ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್‌; ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ 10 ರೂ. ಏರಿಕೆ

ಮಾಡಿಕೊಂಡ (3)

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ನವೆಂಬರ್ 1ರಿಂದ ಅನ್ವಯವಾಗುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ (Commercial LPG Cylinder) ಬೆಲೆಯನ್ನು 10 ರೂ.ನಷ್ಟು ಹೆಚ್ಚಿಸಲಾಗಿದ್ದು, 19 ಕೆಜಿ ಸಿಲಿಂಡರ್ ಬೆಲೆ 2,820 ರೂ.ಗೆ ತಲುಪಿದೆ. ದೀಪಾವಳಿ ಹಬ್ಬದ ಹೊತ್ತಿನಲ್ಲೇ ಈ ಬೆಲೆ ಏರಿಕೆ ಆಗಿರುವುದು ಹೋಟೆಲ್, ರೆಸ್ಟೋರೆಂಟ್ ಮತ್ತು ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದೆ.

ಸತತ ಮೂರನೇ ತಿಂಗಳ ಏರಿಕೆ
ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಬಳಿಕ ಇದು ಸತತ ಮೂರನೇ ತಿಂಗಳ ಏರಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 9.50 ರೂ. ಏರಿಕೆಯಾಗಿತ್ತು, ಅಕ್ಟೋಬರ್‌ನಲ್ಲಿ 62.50 ರೂ. ಏರಿಕೆಯಾಗಿತ್ತು. ಇದೀಗ ನವೆಂಬರ್‌ನಲ್ಲಿ 10 ರೂ. ಹೆಚ್ಚಿಸಲಾಗಿದೆ. ಈ ಮೂರು ತಿಂಗಳಲ್ಲಿ ಒಟ್ಟು 82 ರೂ.ಗೂ ಅಧಿಕ ಬೆಲೆ ಏರಿಕೆಯಾಗಿದ್ದು, ವಾಣಿಜ್ಯ ಬಳಕೆದಾರರಿಗೆ ಇದು ಭಾರೀ ಹೊರೆಯಾಗಿದೆ.

ಪ್ರಮುಖ ನಗರಗಳಲ್ಲಿ ಹೊಸ ದರ (ಇಂದಿನಿಂದ ಅನ್ವಯ)

ಆಹಾರ ಪದಾರ್ಥಗಳ ಬೆಲೆ ಮೇಲೆ ಪರಿಣಾಮ
ವಾಣಿಜ್ಯ ಸಿಲಿಂಡರ್ ಮೇಲಿನ ಬೆಲೆ ಏರಿಕೆಯು ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗುವಂತೆ ಮಾಡಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಅಡುಗೆ ವೆಚ್ಚವನ್ನು ಸರಿದೂಗಿಸಲು ತಿಂಡಿ ಮತ್ತು ಊಟದ ದರ ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದ ಸಾಮಾನ್ಯ ಗ್ರಾಹಕರಿಗೆ ಮತ್ತಷ್ಟು ಹೊರೆ ಬೀಳಲಿದೆ. ಈಗಾಗಲೇ ಹಾಲು, ಮೊಸರು ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮ ವರ್ಗದ ಜನರಿಗೆ ಇದು ಹೆಚ್ಚುವರಿ ಹೊರೆಯಾಗಿದೆ.

Exit mobile version