BBK 12: ಗಿಲ್ಲಿಗೆ ನಾಮಿನೇಟ್ ಮಾಡೋಕೆ ಬೇರೆ ರೀಸನ್ ಇಲ್ಲವೇ? ರಜತ್ ಸಿಂಹಗರ್ಜನೆ

Untitled design 2025 12 11T222030.197

ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಗಿಲ್ಲಿ ನಟ (Gilli Nata) ಅವರ ನಾಮಿನೇಷನ್ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಪ್ರತಿ ವಾರವೂ ಗಿಲ್ಲಿಯನ್ನು ನಾಮಿನೇಟ್ ಮಾಡುವ ಸ್ಪರ್ಧಿಗಳು ಒಂದೇ ಕಾರಣವನ್ನು ಹೇಳುತ್ತಾರೆ. “ಗಿಲ್ಲಿ ಸೋಮಾರಿ, ಕಾಮಿಡಿ ಮಾಡ್ತಾನೆ.. ಮನಸ್ಸಿಗೆ ಹರ್ಟ್ ಮಾಡ್ತಾನೆ” ಎಂಬ ಕಾರಣ ಕೊಡುತ್ತಾರೆ. ಆದ್ರೆ ಇದಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿರುವ ರಜತ್ (Rajath) ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಅವನ್ನು ನಾಮಿನೇಟ್ ಮಾಡಿ ತೊಂದರೆ ಇಲ್ಲ, ಆದ್ರೆ ಬೇರೆ ಕಾರಣಗಳನ್ನು ಹೇಳಿ. ಮೂರು ವಾರಗಳಿಂದ ಒಂದೇ ರೀಸನ್ ಕೇಳ್ತಾ ಇದೀವಿ. 80% ಜನ ಇದೇ ಕಾರಣ ಕೊಡ್ತಾರೆ” ಎಂದು ರಜತ್ ಸ್ಪಷ್ಟವಾಗಿ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ರಜತ್ ಹಾಗೂ ಚೈತ್ರಾ ಕುಂದಾಪುರ ಅವರು ವೈಲ್ಡ್ ಕಾರ್ಡ್ ಎಂಟ್ರಿ ನಂತರ ಆಟದ ರೂಪು ಬದಲಾಗಿದೆ. ಅವರು ಬರುವ ಮೊದಲು ಗಿಲ್ಲಿ ಬಹಳಷ್ಟು ಶೈನ್ ಆಗುತ್ತಿದ್ದರು. ಆದ್ರೆ ಈಗ ರಜತ್ ಅವರು ಗಿಲ್ಲಿ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. “ನಾವು ಬಂದಾಗಿಂದ ಮೂರು ವಾರಗಳಲ್ಲಿ ನೀವು ಆಡಿದಷ್ಟು ಆಟವನ್ನು ನಾವು 15 ದಿನಗಳಲ್ಲಿ ಆಡಿದ್ದೇವೆ” ಎಂಬಂತೆ ಪರೋಕ್ಷವಾಗಿ ಹೌಸ್‌ಮೇಟ್ಸ್‌ಗೆ ಟಾಂಗ್ ಕೊಟ್ಟಿದ್ದಾರೆ. ಇದು ಹೌಸ್‌ನಲ್ಲಿ ಇದ್ದವರಿಗೆ “ನಿಮಗೆ ತಲೆ ಇಲ್ಲ” ಎಂಬಂತೆ ಸಂದೇಶ ರವಾನಿಸಿದೆ.

