ಅಮೆರಿಕ ಇರಾನ್‌ ಸಂಘರ್ಷ: ಇರಾನ್‌ ಬೆದರಿಕೆಯಿಂದ ಕಚ್ಚಾ ತೈಲ ದರ ಭಾರೀ ಏರಿಕೆ

1 (29)

ಅಮೆರಿಕದ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್‌ ಹಾರ್ಮುಜ್‌ ಜಲಸಂಧಿಯನ್ನು ಮುಚ್ಚುವುದಾಗಿ ಘೋಷಿಸಿದ ಬೆನ್ನಲ್ಲೇ, ಕಚ್ಚಾ ತೈಲದ ಬೆಲೆಯು ಕಳೆದ ಐದು ತಿಂಗಳಲ್ಲಿ ಗರಿಷ್ಠ ಏರಿಕೆ ಕಂಡಿದೆ.

ಒಂದು ಬ್ಯಾರೆಲ್‌ (159 ಲೀಟರ್‌) ಬ್ರೆಂಟ್‌ ಕಚ್ಚಾ ತೈಲದ ಬೆಲೆ 1.92 ಡಾಲರ್‌ (2.49%) ಏರಿಕೆಯಾಗಿ 78.93 ಡಾಲರ್‌ (6,847 ರೂ.) ತಲುಪಿದೆ. ಅಂತೆಯೇ, ಅಮೆರಿಕದ ವೆಸ್ಟ್‌ ಟೆಕ್ಸಾಸ್‌ ಇಂಟರ್ಮೀಡಿಯೇಟ್‌ (WTI) ಕಚ್ಚಾ ತೈಲದ ಬೆಲೆ 1.89 ಡಾಲರ್‌ (2.56%) ಏರಿಕೆಯಾಗಿ 75.73 ಡಾಲರ್‌ (6,570 ರೂ.) ತಲುಪಿದೆ.

ADVERTISEMENT
ADVERTISEMENT

ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ದಾಳಿ ನಡೆಸಿ ನಾಶಪಡಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್‌ ಹಾರ್ಮುಜ್‌ ಜಲಸಂಧಿಯನ್ನು ಮುಚ್ಚುವುದಾಗಿ ಘೋಷಿಸಿದೆ.

ಇರಾನ್‌ ಮತ್ತು ಒಮಾನ್‌ ನಡುವಿನ 40 ಕಿ.ಮೀ. ಅಗಲದ ಈ ಜಲಸಂಧಿಯ ಮೂಲಕ ಇರಾಕ್‌, ಸೌದಿ ಅರೇಬಿಯಾ, ಯುಎಇ, ಮತ್ತು ಕತಾರ್‌ನಿಂದ ಕಚ್ಚಾ ತೈಲ ಹಾಗೂ ಎಲ್‌ಎನ್‌ಜಿ ಹೊತ್ತುಕೊಂಡು ಬರುವ ಕಾರ್ಗೋ ಶಿಪ್‌ಗಳು ಸಂಚರಿಸುತ್ತವೆ. ಒಂದು ತಿಂಗಳಲ್ಲಿ 3,000ಕ್ಕೂ ಅಧಿಕ ಹಡಗುಗಳು ಈ ಮಾರ್ಗವನ್ನು ಬಳಸುತ್ತವೆ. ಇರಾನ್‌ನ ಈ ಬೆದರಿಕೆಯಿಂದಾಗಿ ಕಚ್ಚಾ ತೈಲದ ಬೆಲೆ ದಿಢೀರ್‌ ಏರಿಕೆಯಾಗಿದೆ.

Exit mobile version