ಬಂಗಾರ ಖರೀದಿಗೆ ಇಂದು ಸೂಕ್ತ ಸಮಯವೇ?: ಚಿನ್ನ-ಬೆಳ್ಳಿ ದರ ಪಟ್ಟಿ ಇಲ್ಲಿದೆ

Untitled design 2025 12 15T092628.131

ಬೆಂಗಳೂರು: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯದಲ್ಲಿನ ಏರಿಳಿತ, ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ಹೂಡಿಕೆದಾರರ ನಿರಾಸಕ್ತಿಯ ಪರಿಣಾಮವಾಗಿ ಭಾರತದಲ್ಲಿ ಚಿನ್ನದ ಬೆಲೆ ಮತ್ತೊಮ್ಮೆ ಇಳಿಕೆಯಾಗಿದ್ದು, ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ವಿಶೇಷವಾಗಿ ಮದುವೆ ಸೀಸನ್‌ ಹಿನ್ನೆಲೆ ಒಡವೆ ಖರೀದಿಗೆ ಮುಂದಾಗಿರುವ ಮಧ್ಯಮ ವರ್ಗದ ಕುಟುಂಬಗಳಿಗೆ ಈ ಬೆಲೆ ಇಳಿಕೆ ದೊಡ್ಡ ನಿರಾಳತೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ನಿರಂತರವಾಗಿ ಏರಿಕೆಯಾಗಿದ್ದರಿಂದ ಮದುವೆ, ಗೃಹಪ್ರವೇಶ ಸೇರಿದಂತೆ ಶುಭ ಕಾರ್ಯಗಳಿಗೆ ಚಿನ್ನ ಖರೀದಿಸುವುದು ಕಷ್ಟವಾಗಿತ್ತು. ಆದರೆ ಈಗ ಬೆಲೆ ಸ್ವಲ್ಪ ಇಳಿಕೆಯಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಖರೀದಿ ಚಟುವಟಿಕೆಗಳು ಮತ್ತೆ ಚೇತರಿಸಿಕೊಳ್ಳುವ ನಿರೀಕ್ಷೆ ಮೂಡಿದೆ.

ಆರ್ಥಿಕ ತಜ್ಞರು ಹೇಳುವಂತೆ, “ಮುಂದಿನ 15–20 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಆಗುವ ಸಾಧ್ಯತೆ ಕಡಿಮೆ. ಹೀಗಾಗಿ ಹೂಡಿಕೆದಾರರು ಹಾಗೂ ಮದುವೆಗಾಗಿ ಚಿನ್ನ ಖರೀದಿಸುವವರು ಈ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಬಹುದು. ಬೆಲೆ ಇನ್ನೂ ಸ್ವಲ್ಪ ಇಳಿಯುವ ಸಾಧ್ಯತೆ ಇರುವುದರಿಂದ ಹಂತ ಹಂತವಾಗಿ ಚಿನ್ನ ಖರೀದಿಸುವುದು ಉತ್ತಮ.”

ಇಂದು (ಡಿಸೆಂಬರ್ 15, 2025) ಚಿನ್ನ–ಬೆಳ್ಳಿ ಬೆಲೆ

ಬೆಂಗಳೂರು 

ಕರ್ನಾಟಕದಲ್ಲಿ ಚಿನ್ನದ ದರ (ಒಂದು ಗ್ರಾಂ)
8 ಗ್ರಾಂ ಚಿನ್ನದ ದರ
10 ಗ್ರಾಂ ಚಿನ್ನದ ದರ
100 ಗ್ರಾಂ ಚಿನ್ನದ ದರ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (1 ಗ್ರಾಂ) ಬೆಲೆ

ಚೆನ್ನೈ – ₹12,051 | ಮುಂಬೈ – ₹11,986 | ದೆಹಲಿ – ₹12,001 | ಬೆಂಗಳೂರು – ₹11,986 | ಹೈದರಾಬಾದ್ – ₹11,986 | ಕೋಲ್ಕತ್ತಾ – ₹11,986

ಬೆಳ್ಳಿ ದರ (100 ಗ್ರಾಂ)

ಬೆಂಗಳೂರು, ಮುಂಬೈ, ದೆಹಲಿ – ₹20,110
ಚೆನ್ನೈ, ಕೇರಳ, ಹೈದರಾಬಾದ್ – ₹20,910

ಟಿವಿ ಅಥವಾ ಪತ್ರಿಕೆಯಲ್ಲಿ ಕಾಣಿಸುವ ದರವೇ ಅಂತಿಮವಲ್ಲ ಎಂಬುದನ್ನು ಗ್ರಾಹಕರು ಮರೆಯಬಾರದು. ಆಭರಣ ಖರೀದಿಸುವಾಗ ವಿನ್ಯಾಸದ ಆಧಾರದ ಮೇಲೆ 8% ರಿಂದ 15% ಮೇಕಿಂಗ್ ಚಾರ್ಜ್ ಮತ್ತು 3% ಜಿಎಸ್‌ಟಿ ಹೆಚ್ಚಾಗಿ ಪಾವತಿಸಬೇಕಾಗುತ್ತದೆ. ಹೀಗಾಗಿ ಅಂಗಡಿಗೆ ಹೋಗುವ ಮುನ್ನ ನಿಮ್ಮ ಬಜೆಟ್ ಅನ್ನು ಸರಿಯಾಗಿ ಪ್ಲಾನ್ ಮಾಡಿಕೊಳ್ಳುವುದು ಉತ್ತಮ.

Exit mobile version