ಇತ್ತೀಚಿನ ನಾಮಿನೇಷನ್‌ನಲ್ಲಿ ಕಾವ್ಯ ಶೈವ (Kavya Shaiva) ಅವರು ಗಿಲ್ಲಿ ಹಾಗೂ ರಜತ್ ಇಬ್ಬರನ್ನೂ ನಾಮಿನೇಟ್ ಮಾಡಿ ಎಲ್ಲರನ್ನೂ ಆಶ್ಚರ್ಯಕ್ಕೀಡುಮಾಡಿದ್ದಾರೆ. ಗಿಲ್ಲಿಯನ್ನು ನಾಮಿನೇಟ್ ಮಾಡಲು ಕಾವ್ಯ ಕೊಟ್ಟ ಕಾರಣಗಳು ಪ್ರೇಕ್ಷಕರಿಗೆ ಸರಿಯೆನಿಸಲಿಲ್ಲ. “ನನ್ನ ಮುಂದೆ ಯಾವತ್ತೂ ರಘು, ಧ್ರುವಂತ್ ಹಾಗೂ ಅಶ್ವಿನಿ ಅವರನ್ನು ಕೆಳಗೆ ಹಾಕಿ ಗಿಲ್ಲಿ ಮಾತಾಡಿಲ್ಲ, ರೇಗಿಸಿಲ್ಲ” ಎಂದು ಕಾವ್ಯ ಹೇಳಿದ್ದಾರೆ. ಆದ್ರೆ ರಜತ್ ಇದಕ್ಕೆ ತಿರುಗೇಟು ನೀಡಿ, “ನಿಮಗೆ ತಲೆ ಗಿರಾ ಗಿರಾ ತಿರುಗುತ್ತಾ ಇರಬೇಕು ಅನಿಸುತ್ತೆ, ಅರ್ಥ ಆಗ್ತಿಲ್ಲ ಅನ್ಸುತ್ತೆ. ಈ ಮನೆಯಲ್ಲಿ ತಮಾಷೆ ಮಾಡಬಾರ್ದಾ? ಟಾಸ್ಕ್‌ನಲ್ಲಿ ತಲೆ ಇಲ್ಲ ಅಂದ್ರೆ ನಾಮಿನೇಷನ್‌ನಲ್ಲೂ ತಲೆ ಇಲ್ಲವಲ್ಲ?” ಎಂದು ಪ್ರಶ್ನಿಸಿದ್ದಾರೆ.

ರಜತ್ ಅವರು ರಾಶಿಕಾಗೆ ಹೇಳಿದ ಮಾತುಗಳು ಗಮನ ಸೆಳೆದಿವೆ. “ರಘು ಸರ್‌ಗೂ ನಾನು ಇದನ್ನೇ ಹೇಳಿದ್ದೇನೆ. ಗಿಲ್ಲಿ ಬಂದರೆ ಜೋಕ್ ಮಾಡ್ತಾನೆ, ಹರ್ಟ್ ಮಾಡ್ತಾನೆ ಅಂತ ಮೂರು ವಾರಗಳಿಂದ ಒಂದೇ ರೀಸನ್ ಕೊಡುತ್ತಾರೆ. ಬೇರೆ ಕಾರಣಗಳನ್ನು ಕೊಡಿ, ಸಾವಿರಾರು ಕಾರಣಗಳಿವೆ” ಎಂದು ರಜತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಶಿಕಾ ತಿರುಗೇಟು ನೀಡಿ “ನಮಗೆ ನೀವೇನೂ ಕಣ್ಣಿಗೆ ಬೀಳಲಿಲ್ಲ” ಎಂದಿದ್ದಾರೆ.

ಆದ್ರೆ ಪ್ರತಿ ಬಾರಿ ಒಂದೇ ಕಾರಣ ಹೇಳುವುದು ಸರಿಯಲ್ಲ ಎಂದು ರಜತ್ ವಾದಿಸುತ್ತಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ನಂತರ ರಜತ್ ಮತ್ತು ಚೈತ್ರಾ ಅವರ ಆಗಮನದಿಂದ ಮನೆಯಲ್ಲಿ ಹೊಸ ಡೈನಾಮಿಕ್ಸ್ ಉಂಟಾಗಿದೆ. ಗಿಲ್ಲಿ ಈ ಬಾರಿ ಸೇಫ್ ಆಗುತ್ತಾರಾ ಅಥವಾ ನಾಮಿನೇಷನ್‌ನಿಂದ ಹೊರಬರುತ್ತಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Exit mobile version