ಬಿಎಲ್‌ಎಸ್‌ ಇಂಟರ್‌ನ್ಯಾಷನಲ್‌ ಮುಡಿಗೆ ‘ಗ್ರೇಟ್ ಪ್ಲೇಸ್ ಟು ವರ್ಕ್’ ಗರಿ

ಶೇ. 95ರಷ್ಟು ಉದ್ಯೋಗಿಗಳಿಂದ ಫುಲ್ ಮಾರ್ಕ್ಸ್: ಬಿಎಲ್‌ಎಸ್‌ ಇಂಟರ್‌ನ್ಯಾಷನಲ್‌ ಮುಡಿಗೆ 'ಗ್ರೇಟ್ ಪ್ಲೇಸ್ ಟು ವರ್ಕ್' ಗರಿ

Untitled design 2026 10 01T112317.073

ಬೆಂಗಳೂರು: ಸರ್ಕಾರ ಮತ್ತು ನಾಗರಿಕರಿಗೆ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಹಾಗೂ ಎಐ ಆಧಾರಿತ ಸೇವೆಗಳನ್ನು ಒದಗಿಸುವ ಮುಂಚೂಣಿ ಸಂಸ್ಥೆ ಬಿಎಲ್‌ಎಸ್ ಇಂಟರ್‌ನ್ಯಾಷನಲ್ ಇದೀಗ ಭಾರತದ ಅತ್ಯುತ್ತಮ ಕೆಲಸದ ಸ್ಥಳ, ಅಂದರೆ ‘ಗ್ರೇಟ್ ಪ್ಲೇಸ್ ಟು ವರ್ಕ್’ ಎಂಬ ಪ್ರತಿಷ್ಠಿತ ಪ್ರಮಾಣಪತ್ರವನ್ನು ಮುಡಿಗೇರಿಸಿಕೊಂಡಿದೆ.

ಉದ್ಯೋಗಿಗಳಿಗೆ ಉತ್ತಮ ವಾತಾವರಣ, ಸಮಾನತೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವಲ್ಲಿ ಕಂಪನಿಯು ತೋರಿರುವ ಬದ್ಧತೆಯನ್ನು ಈ ಪ್ರಶಸ್ತಿ ಸಾಬೀತುಪಡಿಸಿದೆ.

ಉದ್ಯೋಗಿಗಳ ಮೆಚ್ಚುಗೆಗೆ ಪಾತ್ರವಾದ ಸಂಸ್ಥೆ

‘ಗ್ರೇಟ್ ಪ್ಲೇಸ್ ಟು ವರ್ಕ್’ ಸಂಸ್ಥೆಯು ಉದ್ಯೋಗಿಗಳ ಅನುಭವದ ಆಧಾರದ ಮೇಲೆ ಸ್ವತಂತ್ರವಾಗಿ ‘ಟ್ರಸ್ಟ್ ಇಂಡೆಕ್ಸ್’ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಶೇ. 93 ರಷ್ಟು ಉದ್ಯೋಗಿಗಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಅವರಲ್ಲಿ ಶೇ. 95ರಷ್ಟು ಮಂದಿ, ʼಬಿಎಲ್‌ಎಸ್ ಒಂದು ಅದ್ಭುತವಾದ ಕೆಲಸದ ಸ್ಥಳʼ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕಚೇರಿಯ ವಾತಾವರಣ ಮತ್ತು ಅಲ್ಲಿನ ಸಂಸ್ಕೃತಿಯ ಬಗ್ಗೆ ಉದ್ಯೋಗಿಗಳಲ್ಲಿರುವ ವಿಶ್ವಾಸವನ್ನು ಇದು ತೋರಿಸುತ್ತದೆ.

ಅಲ್ಲದೆ, ಶೇ. 96ರಷ್ಟು ಉದ್ಯೋಗಿಗಳು ತಾವು ಕಂಪನಿಗೆ ಸೇರಿದ ಮೊದಲ ದಿನವೇ ಅತ್ಯುತ್ತಮ ಸ್ವಾಗತ ಮತ್ತು ಆತ್ಮೀಯತೆಯ ಅನುಭವ ಪಡೆದಿದ್ದಾಗಿ ತಿಳಿಸಿದ್ದಾರೆ.

