ನವದೆಹಲಿ, ಜೂನ್ 16: ಸತತ ಮೂರು-ನಾಲ್ಕು ದಿನಗಳಿಂದ ಮುಂದುವರಿದಿದ್ದ ಚಿನ್ನದ ಬೆಲೆ ಏರಿಕೆ ಇಂದು ಕೊಂಚ ನಿರಾಳತೆ ತಂದಿದೆ. ಮಂಗಳವಾರ ಚಿನ್ನದ ದರ ಗ್ರಾಮ್‌ಗೆ 15 ರೂಪಾಯಿಗಳಷ್ಟು ಕಡಿಮೆಯಾಗಿದ್ದು, ಬೆಳ್ಳಿ ಬೆಲೆ ಸ್ಥಿರವಾಗಿ ಮುಂದುವರಿದಿದೆ. ಕಳೆದ ಮೂರು ದಿನಗಳಲ್ಲಿ 500 ರೂಪಾಯಿಗಳಿಗೂ ಹೆಚ್ಚು ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಸ್ವಲ್ಪ ಇಳಿಕೆಯಾಗಿದ್ದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾತ್ರ ಚಿನ್ನದ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ.
ಇಂದಿನ ಚಿನ್ನದ ದರ ಏನು?
ಭಾರತೀಯ ಮಾರುಕಟ್ಟೆಯಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 1,38,750 ರೂಪಾಯಿಗಳಿಗೆ ಇಳಿದಿದ್ದು, 24 ಕ್ಯಾರಟ್‌ನ ಅಪರಂಜಿ ಚಿನ್ನದ ದರ 1,51,370 ರೂಪಾಯಿಗಳಿಗೆ ತಲುಪಿದೆ. ಗ್ರಾಂ ಆಧಾರದಲ್ಲಿ ನೋಡುವುದಾದರೆ, 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ 15,137 ರೂಪಾಯಿ ಇದ್ದರೆ, 22 ಕ್ಯಾರಟ್ ಚಿನ್ನದ ಒಂದು ಗ್ರಾಂ ದರ 13,875 ರೂಪಾಯಿ ಇದೆ. 18 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ 11,353 ರೂಪಾಯಿ ಇದ್ದು, ಬೆಳ್ಳಿಯ ದರ ಗ್ರಾಮ್‌ಗೆ 265 ರೂಪಾಯಿಯಲ್ಲಿ ಸ್ಥಿರವಾಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 15,137 ರೂಪಾಯಿ ಇದ್ದು, 22 ಕ್ಯಾರಟ್ ಆಭರಣ ಚಿನ್ನದ ದರ 13,875 ರೂಪಾಯಿ ಇದೆ. ಬೆಳ್ಳಿಯ ಬೆಲೆ ಗ್ರಾಮ್ಗೆ 265 ರೂಪಾಯಿ ಇದ್ದು, 100 ಗ್ರಾಂ ಬೆಳ್ಳಿಯ ಬೆಲೆ 26,500 ರೂಪಾಯಿ ಆಗಿದೆ. ತಮಿಳುನಾಡು, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬೆಳ್ಳಿಯ ಬೆಲೆ ಗ್ರಾಮ್‌ಗೆ 275 ರೂಪಾಯಿಯಷ್ಟಿದ್ದು, ಇತರೆಡೆಗಳಿಗಿಂತ ಸ್ವಲ್ಪ ಹೆಚ್ಚಾಗಿದೆ.
