ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸತತವಾಗಿ ಕುಸಿತ ಕಂಡಿದ್ದ ಚಿನ್ನದ ಬೆಲೆಯಲ್ಲಿ ವಾರಾಂತ್ಯದಲ್ಲಿ ಅಲ್ಪ ಏರಿಕೆ ದಾಖಲಾಗಿದೆ. ಅಕ್ಟೋಬರ್ 25ರಂದು ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಹೆಚ್ಚಳವಾಗಿದೆ. ಆದರೂ ಈ ವಾರ ಒಟ್ಟಾರೆಯಾಗಿ ಬಂಗಾರದ ದರದಲ್ಲಿ ಸುಮಾರು 465 ರೂಪಾಯಿ ಇಳಿಕೆಯಾಗಿದೆ.
ಕಳೆದ ಒಂದು ವರ್ಷದ ಅವಧಿಯನ್ನು ಗಮನಿಸಿದರೆ, 2025ರ ಅಕ್ಟೋಬರ್ 25ರಿಂದ 2026ರ ಅಕ್ಟೋಬರ್ 25ರವರೆಗೆ ಭಾರತದಲ್ಲಿ ಚಿನ್ನದ ಬೆಲೆ ಸುಮಾರು ಶೇ. 13ರಷ್ಟು ಏರಿಕೆಯಾಗಿದ. ಮತ್ತೊಂದೆಡೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಮತ್ತು ಸ್ಪಾಟ್ ಸಿಲ್ವರ್ ದರಗಳು ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟು?
ಇಂದು, ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 1,30,700 ರೂಪಾಯಿ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,42,580 ರೂಪಾಯಿ ಆಗಿದೆ.
ಬೆಳ್ಳಿಯ ದರವೂ ಗ್ರಾಹಕರ ಗಮನ ಸೆಳೆಯುತ್ತಿದೆ. ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ 22,000 ರೂಪಾಯಿ ಇದ್ದು, ಪ್ರತಿ ಗ್ರಾಂಗೆ 220 ರೂಪಾಯಿಯಾಗಿದೆ. ಚೆನ್ನೈ ಮತ್ತು ಕೇರಳದಂತಹ ಕೆಲವು ಪ್ರದೇಶಗಳಲ್ಲಿ ಪ್ರತಿ ಗ್ರಾಂ ಬೆಳ್ಳಿಯ ಬೆಲೆ 225 ರೂಪಾಯಿ ಇದೆ.
ಭಾರತದಲ್ಲಿ 18, 22 ಮತ್ತು 24 ಕ್ಯಾರಟ್ ಚಿನ್ನದ ದರ
ಇಂದು ಒಂದು ಗ್ರಾಂ 24 ಕ್ಯಾರಟ್ ಚಿನ್ನಕ್ಕೆ 14,258 ರೂಪಾಯಿ, 22 ಕ್ಯಾರಟ್ ಚಿನ್ನಕ್ಕೆ 13,070 ರೂಪಾಯಿ ಹಾಗೂ 18 ಕ್ಯಾರಟ್ ಚಿನ್ನಕ್ಕೆ 10,694 ರೂಪಾಯಿ ಇದೆ.
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ
ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ ಹಾಗೂ ಕೇರಳದಲ್ಲಿ 22 ಕ್ಯಾರಟ್ ಚಿನ್ನದ ಪ್ರತಿ ಗ್ರಾಂ ಬೆಲೆ 13,070 ರೂಪಾಯಿ. ದೆಹಲಿ, ಜೈಪುರ ಮತ್ತು ಲಕ್ನೋದಲ್ಲಿ 13,085 ರೂಪಾಯಿ, ಅಹಮದಾಬಾದ್‌ನಲ್ಲಿ 13,075 ರೂಪಾಯಿ ಇದೆ.
ವಿದೇಶಗಳಲ್ಲಿ ಚಿನ್ನದ ದರ ಹೇಗಿದೆ?
ಇಂದು, ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಮಲೇಷ್ಯಾದಲ್ಲಿ ಸುಮಾರು 12,557 ರೂಪಾಯಿ, ದುಬೈನಲ್ಲಿ 12,441 ರೂಪಾಯಿ, ಅಮೆರಿಕದಲ್ಲಿ 12,539 ರೂಪಾಯಿ ಹಾಗೂ ಸಿಂಗಾಪುರದಲ್ಲಿ 13,042 ರೂಪಾಯಿ ಇದೆ. ಕತಾರ್ 12,588 ರೂ, ಸೌದಿ ಅರೇಬಿಯಾ 12,553 ರೂ, ಓಮನ್ 12,631ರೂ. ಮತ್ತು ಕುವೇತ್‌ನಲ್ಲಿ12,732 ರೂ. ಇದೆ.
ಒಟ್ಟಿನಲ್ಲಿ, ಅಕ್ಟೋಬರ್ 25ರಂದು ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡುಬಂದಿದ್ದರೂ, ವಾರದ ಲೆಕ್ಕಾಚಾರದಲ್ಲಿ ಇಳಿಕೆ ದಾಖಲಾಗಿದೆ.
