ಬಿಗ್‌ ಬಾಸ್‌ ಬಂದ್‌: ಡಿಕೆಶಿ ಕಲಾವಿದರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ-ಜೆಡಿಎಸ್ ಆರೋಪ

Untitled design 2025 10 08t153208.820

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಗೆ ಜಿಲ್ಲಾಡಳಿತದಿಂದ ಬೀಗ ಹಾಕಲಾಗಿದೆ. ಇದರಿಂದ ಉಂಟಾದ ರಾಜಕೀಯ ಚರ್ಚೆಯಲ್ಲಿ, ಜನತಾ ದಳ (ಜೆಡಿಎಸ್) ಪಕ್ಷವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಲಾವಿದರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ.

ಮಂಗಳವಾರ ಸಂಜೆ, ಬೆಂಗಳೂರು ದಕ್ಷಿಣ ಜಿಲ್ಲಾ ಆಡಳಿತ ಯಾವುದೇ ಅಧಿಕೃತ ಅನುಮತಿ ಇಲ್ಲದೆ ಕಾರ್ಯನಿರ್ವಹಿಸಿದ್ದು ಮತ್ತು ಜಲ ಮಾಲಿನ್ಯ ಸೃಷ್ಟಿಸಿದ್ದು ಸೇರಿದಂತೆ ಹಲವಾರು ಆರೋಪಗಳ ಮೇರೆಗೆ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಿತ್ತು. ಈ ಕ್ರಮದಿಂದಾಗಿ ಶೋ ತಾತ್ಕಾಲಿಕವಾಗಿ ನಿಲುಗಡೆಗೊಂಡಿತು ಮತ್ತು ಸ್ಪರ್ಧಿಗಳನ್ನು ಸ್ಟುಡಿಯೋದಿಂದ ಬೇರೆಡೆಗೆ ಸ್ಥಳಾಂತರಿಸಲಾಯಿತು.

ಶೋ ಸ್ಥಗಿತಗೊಂಡ ನಂತರ, ಜೆಡಿಎಸ್ ಪಕ್ಷದ ಪ್ರತಿನಿಧಿಗಳು, ಉಪಮುಖ್ಯಮಂತ್ರಿ ಶಿವಕುಮಾರ್ ಕಲಾವಿದರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಹಿಂದೆ ನಡೆದಿದ್ದ ಒಂದು ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್, ಯಾರ್ಯಾರಿಗೆ ನಟ್ಟು ಬೋಲ್ಟು ಟೈಟು ಮಾಡಬೇಕಿದೆ ಗೊತ್ತಿದೆ ಎಂದು ಹೇಳಿದ್ದರು. ಹೀಗಾಗಿ ಜೆಡಿಎಸ್ ಡಿಕೆ ಶಿವಕುಮಾರ್‌ ಮೇಲೆ ಆರೋಪ ಮಾಡಿದೆ.ಬಿಗ್ ಬಾಸ್ ಶೋ ಮನೆಗೆ ಬೀಗ ಹಾಕಿದ್ದು ಕೇವಲ ನಿಯಮಗಳ ಉಲ್ಲಂಘನೆಯ ವಿಚಾರವಾಗಿ ಉಳಿಯದೆ, ರಾಜಕೀಯ ವಿವಾದ ವಿವಾದ ಸೃಷ್ಠಿಸಿದೆ.

Exit mobile version