ಸತತ ಎರಡನೇ ದಿನವೂ ಏರಿಕೆಯಾದ ಚಿನ್ನದ ಬೆಲೆ: ಇಂದಿನ ದರ ಎಷ್ಟಿದೆ?

Your paragraph text (78)

ಚಿನ್ನದ ಬೆಲೆಯಲ್ಲಿ ಸತತ ಎರಡನೇ ದಿನವೂ ಏರಿಕೆ ಕಂಡುಬಂದಿದೆ. ಕಳೆದ ವಾರ ನಿರಂತರವಾಗಿ ಇಳಿಕೆಯಾಗುತ್ತಿದ್ದ ಬಂಗಾರದ ದರದಲ್ಲಿ ಇದೀಗ ಮತ್ತೆ ಏರಿಕೆಯ ಪ್ರವೃತ್ತಿ ಕಾಣಿಸಿಕೊಂಡಿದೆ. ವಾರಾಂತ್ಯದಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಹೆಚ್ಚಾಗಿದ್ದರೆ, ಅಕ್ಟೋಬರ್ 26ರ ಸೋಮವಾರ ಮತ್ತೆ 15 ರೂಪಾಯಿ ಏರಿಕೆಯಾಗಿದೆ. ಮತ್ತೊಂದೆಡೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿಯೂ ತುಸು ಹೆಚ್ಚಳ ಕಂಡುಬಂದಿದೆ.

ಚಿನ್ನ ಖರೀದಿಸಲು ಯೋಜಿಸುತ್ತಿರುವ ಗ್ರಾಹಕರು ಮಾರುಕಟ್ಟೆಯ ಬೆಲೆ ಬದಲಾವಣೆಗಳ ಮೇಲೆ ನಿಗಾ ಇಟ್ಟಿದ್ದಾರೆ. ಭಾರತದಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,30,850 ರೂಪಾಯಿ ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,42,750 ರೂಪಾಯಿ ಇದೆ. ಬೆಳ್ಳಿ ಬೆಲೆಯೂ ಗಮನ ಸೆಳೆಯುತ್ತಿದ್ದು, ಭಾರತದಲ್ಲಿ 100 ಗ್ರಾಂ ಬೆಳ್ಳಿಯ ದರ 22,000 ರೂಪಾಯಿ ಆಗಿದೆ.

ಭಾರತದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ

ಅಕ್ಟೋಬರ್ 26ರಂದು ಭಾರತದಲ್ಲಿ 18, 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಹಾಗೂ ಬೆಳ್ಳಿಯ ದರ ಈ ಕೆಳಗಿನಂತಿದೆ.

1 ಗ್ರಾಂ ಬೆಲೆ 10 ಗ್ರಾಂ ಬೆಲೆ
24 ಕ್ಯಾರಟ್ ಚಿನ್ನ ₹14,275 ₹1,42,750
22 ಕ್ಯಾರಟ್ ಚಿನ್ನ ₹13,085 ₹1,30,850
18 ಕ್ಯಾರಟ್ ಚಿನ್ನ ₹10,706 ₹1,07,060
ಬೆಳ್ಳಿಯ ಪ್ರಮಾಣ ಬೆಲೆ
1 ಗ್ರಾಂ ₹220
10 ಗ್ರಾಂ ₹2,200
100 ಗ್ರಾಂ ₹22,000
1 ಕೆ.ಜಿ. ₹2,20,000

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ 13,085 ರೂಪಾಯಿ ಇದ್ದರೆ, ದೆಹಲಿ, ಜೈಪುರ ಮತ್ತು ಲಕ್ನೋದಲ್ಲಿ 13,100 ರೂಪಾಯಿ ಇದೆ.

ನಗರ 1 ಗ್ರಾಂ ಬೆಲೆ
ಬೆಂಗಳೂರು ₹13,085
ಚೆನ್ನೈ ₹13,085
ಮುಂಬೈ ₹13,085
ದೆಹಲಿ ₹13,100
ಕೋಲ್ಕತಾ ₹13,085
ಕೇರಳ ₹13,085
ಅಹ್ಮದಾಬಾದ್ ₹13,090
ಜೈಪುರ ₹13,100
ಲಕ್ನೋ ₹13,100
ಭುವನೇಶ್ವರ್ ₹13,085

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ

ಬೆಂಗಳೂರಿನಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ 220 ರೂಪಾಯಿ ಇದೆ. ಚೆನ್ನೈ ಮತ್ತು ಕೇರಳದಲ್ಲಿ ಪ್ರತಿ ಗ್ರಾಂ ಬೆಳ್ಳಿಗೆ 225 ರೂಪಾಯಿ ನಿಗದಿಯಾಗಿದೆ. ಉಳಿದ ಹಲವು ಪ್ರಮುಖ ನಗರಗಳಲ್ಲಿ ಪ್ರತಿ ಗ್ರಾಂ ಬೆಳ್ಳಿಯ ದರ 220 ರೂಪಾಯಿ ಇದೆ.

ನಗರ 1 ಗ್ರಾಂ ಬೆಳ್ಳಿ ಬೆಲೆ
ಬೆಂಗಳೂರು ₹220
ಚೆನ್ನೈ ₹225
ಮುಂಬೈ ₹220
ದೆಹಲಿ ₹220
ಕೋಲ್ಕತಾ ₹220
ಕೇರಳ ₹225
ಅಹ್ಮದಾಬಾದ್ ₹220
ಜೈಪುರ ₹220
ಲಕ್ನೋ ₹220
ಭುವನೇಶ್ವರ್ ₹225
ಪುಣೆ ₹220

 

Exit mobile version