ನಗರಗಳಲ್ಲಿ ಚಿನ್ನದ ಬೆಲೆ (22 ಕ್ಯಾರಟ್ – 1 ಗ್ರಾಮ್ಗೆ)
-
ಬೆಂಗಳೂರು: 13,875 ರೂ
-
ಚೆನ್ನೈ: 14,060 ರೂ
-
ಮುಂಬೈ: 13,875 ರೂ
-
ದೆಹಲಿ: 13,890 ರೂ
-
ಕೋಲ್ಕತಾ: 13,875 ರೂ
-
ಕೇರಳ: 13,875 ರೂ
-
ಅಹ್ಮದಾಬಾದ್: 13,880 ರೂ
-
ಜೈಪುರ್: 13,890 ರೂ
-
ಲಕ್ನೋ: 13,890 ರೂ
-
ಭುವನೇಶ್ವರ್: 13,875 ರೂ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ
ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಅಮೆರಿಕದಲ್ಲಿ ಗ್ರಾಮ್‌ಗೆ 143.50 ಡಾಲರ್ (ಸುಮಾರು 13,577 ರೂಪಾಯಿ), ದುಬೈನಲ್ಲಿ 521.25 ಡಿರಾಮ್ (13,423 ರೂಪಾಯಿ), ಸಿಂಗಾಪುರದಲ್ಲಿ 189.50 ಸಿಂಗಾಪುರ್ ಡಾಲರ್ (13,972 ರೂಪಾಯಿ) ದರವಿದೆ. ಮಲೇಷ್ಯಾದಲ್ಲಿ 577 ರಿಂಗಿಟ್ (13,433 ರೂಪಾಯಿ), ಕತಾರ್ನಲ್ಲಿ 526 ಕತಾರಿ ರಿಯಾಲ್ (13,648 ರೂಪಾಯಿ), ಸೌದಿ ಅರೇಬಿಯಾದಲ್ಲಿ 541 ಸೌದಿ ರಿಯಾಲ್ (13,637 ರೂಪಾಯಿ), ಓಮನ್ನಲ್ಲಿ 55.30 ಒಮಾನಿ ರಿಯಾಲ್ (13,587 ರೂಪಾಯಿ) ಮತ್ತು ಕುವೇತ್‌ನಲ್ಲಿ 44.20 ಕುವೇತಿ ದಿನಾರ್ (13,621 ರೂಪಾಯಿ) ದರವಿದೆ.
ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್ಗೆ)
-
ಬೆಂಗಳೂರು: 265 ರೂ
-
ಚೆನ್ನೈ: 275 ರೂ
-
ಮುಂಬೈ: 265 ರೂ
-
ದೆಹಲಿ: 265 ರೂ
-
ಕೋಲ್ಕತಾ: 265 ರೂ
-
ಕೇರಳ: 275 ರೂ
-
ಅಹ್ಮದಾಬಾದ್: 265 ರೂ
-
ಜೈಪುರ್: 265 ರೂ
-
ಲಕ್ನೋ: 265 ರೂ
-
ಭುವನೇಶ್ವರ್: 275 ರೂ
-
ಪುಣೆ: 265 ರೂ
ಚಿನ್ನದ ಬೆಲೆ ಏರಿಳಿತಕ್ಕೆ ಕಾರಣವೇನು?
ಚಿನ್ನದ ಬೆಲೆ ಏರಿಳಿತಕ್ಕೆ ಜಾಗತಿಕ ಆರ್ಥಿಕ ಪರಿಸ್ಥಿತಿ, ಡಾಲರ್ ಮೌಲ್ಯ, ಹೂಡಿಕೆದಾರರ ಖರೀದಿ-ಮಾರಾಟ, ಚಿನ್ನದ ಆಮದು ಸುಂಕ ಮತ್ತು ಅಂತಾರಾಷ್ಟ್ರೀಯ ಘಟನೆಗಳು ಪ್ರಮುಖ ಕಾರಣಗಳಾಗಿವೆ. ಕಳೆದ ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಏರಿಳಿತ ಕಂಡುಬರುತ್ತಿದ್ದು, ಹೂಡಿಕೆದಾರರು ಮತ್ತು ಆಭರಣ ಖರೀದಿದಾರರು ಮಾರುಕಟ್ಟೆಯ ಬೆಳವಣಿಗೆಗಳನ್ನು ಗಮನಿಸುವಂತೆ ತಜ್ಞರು ಸಲಹೆ ನೀಡುತ್ತಿದ್ದಾರೆ.
