ವಿಕೇಂಡ್‌ನಲ್ಲಿ ಏರಿಕೆ ಕಂಡ ಬಂಗಾರದ ಬೆಲೆ: ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ದರ ವಿವರ

Untitled design 2026 06 13T125035.360

ನವದೆಹಲಿ/ಬೆಂಗಳೂರು: ಈ ವಾರವಿಡೀ ಕುಸಿತದ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಾರಾಂತ್ಯದಲ್ಲಿ (ಜೂನ್ 13, ಶನಿವಾರ) ದಿಢೀರ್ ಏರಿಕೆ ಕಂಡಿವೆ. ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮದ ಮಾತುಕತೆ ನಡೆಯುವ ಸಾಧ್ಯತೆಯ ಹಿನ್ನೆಲೆ ಡಾಲರ್ ಮೌಲ್ಯ ಕುಸಿದಿರುವುದು ಚಿನ್ನದ ಮೇಲಿನ ಹೂಡಿಕೆ ಮತ್ತು ಖರೀದಿಯನ್ನು ಹೆಚ್ಚಿಸಿದೆ.

ಏಕೆ ಏರಿಕೆಯಾಯಿತು?

ಜಾಗತಿಕವಾಗಿ ಅಮೆರಿಕನ್ ಡಾಲರ್ ಬಲಹೀನಗೊಂಡಿದ್ದು, ಚಿನ್ನದಂಥ ಸುರಕ್ಷಿತ ಆಸ್ತಿಗಳತ್ತ ಹೂಡಿಕೆದಾರರ ಒಲವು ಹೆಚ್ಚಾಗಿದೆ. ಇರಾನ್-ಅಮೆರಿಕ ಉದ್ವಿಗ್ನತೆ ಕಡಿಮೆಯಾಗುವ ಸಂಕೇತಗಳು ದೊರಕುತ್ತಿದ್ದಂತೆಯೇ ಡಾಲರ್ ವಿರುದ್ಧ ಇತರ ಕರೆನ್ಸಿಗಳ ಮೌಲ್ಯ ಏರಿಕೆಯಾಗಿದೆ. ಇದರ ನೇರ ಪರಿಣಾಮ ಚಿನ್ನದ ಬೆಲೆ ಏರಿದೆ. 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ ಇನ್ನೂ 15,000 ರೂ. ಒಳಗೇ ಇದೆ. ಕಳೆದ ಜನವರಿಯಲ್ಲಿ ದಾಖಲೆಯ 18,000 ರೂ.ಗೆ ಏರಿದ್ದ ಚಿನ್ನ ಸತತವಾಗಿ ಇಳಿಕೆಯಾಗುತ್ತಾ ಬಂದಿದ್ದು ಖರೀದಿದಾರರಿಗೆ ಸಂತಸ ಮೂಡಿಸಿದೆ.

ಬೆಂಗಳೂರು ಮತ್ತು ಮಂಗಳೂರಿನಲ್ಲಿ ಇಂದಿನ ದರ
ಪ್ರಮುಖ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು)

(24 ಕ್ಯಾರೆಟ್ / 22 ಕ್ಯಾರೆಟ್)

ನಗರ 24 ಕ್ಯಾರೆಟ್ (₹/ಗ್ರಾಂ) 22 ಕ್ಯಾರೆಟ್ (₹/ಗ್ರಾಂ)
ದಿಲ್ಲಿ 14,923 (+341) 13,680 (+45)
ಮುಂಬೈ 14,908 (+50) 13,665 (+45)
ಚೆನ್ನೈ 15,056 (+1) 13,801 (+1)
ಕೋಲ್ಕತ್ತಾ 14,908 (+50) 13,665 (+45)
ಅಹಮದಾಬಾದ್ 14,913 (+50) 13,670 (+45)
ಹೈದರಾಬಾದ್ 14,908 (+50) 13,665 (+45)
ಜೈಪುರ 14,923 (+341) 13,680 (+45)
ಚಂಡೀಗಢ 14,923 (+341) 13,680 (+45)
ಲಕ್ನೋ 14,923 (+341) 13,680 (+45)

ದಿಲ್ಲಿ, ಜೈಪುರ, ಚಂಡೀಗಢ, ಲಕ್ನೋಗಳಲ್ಲಿ 24 ಕ್ಯಾರೆಟ್ ಚಿನ್ನಕ್ಕೆ 341 ರೂ. ಏರಿಕೆಯಾಗಿದೆ. ಚೆನ್ನೈನಲ್ಲಿ ಕೇವಲ 1 ರೂ. ಏರಿಕೆ ಮಾತ್ರವಾಗಿದೆ.

ಬೆಳ್ಳಿಯ ಬೆಲೆ ಸ್ಥಿರ

ಬೆಳ್ಳಿಯ ಮೌಲ್ಯ ಪ್ರತಿ ಕೆಜಿಗೆ 2,60,000 ರೂ.ಗೆ ಸ್ಥಿರವಾಗಿದೆ. ಮಾರ್ಚ್-ಏಪ್ರಿಲ್‌‌ನಲ್ಲಿ 2,55,000 ರೂ. ಸುತ್ತಿದ್ದ ಬೆಳ್ಳಿ, ಮೇ ಆರಂಭದಲ್ಲಿ 2,90,000 ರೂ.ವರೆಗೆ ಏರಿತ್ತು. ನಂತರ ಸ್ಥಿರವಾಗಿದ್ದು, ಈ ವಾರ ಬುಧವಾರ ಕುಸಿದು 2,50,000 ರೂ.ಗೆ ಬಂದಿತ್ತು. ಶುಕ್ರವಾರ ಮತ್ತೆ ಚೇತರಿಸಿಕೊಂಡು 2,60,000 ರೂ. ತಲುಪಿದೆ. ಇದೀಗ ಶನಿವಾರವೂ ಅದೇ ದರದಲ್ಲಿ ಸ್ಥಿರವಾಗಿದೆ.

Exit mobile version