ಅಶ್ವಿನಿ ಗೌಡ ಅನ್ನೋದು ವ್ಯಕ್ತಿ ಹೆಸರಾ? ಪವರ್ ಕಾರ್ಡಾ..?

ಕಾವ್ಯ-ಅಶ್ವಿನಿ ನಡುವೆ ಬಿಗ್‌ ಟಾಕ್‌ವಾರ್‌

Untitled design 2025 10 30t110859.959

ಬೆಂಗಳೂರು, ಅಕ್ಟೋಬರ್ 30, 2025: ಬಿಗ್ ಬಾಸ್ ಕನ್ನಡ ಸೀಸನ್ 12 (BBK 12) ಮನೆಯಲ್ಲಿ ಸ್ಪರ್ಧಿಗಳ ನಡುವೆ ಮನಸ್ತಾಪಗಳು ತಾರಕಕ್ಕೆ ತಲುಪಿವೆ. ಇದೀಗ ಅಶ್ವಿನಿ ಗೌಡ ವ್ಯಕ್ತಿಯ ಹೆಸರೇ ? ಅಥವಾ ಪವರ್ ಕಾರ್ಡಾ? ಎಂದು ಟೀಕಿಸುವ ಚರ್ಚೆ ಶುರುವಾಗಿದೆ.

ಕಲರ್ಸ್ ಕನ್ನಡ ವಾಹಿನಿ ಇಂದು ರಾತ್ರಿ (ಅಕ್ಟೋಬರ್ 30) ಪ್ರಸಾರವಾಗಲಿರುವ ಸಂಚಿಕೆಯ ಪ್ರೊಮೋ ಬಿಡುಗಡೆ ಮಾಡಿದೆ. ಪ್ರೊಮೋದಲ್ಲಿ ಒಂದು ಚಟುವಟಿಕೆಯ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ದೊಡ್ಡ ಗಲಾಟೆಯಾಗಿದೆ. ಕಾವ್ಯ ಶೈವ ಅಶ್ವಿನಿಗೆ ಕೌಂಟರ್ ಕೊಟ್ಟು ಕಂಗಾಲಾಗಿಸಿದ್ದಾರೆ.

ಅಶ್ವಿನಿ ಗೌಡ ಮತ್ತು ಕಾವ್ಯ ಶೈವ ಇಬ್ಬರ ನಡುವೆ ನಡೆದ ವಾಗ್ವಾದದ ಸಂದರ್ಭದಲ್ಲಿ, ಅಶ್ವಿನಿ ಗೌಡ ಅವರು ತಮ್ಮ ವಿಚಾರವನ್ನು ಮುಂದಿಡುತ್ತಾ, ಚರ್ಚೆಯಲ್ಲಿ ನೀನು ಸರಿ, ನಾನು ತಪ್ಪು ಅಂತಲ್ಲ. ಕೊನೆ ಪಕ್ಷ ಮಾತಾಡಲು ವೇದಿಕೆ ಸಿಕ್ಕಿತ್ತು, ಆಗಿಲ್ಲ ಇಂದು! ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಕಾವ್ಯ ಶೈವ, ನಿಮ್ಮ ಮತ ನನಗೆ ಅವಶ್ಯಕತೆ ಇರಲಿಲ್ಲ! ಎಂದು ಉತ್ತರ ನೀಡಿದರು. ಅಶ್ವಿನಿ ಅವರು ಇದನ್ನು ತೀವ್ರವಾಗಿ ಖಂಡಿಸಿ, ಅಲ್ಲ, ನನಗೂ ಇರಲಿಲ್ಲ. ಅದು ನಿಮ್ಮ ವ್ಯಕ್ತಿತ್ವ! ಎಂದರು. ಕಾವ್ಯ ಅವರು ಮುಂದುವರೆದು, ನಿಮ್ಗೂ ಇಗೋ ಇತ್ತು. ಬಂದು ಮಾತಾಡಲಿಲ್ಲ, ಎಂದು ಕಾರಣ ನೀಡಿದರು.

ಇದರೊಂದಿಗೆ ಅಶ್ವಿನಿ ಅವರು ರೋಷದಿಂದ, ಬರೀ ಅಶ್ವಿನಿ ಗೌಡ ಹೆಸರು ಹೇಳಿಕೊಂಡು ಪವರ್ ಕಾರ್ಡ್ ಯೂಸ್ ಮಾಡ್ತಿದ್ದೀಯಾ ಅಷ್ಟೇ! ಎಂದು ಆರೋಪಿಸಿದರು. ಕಾವ್ಯ ಅವರು ಇದರ ಮೇಲೆ, ನಿನ್ನ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಏನು? ಎಂದು ಪ್ರಶ್ನಿಸಿದಾಗ, ಅಶ್ವಿನಿ ಅವರು ನಿನ್ನ ಅನ್ನಬೇಡ! ಎಂದು ಸಿಟ್ಟಿನಿಂದ ಉತ್ತರಿಸಿದರು.ನಂತರ ಕಾವ್ಯ , ನೀನು ರೆಸ್ಪೆಕ್ಟ್ ಕೊಟ್ಟರೆ ನಾನೂ ಕೊಡ್ತೀನಿ! ಎಂದು ಹೇಳಿದರು. ಇದನ್ನು ಕೇಳಿದ ಅಶ್ವಿನಿ ಅವರು ಕೈ ತೊರೆಯುವ ಸನ್ನೆ ಮಾಡಿ, “ಏನು?” ಎಂದು ಪ್ರತಿ ಪ್ರಶ್ನಿಸಿದರು. ಕಾವ್ಯ ಅವರು “ಗೆಟ್ ಲಾಸ್ಟ್!” ಎಂದು ಹೇಳಿದ್ದಾರೆ. ಅಶ್ವಿನಿ ಅವರು ಅಂತಿಮವಾಗಿ , ಅಖಾಡಕ್ಕೆ ಇಳಿ ನೋಡೋಣ! ಯೋಗ್ಯತೆ ಇಲ್ಲ ಮಾತಾಡಬೇಡ! ಎಂದು ಕಾವ್ಯ ವಿರುದ್ದ ಟೀಕೆ ಮಾಡಿದ್ದಾರೆ. ಇದಕ್ಕೆ ಕಾವ್ಯ ,ನಾನು ಹಿಂಗೇ ಮಾತಾಡೋದು ಎಂದು ಉತ್ತರಿಸಿದರೆ, ಅಶ್ವಿನಿ, “ನೀನ್ಯಾವಳೇ ಮಾತಾಡೋಕೆ?” ಎಂದು ಪ್ರಶ್ನಿಸಿ ವಾಗ್ವಾದವನ್ನು ಮತ್ತಷ್ಟು ಉಲ್ಬಣಗೊಳಿಸಿದರು.

Exit mobile version