ಆಭರಣ ಪ್ರಿಯರಿಗೆ ಶಾಕ್; ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ

1425 (4)

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಹೂಡಿಕೆದಾರರು ಇಂದು ಬೆಳಗಿನ ಜಾವದಿಂದಲೇ ಆಘಾತಕ್ಕೆ ಒಳಗಾದರು. ಕಾರಣ, ಕಳೆದ ಕೆಲ ದಿನಗಳಿಂದ ನಿರಂತರ ಇಳಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿ ಇಂದು (ಬುಧವಾರ) ಭಾರೀ ಏರಿಕೆ ಕಂಡುಬಂದಿದ್ದು, ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ದಾಖಲೆ ಮಟ್ಟಕ್ಕೆ ತಲುಪಿದೆ. ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ ₹90,200 ರುಪಾಯಿ ತಲುಪಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹98,400 ರುಪಾಯಿ ಆಗಿದೆ.

ಇದೇ ರೀತಿ, ಬೆಳ್ಳಿ ಬೆಲೆಯೂ ಭಾರೀ ಏರಿಕೆಯಾಗಿದ್ದು, 100 ಗ್ರಾಂ ಬೆಳ್ಳಿಗೆ ₹10,900 ರುಪಾಯಿ ಆಗಿದೆ. ವಿಶೇಷವಾಗಿ ಚೆನ್ನೈ ಮತ್ತು ಕೇರಳದಲ್ಲಿ ಬೆಳ್ಳಿ ಬೆಲೆ ₹11,900 ರುಪಾಯಿಗೆ ತಲುಪಿದೆ.

ಇಂದಿನ ಚಿನ್ನದ ಬೆಲೆ ವಿವರ (ಜೂನ್ 11, 2025)
ಇಂದಿನ ಬೆಳ್ಳಿ ಬೆಲೆ (10 ಗ್ರಾಂ): ₹1,090
ವಿಭಿನ್ನ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ)
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ)
ಬೆಳ್ಳಿ ಬೆಲೆ (100 ಗ್ರಾಂ)
 ಏರಿಕೆಯ ಹಿಂದಿನ ಕಾರಣಗಳು

ವಿಶ್ವ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಬಲಿಷ್ಠಗೊಂಡಿದ್ದು, ಇಂಧನ ಬೆಲೆಗಳು ಹಾಗೂ ಭೌಗೋಳಿಕ ಮತ್ತು ಆರ್ಥಿಕ ಅನಿಶ್ಚಿತತೆ ಕಾರಣಗಳಾಗಿ ಚಿನ್ನದ ಮೇಲೆ ಹೂಡಿಕೆದಾರರ ಭರವಸೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಚಿನ್ನದ ಬೇಡಿಕೆ ಹೆಚ್ಚು ಆಗಿದ್ದು, ಬೆಲೆಯು ಸಹ ಸಹಜವಾಗಿ ಏರಿದೆ.

ಹಾಗೆಯೇ ಬೆಳ್ಳಿಯು ಕೈಗಾರಿಕಾ ಉತ್ಪಾದನೆಯಲ್ಲಿ ಹಾಗೂ ವಿನ್ಯಾಸ ಗೃಹೋಪಯೋಗಿ ಉತ್ಪನ್ನಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದರಿಂದ, ಆ ಬೇಡಿಕೆಯಿಂದಾಗಿ ಬೆಳ್ಳಿ ಬೆಲೆಯೂ ದಾಖಲೆ ಮಟ್ಟಕ್ಕೆ ತಲುಪಿದೆ.

 

Exit mobile version