BBK 12: ಬಿಗ್‌ಬಾಸ್‌ ಮನೆಯಲ್ಲಿ ಹೆಣ್ಮಕ್ಕಳ ಎದೆಬಡಿತ ಹೆಚ್ಚಿಸಿದ ಸೂರಜ್ ಯಾರು?

Untitled design 2025 10 21t144013.099

ಬಿಗ್ ಬಾಸ್ ಕನ್ನಡ ಸೀಸನ್‌ 12ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಸೂರಜ್ ಸಿಂಗ್ ಎಂಬ ಚಂದದ ಹುಡುಗ ಗಮನ ಸೆಳೆದಿದ್ದಾರೆ. ಮೈಸೂರಿನ ಈ ಯುವಕ, ಕೆನಡಾದಲ್ಲಿ ಐಟಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದವರು. ಫಿಟ್‌ನೆಸ್ ಫ್ರೀಕ್ ಮತ್ತು ಮಾಡೆಲ್ ಆಗಿರುವ ಸೂರಜ್, ತಮ್ಮ ಸ್ಟೈಲಿಶ್ ಎಂಟ್ರಿಯ ಮೂಲಕವೇ ಮನೆಯ ಹೆಣ್ಮಕ್ಕಳ ಎದೆಬಡಿತವನ್ನು ಹೆಚ್ಚಿಸಿದ್ದಾರೆ. ಆದರೆ ಈ ಸೂರಜ್ ಸಿಂಗ್ ಯಾರು? ಇವರ ಹಿನ್ನೆಲೆ ಏನು? ಯಾಕೆ ಕೆನಡಾದಿಂದ ವಾಪಸ್ ಬಂದರು? ಇವೆಲ್ಲದರ ಬಗ್ಗೆ ತಿಳಿಯೋಣ.

ವೈಲ್ಡ್ ಕಾರ್ಡ್ ಎಂಟ್ರಿ

ಬಿಗ್ ಬಾಸ್ ಮನೆಯಿಂದ ಡಾಗ್ ಸತೀಶ್, ಮಂಜು ಭಾಷಿಣಿ ಮತ್ತು ಅಶ್ವಿನಿ ಎನ್.ಎಸ್. ಔಟ್ ಆದ ನಂತರ, ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅವರಲ್ಲಿ ಒಬ್ಬರು ಸೂರಜ್ ಸಿಂಗ್. ಇವರ ಎಂಟ್ರಿಯು ನೀರಿನಿಂದ ಮೇಲೆದ್ದು, ಷರ್ಟ್ ಬಿಚ್ಚಿ, ಸಿಕ್ಸ್ ಪ್ಯಾಕ್ ತೋರಿಸಿ, ಸ್ಪರ್ಧಿಗಳ ಎದುರಿಗೆ ಕೂಲ್ ಲುಕ್‌ನಲ್ಲಿ ಪೋಸ್ ಕೊಟ್ಟಾಗ, ಮನೆಯ ಸ್ಪರ್ಧಿಗಳು ‘ವಾವ್’ ಎಂದು ಬಾಯಿ ಬಿಟ್ಟರು. ವಿಶೇಷವಾಗಿ ಕಾವ್ಯಾ ಶೈವ ಅವರ ರಿಯಾಕ್ಷನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೂರಜ್ ಷರ್ಟ್ ಬಿಚ್ಚಿ ಮತ್ತೆ ಹಾಕಿಕೊಂಡಾಗ, ಕಾವ್ಯಾ ನಾಚಿಕೆಯಿಂದ ಕಣ್ಣು ಮುಚ್ಚಿಕೊಂಡ ದೃಶ್ಯ ಪ್ರೊಮೋದಲ್ಲಿ ಎಲ್ಲರ ಗಮನ ಸೆಳೆಯಿತು.

