ರಕ್ಷಿತಾ ಕಲಾವಿದರಿಗೆ ಚಪ್ಪಲಿ ತೋರಿಸಿದ್ರಾ?: ಸ್ಪಷ್ಟನೆ ನೀಡಿ, ಅಶ್ವಿನಿಗೌಡ ಮುಖವಾಡ ಕಳಚಿದ ಸುದೀಪ್

Untitled design 2025 11 09T081000.070

ಬಿಗ್ ಬಾಸ್ ಕನ್ನಡ ಸೀಸನ್ 12 ಮನೆ ಈಗ ಮತ್ತೊಮ್ಮೆ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವಿನ ಘರ್ಷಣೆ ಕಾವೇರಿದೆ. ಇಬ್ಬರ ನಡುವಿನ ಮನಸ್ತಾಪ, ಕೋಪ ಮತ್ತು ಮಾತು ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಮುಂದುವರಿದಿದೆ. ಆದರೆ ಈ ವಾರ ಸುದೀಪ್ ಅವರ ವಾರಾಂತ್ಯದ ಕ್ಲಾಸ್‌ನಲ್ಲಿ ಈ ವಿವಾದದ ಮೇಲೆ ತೆರೆ ಬಿದ್ದಂತಾಯಿತು.

ಪತ್ರದ ವಿವಾದದಿಂದ ಉಂಟಾದ ಕಿಚ್ಚು

ಕಳೆದ ವಾರದ ಟಾಸ್ಕ್ ವೇಳೆ, ಸ್ಪರ್ಧಿಗಳು ಪರಸ್ಪರಕ್ಕೆ ಪತ್ರ ನೀಡಬೇಕಾದ ಸಂದರ್ಭ ಬಂತು. ಆದರೆ ಅಶ್ವಿನಿ, ರಕ್ಷಿತಾಗೆ ಪತ್ರ ನೀಡುವುದನ್ನು ತಿರಸ್ಕರಿಸಿದರು. “ರಕ್ಷಿತಾಗೆ ಪತ್ರ ಕೊಡಲು ನಾನು ಸಿದ್ಧಳಲ್ಲ” ಎಂದು ಹೇಳಿದ ಅಶ್ವಿನಿ, ಯಾವುದೇ ಕಾರಣ ನೀಡದೆ, ವೈಯಕ್ತಿಕ ಅಸಮಾಧಾನದಿಂದಲೇ ನಿರ್ಧಾರ ತೆಗೆದುಕೊಂಡರು.

ವಾರಾಂತ್ಯದ ಎಪಿಸೋಡಿನಲ್ಲಿ ಸುದೀಪ್ ಈ ವಿಷಯವನ್ನು ಎತ್ತಿಕೊಂಡು, “ನೀವು ರಕ್ಷಿತಾಗೆ ಪತ್ರ ಕೊಡದಿದ್ದಕ್ಕೆ ನಿಜವಾದ ಕಾರಣವೇನು? ನೀವು ರಾಶಿಕಾಗೆ ಪತ್ರ ಸಿಗಬೇಕು ಎಂಬ ವಿಚಾರ ಚರ್ಚಿಸಲಿಲ್ಲ. ಬದಲಿಗೆ ನಿಮ್ಮ ವೈಯಕ್ತಿಕ ಸಿಟ್ಟು ತೀರಿಸಿಕೊಂಡಿರಿ” ಎಂದು ಪ್ರಶ್ನಿಸಿದರು. ಮೊದಲಿಗೆ ಅಶ್ವಿನಿ ತಮದೂ ತಪ್ಪಿಲ್ಲ ಎಂದು ಹೇಳಿದರೂ, ಬಳಿಕ ಒಪ್ಪಿಕೊಂಡರು “ನಾನು ಕೋಪದಲ್ಲಿ, ಹಿಂದೆ ರಕ್ಷಿತಾ ಮಾಡಿದ ವರ್ತನೆಯಿಂದ ಬೇಸತ್ತು ಪತ್ರ ಕೊಡಲಿಲ್ಲ” ಎಂದರು.

‘ಚಪ್ಪಲಿ’ ವಿವಾದ

ನಂತರ ಸುದೀಪ್, ಅಶ್ವಿನಿ–ರಕ್ಷಿತಾ ಹಳೆಯ ಜಗಳವನ್ನು ನೆನಪಿಸಿದರು. ಅಶ್ವಿನಿ, “ರಕ್ಷಿತಾ ಚಪ್ಪಲಿ ತೋರಿಸಿದರು, ಕಲಾವಿದರಿಗೆ ಅವಮಾನ ಮಾಡಿದರು” ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಸ್ಪಷ್ಟತೆ ತರುವ ನಿಟ್ಟಿನಲ್ಲಿ ಸುದೀಪ್ ವಿಡಿಯೋವನ್ನು ಪ್ಲೇ ಮಾಡಿಸಿದರು.

