ವಾರಾಂತ್ಯದಲ್ಲಿ ಇಳಿಕೆಯಾಗಿದ್ದ ಚಿನ್ನದ ಬೆಲೆ (Gold Rate) ಸೋಮವಾರವೂ ಅದೇ ಹಾದಿ ಹಿಡಿದಿದೆ. ಇಂದು ಬಂಗಾರದ ದರ ಪ್ರತಿ ಗ್ರಾಮ್‌ಗೆ 75 ರೂ.ಗಳಷ್ಟು ತಗ್ಗಿದೆ. ವಿದೇಶ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬಂದಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ತುಸು ರಿಲೀಫ್ ಸಿಕ್ಕಿದೆ. ಮತ್ತೊಂದೆಡೆ, ಕಳೆದ ಎರಡು ವಾರಗಳಿಂದ ಬೆಳ್ಳಿ ಬೆಲೆಯಲ್ಲಿ (Silver Price) ಯಾವುದೇ ಬದಲಾವಣೆಯಾಗಿಲ್ಲ ಮತ್ತು ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 1,43,200 ರೂ.ಗಳಾಗಿದ್ದರೆ, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 1,56,220 ರೂ.ಗಳಷ್ಟಿದೆ. ಹಾಗೆಯೇ, 100 ಗ್ರಾಮ್ ಬೆಳ್ಳಿ ಬೆಲೆ 28,000 ರೂ.ಗಳಲ್ಲಿ ಮುಂದುವರಿದಿದೆ.
ಭಾರತದಲ್ಲಿ ಇಂದಿನ ಪ್ರಮುಖ ಚಿನ್ನ ಮತ್ತು ಬೆಳ್ಳಿ ದರಗಳು (1 ಗ್ರಾಮ್‌ಗೆ) :
-
24 ಕ್ಯಾರಟ್ ಚಿನ್ನದ ಬೆಲೆ: 15,622 ರೂ.
-
22 ಕ್ಯಾರಟ್ ಚಿನ್ನದ ಬೆಲೆ: 14,320 ರೂ.
-
18 ಕ್ಯಾರಟ್ ಚಿನ್ನದ ಬೆಲೆ: 11,717 ರೂ.
-
ಬೆಳ್ಳಿ ಬೆಲೆ: 280 ರೂ.
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನ ಮತ್ತು ಬೆಳ್ಳಿ ಬೆಲೆ (1 ಗ್ರಾಮ್‌ಗೆ)
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ದರಗಳ ಪಟ್ಟಿ ಈ ಕೆಳಗಿನಂತಿದೆ:
| ನಗರ | 22 ಕ್ಯಾರಟ್ ಚಿನ್ನ (ರೂ.) | ಬೆಳ್ಳಿ ದರ (ರೂ.) |
| ಬೆಂಗಳೂರು | 14,320 | 280 |
| ಚೆನ್ನೈ | 14,500 | 290 |
| ಮುಂಬೈ | 14,320 | 280 |
| ದೆಹಲಿ | 14,335 | 280 |
| ಕೋಲ್ಕತಾ | 14,320 | 280 |
| ಕೇರಳ | 14,320 | 290 |
| ಅಹ್ಮದಾಬಾದ್ | 14,325 | 280 |
| ಜೈಪುರ್ | 14,335 | 280 |
| ಲಕ್ನೋ | 14,335 | 280 |
| ಭುವನೇಶ್ವರ್ | 14,320 | 290 |
| ಪುಣೆ | 14,320 | 280 |
ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್‌ಗೆ)
ಜಾಗತಿಕ ಮಾರುಕಟ್ಟೆಯಲ್ಲಿ ಇಂದಿನ ಅಪರಂಜಿ ಚಿನ್ನದ ಬೆಲೆ (ಭಾರತೀಯ ರೂಪಾಯಿಗಳಲ್ಲಿ) ಹೀಗಿದೆ:
| ದೇಶ | ಸ್ಥಳೀಯ ಕರೆನ್ಸಿ ದರ | ಭಾರತೀಯ ರೂಪಾಯಿ ಮೌಲ್ಯ (ರೂ.) |
| ಮಲೇಷ್ಯಾ | 593 ರಿಂಗಿಟ್ | 14,174 |
| ದುಬೈ | 547.50 ಡಿರಾಮ್ | 14,135 |
| ಅಮೆರಿಕ | 149.50 ಡಾಲರ್ | 14,172 |
| ಸಿಂಗಾಪುರ | 197.50 ಸಿಂಗಾಪುರ್ ಡಾಲರ್ | 14,653 |
| ಕತಾರ್ | 547 ಕತಾರಿ ರಿಯಾಲ್ | 14,225 |
| ಸೌದಿ ಅರೇಬಿಯಾ | 563 ಸೌದಿ ರಿಯಾಲ್ | 14,222 |
| ಓಮನ್ | 57.50 ಒಮಾನಿ ರಿಯಾಲ್ | 14,157 |
| ಕುವೇತ್ | 45.67 ಕುವೇತಿ ದಿನಾರ್ | 13,988 |
ಗಮನಿಸಿ: ಮೇಲೆ ನೀಡಲಾದ ದರಗಳು ಅಂದಾಜು ಮಾರುಕಟ್ಟೆ ಬೆಲೆಗಳಾಗಿದ್ದು, ಜಿಎಸ್‌ಟಿ ಹಾಗೂ ಮೇಕಿಂಗ್ ಚಾರ್ಜ್‌ಗಳನ್ನು ಒಳಗೊಂಡಿರುವುದಿಲ್ಲ. ಸ್ಥಳೀಯ ಆಭರಣ ಮಳಿಗೆಗಳಲ್ಲಿ ದರಗಳು ಬದಲಾಗಬಹುದು.