ಸೂರಜ್ ಸಿಂಗ್‌ ಹಿನ್ನೆಲೆ

ಮೈಸೂರಿನ ಸೂರಜ್ ಸಿಂಗ್, ಉನ್ನತ ಶಿಕ್ಷಣಕ್ಕಾಗಿ ಕೆನಡಾಕ್ಕೆ ತೆರಳಿದ್ದರು. ಅಲ್ಲಿ ಐಟಿ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದ ಇವರು, ಫಿಟ್‌ನೆಸ್ ಮತ್ತು ಮಾಡೆಲಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡರು. ಕೆನಡಾದಲ್ಲಿ ತಮ್ಮ ಫಿಟ್‌ನೆಸ್ ಜರ್ನಿಯನ್ನು ಮುಂದುವರೆಸಿದ ಸೂರಜ್, ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾಷನ್ ಮತ್ತು ಫಿಟ್‌ನೆಸ್ ವಿಡಿಯೋಗಳನ್ನು ಹಂಚಿಕೊಂಡು ಒಳ್ಳೆಯ ಫಾಲೋಯಿಂಗ್ ಗಳಿಸಿದ್ದಾರೆ. ಆದರೆ, ತಾಯಿಯ ಒಡನಾಟಕ್ಕಾಗಿ ಭಾರತಕ್ಕೆ ವಾಪಸ್ ಬಂದರು. “ನನ್ನ ಅಕ್ಕನಿಗೆ ಮದುವೆ ಆಯಿತು, ಅಮ್ಮ ಒಬ್ಬರೇ ಇದ್ದಾರೆ. ಅವರನ್ನು ಕಷ್ಟಪಟ್ಟು ಸಾಕಿದ್ದಾರೆ. ಈ ಸಮಯದಲ್ಲಿ ನಾನು ಅವರ ಜೊತೆ ಇರಬೇಕು,” ಎಂದು ಸೂರಜ್ ಭಾವುಕವಾಗಿ ಹೇಳಿಕೊಂಡಿದ್ದಾರೆ.

ಫ್ಯಾಷನ್ ಪ್ರಿಯ

ಸೂರಜ್ ತಾವೊಬ್ಬ ಫ್ಯಾಷನ್ ಪ್ರಿಯ ಎಂದು ಹೇಳಿಕೊಂಡಿದ್ದಾರೆ. ಚೆನ್ನಾಗಿ ರೆಡಿಯಾಗಿ, ಪಾರ್ಟಿಗಳಿಗೆ, ಕಾರ್ಯಕ್ರಮಗಳಿಗೆ ಹೋಗುವುದು ಇವರ ಜೀವನ ಶೈಲಿಯ ಭಾಗ. ಇದರ ಜೊತೆಗೆ, ಇವರಿಗೆ ಅಡುಗೆ ಮಾಡುವ ಕಲೆಯೂ ಗೊತ್ತು. ಶೆಫ್ ಆಗಿಯೂ ಕೆಲಸ ಮಾಡಿರುವ ಸೂರಜ್, “ನಾನು ಚೆನ್ನಾಗಿ ಅಡುಗೆ ಮಾಡುತ್ತೇನೆ,” ಎಂದು ಹೇಳಿಕೊಂಡಿದ್ದಾರೆ.

ಸ್ಪರ್ಧಿಗಳಿಗೆ ವಾರ್ನಿಂಗ್

ಸೂರಜ್ ತಮ್ಮ ವ್ಯಕ್ತಿತ್ವದ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ. “ನನ್ನೊಡನೆ ಯಾರು ಚೆನ್ನಾಗಿ ಇರುತ್ತಾರೋ, ಅವರ ಜೊತೆ ನಾನು ಚೆನ್ನಾಗಿ ಇರುತ್ತೇನೆ. ಆದರೆ ಯಾರು ಕೆಟ್ಟದಾಗಿ ನಡೆದುಕೊಳ್ಳುತ್ತಾರೋ, ಅವರ ಜೊತೆ ನಾನು ಇನ್ನೂ ಕೆಟ್ಟದಾಗಿ ನಡೆದುಕೊಳ್ಳುತ್ತೇನೆ,” ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಇವರು ಬಿಗ್ ಬಾಸ್ ಮನೆಯಲ್ಲಿ ಗಟ್ಟಿಯಾಗಿ ಆಟವಾಡಲು ಸಿದ್ಧರಿದ್ದಾರೆ ಎಂಬುದು ಸ್ಪಷ್ಟವಾಗಿದೆ. ರಿಷಿಕಾಗೆ ಗುಲಾಬಿ ಕೊಟ್ಟು, “ನೀವೇ ಚೆಂದದ ಹುಡುಗಿ” ಎಂದು ಮನಸೆಳೆದ ಸೂರಜ್, ಆಟದಲ್ಲಿ ತಮ್ಮ ಚಾರ್ಮ್ ಮತ್ತು ತಂತ್ರವನ್ನು ಹೇಗೆ ಬಳಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

Exit mobile version