ವೀಡಿಯೊದಲ್ಲಿ ರಕ್ಷಿತಾ, ಅಶ್ವಿನಿಯೊಂದಿಗೆ ಜಗಳ ಮಾಡುವಾಗ “ನಿಮ್ಮ ಓಟನ್ನು ಹೀಗೆ ಮಾಡಿಬಿಡುತ್ತೇನೆ” ಎಂದು ಕಾಲು ಆಡಿಸುತ್ತಿದ್ದ ದೃಶ್ಯವಿತ್ತು. ಅಶ್ವಿನಿ ಅದನ್ನು ‘ಚಪ್ಪಲಿ ತೋರಿಸಿದರು’ ಎಂದು ತಪ್ಪಾಗಿ ಅರ್ಥಮಾಡಿಕೊಂಡಿದ್ದರು. ಇದಕ್ಕೆ ಸುದೀಪ್ ಸ್ಪಷ್ಟನೆ ನೀಡುತ್ತಾ, “ಕಾಲು ತೋರಿಸುವುದು ಸಹ ಅಸಭ್ಯತೆ, ಆದರೆ ರಕ್ಷಿತಾ ಉದ್ದೇಶ ಹಾಗಿರಲಿಲ್ಲ. ಅವರು ಓಟದ ಕುರಿತು ಹೇಳುತ್ತಿದ್ದರು” ಎಂದರು.

ರಕ್ಷಿತಾ ತಕ್ಷಣ ಕ್ಷಮೆ ಕೇಳಿದರು. “ನಾನು ಅವಮಾನ ಮಾಡುವ ಉದ್ದೇಶದಿಂದ ಹಾಗೆ ಮಾಡಲಿಲ್ಲ” ಎಂದರು. ಆದರೆ ಸುದೀಪ್ ಈ ಘಟನೆಯನ್ನು ಎರಡು ಬಾರಿ ಪ್ಲೇ ಮಾಡಿ, ಸ್ಪಷ್ಟವಾಗಿ ವಿವರಿಸಿದರು. “ಇಲ್ಲಿ ಯಾರೂ ಕಲಾವಿದರಿಗೆ ಅವಮಾನ ಮಾಡಿಲ್ಲ. ಅಶ್ವಿನಿ, ನೀವು ತಪ್ಪಾಗಿ ಗ್ರಹಿಸಿದ್ದೀರಿ.” ಎಂದು ಹೇಳಿದರು.

ಸುಳ್ಳು ಕಥೆ 

ಅಶ್ವಿನಿ, “ರಕ್ಷಿತಾ ಕಲಾವಿದರಿಗೆ ಚಪ್ಪಲಿ ತೋರಿಸಿದ್ದಾರೆ” ಎಂದು ಮನೆಯಲ್ಲಿಯೂ, ಹೊರಗಿನ ಜನರ ಮುಂದೆ ಹೇಳಿದರೆಂದು ಸುದೀಪ್ ಟೀಕಿಸಿದರು. “ನೀವು ತಪ್ಪಾಗಿ ಗ್ರಹಿಸಿದ ವಿಷಯವನ್ನು ಸುಳ್ಳು ಕಥೆಯಾಗಿ ರೂಪಿಸಿದಿರಿ. ಇದು ತುಂಬಾ ಗಂಭೀರ” ಎಂದು ಹೇಳಿದರು.

ಇದರೊಂದಿಗೆ ಸುದೀಪ್ ಇಬ್ಬರಿಗೂ ಎಚ್ಚರಿಕೆ ನೀಡಿದರು. “ಬಿಗ್ ಬಾಸ್ ಮನೆಯಲ್ಲಿ ಹೀಗೆ ವೈಯಕ್ತಿಕ ದ್ವೇಷ, ತಪ್ಪು ಕಥೆ ರಚನೆ, ಅಥವಾ ಅವಮಾನಕಾರಿ ವರ್ತನೆ ಪುನರಾವರ್ತನೆ ಆಗಬಾರದು” ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.

ಅಶ್ವಿನಿಯ ತಪ್ಪು ಅರ್ಥ ಮಾಡಿಕೊಮಡಿದ್ದು, ಮತ್ತು ರಕ್ಷಿತಾದ ಅಸಭ್ಯ ಶರೀರಭಾಷೆ ಎರಡೂ ತಪ್ಪು ಎಂದು ಅವರು ಹೇಳಿದರು. ಇಬ್ಬರೂ ಕ್ಷಮೆ ಕೇಳಿ ವಿಚಾರ ಮುಗಿಸಿದರು.

Exit mobile version