರೂ.

ಚಂಡೀಗಢ

1,02,760 ರೂ.

1,19,900 ರೂ.

ಲಕ್ನೋ

1,02,760 ರೂ.

1,19,900 ರೂ.

ಕೇರಳ

1,02,610 ರೂ.

1,29,900 ರೂ.

ಬೆಲೆ ಏರಿಕೆಗೆ ಕಾರಣಗಳು

ಯುಎಸ್‌ನಿಂದ ಹೇರಲಾದ ಆಮದು ಸುಂಕದಿಂದ ಟ್ರೇಡ್ ಟೆನ್ಷನ್ ಹೆಚ್ಚಾಗಿದ್ದು, ಷೇರು ಮಾರುಕಟ್ಟೆಯಲ್ಲಿ ಅಸ್ಥಿರತೆ ಕಂಡುಬಂದಿದೆ. ಇದರಿಂದ ಹೂಡಿಕೆದಾರರು ಚಿನ್ನದಂತಹ ಸುರಕ್ಷಿತ ಆಯ್ಕೆಗಳತ್ತ ಒಲವು ತೋರುತ್ತಿದ್ದಾರೆ. ಡಾಲರ್ ಸೂಚ್ಯಂಕದ ಏರಿಳಿತವು ಇತರ ಕರೆನ್ಸಿಗಳ ಮೇಲೆ ಪರಿಣಾಮ ಬೀರಿದ್ದು, ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.

Exit mobile version