ಈ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬಿಎಲ್‌ಎಸ್ ಇಂಟರ್‌ನ್ಯಾಷನಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶಿಖರ್ ಅಗರ್ವಾಲ್, “ಗ್ರೇಟ್ ಪ್ಲೇಸ್ ಟು ವರ್ಕ್ ಮಾನ್ಯತೆ ಲಭಿಸಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಚಾರ. ಉದ್ಯೋಗಿಗಳಿಗೆ ಗೌರವ, ಸಮಾನತೆ ಸಿಗುವ ಹಾಗೂ ತಮ್ಮ ಅತ್ಯುತ್ತಮ ಕೆಲಸವನ್ನು ಮಾಡಲು ಪ್ರೇರೇಪಿಸುವ ವಾತಾವರಣವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂಬುದನ್ನು ಇದು ಸಾಬೀತುಪಡಿಸಿದೆ. ಭವಿಷ್ಯದಲ್ಲಿ ನಮ್ಮ ಸಂಸ್ಥೆ ಬೆಳೆದಂತೆಲ್ಲಾ ಉದ್ಯೋಗಿಗಳ ಏಳಿಗೆಗೂ ನಾವು ಸದಾ ಬೆಂಬಲ ನೀಡುತ್ತೇವೆ. ಇದು ನಮ್ಮ ಇಡೀ ತಂಡದ ಒಗ್ಗಟ್ಟಿನ ಪ್ರಯತ್ನದ ಫಲ,” ಎಂದು ಹರ್ಷ ವ್ಯಕ್ತಪಡಿಸಿದರು.

ಎಐ ತರಬೇತಿ ಹಾಗೂ ಕೌಶಲ್ಯ ಅಭಿವೃದ್ಧಿಗೆ ಒತ್ತು

ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿರುವ ಇಂದಿನ ದಿನಗಳಲ್ಲಿ, ಬಿಎಲ್‌ಎಸ್ ತನ್ನ ಉದ್ಯೋಗಿಗಳನ್ನು ಭವಿಷ್ಯಕ್ಕಾಗಿ ಸಜ್ಜುಗೊಳಿಸುತ್ತಿದೆ. ಬದಲಾಗುವ ವ್ಯಾಪಾರ ಜಗತ್ತಿಗೆ ತಕ್ಕಂತೆ ಉದ್ಯೋಗಿಗಳು ಬೆಳೆಯಲು ಅನುಕೂಲವಾಗುವಂತೆ, ಕೃತಕ ಬುದ್ಧಿಮತ್ತೆ ಆಧಾರಿತ ತರಬೇತಿ, ನಾಯಕತ್ವ ಗುಣಗಳ ಅಭಿವೃದ್ಧಿ ಹಾಗೂ ಹೊಸ ಕೌಶಲ್ಯಗಳನ್ನು ಕಲಿಯಲು ಕಂಪನಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

2005ರಿಂದ ಕಾರ್ಯಾಚರಿಸುತ್ತಿರುವ ಬಿಎಲ್‌ಎಸ್ ಸಂಸ್ಥೆಯು, ಪ್ರಪಂಚದಾದ್ಯಂತ 46 ದೇಶಗಳ ಸರ್ಕಾರಗಳೊಂದಿಗೆ ಕೆಲಸ ಮಾಡುತ್ತಿದೆ. ವೀಸಾ, ಪಾಸ್‌ಪೋರ್ಟ್, ರಾಯಭಾರಿ ಸೇವೆಗಳು, ಬಯೋಮೆಟ್ರಿಕ್ ಮತ್ತು ಇ-ಆಡಳಿತ ಸೇವೆಗಳನ್ನು ಒದಗಿಸುವಲ್ಲಿ ಇದು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ.

100ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಈ ಬೃಹತ್ ಸಂಸ್ಥೆಯಲ್ಲಿ ಪ್ರಸ್ತುತ 60,000ಕ್ಕೂ ಹೆಚ್ಚು ಉದ್ಯೋಗಿಗಳು ಹಾಗೂ ಅಸೋಸಿಯೇಟ್‌ಗಳು ಕೆಲಸ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಏಕೈಕ ಕಂಪನಿ ಇದಾಗಿದೆ.

Exit mobile version