ಬಿಗ್‌ ಬಾಸ್‌ ಮನೆಯಿಂದ ಹೊರನಡೆದ ಸ್ಪರ್ಧಿಗಳು

Untitled design 2025 10 07t202908.070

ಬಿಗ್ ಬಾಸ್ ಕನ್ನಡ ಸೀಸನ್ 12 ಗೆ ಅಧಿಕೃತವಾಗಿ ಬೀಗ ಬಿದ್ದಿದೆ. ಈ ಕ್ಷಣದಿಂದಲೇ ಶೂಟಿಂಗ್ ಸಂಪೂರ್ಣವಾಗಿ ರದ್ದಾಗಿದೆ. ಎಲ್ಲಾ ಕ್ಯಾಮೆರಾಗಳು ಪ್ಯಾಕ್ ಆಗಿವೆ, ಕಲರ್‌ಫುಲ್‌ ಆಗಿದ್ದ ಮನೆಯ ಲೈಟ್‌ಗಳು ಆಫ್ ಆಗಿವೆ, ಮೇನ್ ಸ್ವಿಚ್ ಆಫ್ ಮಾಡಿ, ಮುಖ್ಯ ದ್ವಾರವನ್ನು ಬಂಧಿಸಲಾಗಿದೆ. 

ಇನ್ನೂ ಬಿಗ್‌ ಬಾಸ್‌ ಆಯೋಜಕರು ನಾಳೆಯೇ ಹೈಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿ, ತ್ವರಿತ ವಿಚಾರಣೆ ಮಾಡಲು ಮನವಿ ಮಾಡಲು ನಿರ್ಧರಿಸಿದ್ದಾರೆ.ಒಂದು ವೇಳೆ ಹೈಕೋರ್ಟ್ ಅರ್ಜಿಯನ್ನು ಪುರಸ್ಕರಿಸಿದರೆ, ಬಿಗ್ ಬಾಸ್‌ಗೆ ರಿಲೀಫ್ ಸಿಗಬಹುದು. ಆದರೆ ಅರ್ಜಿ ತಿರಸ್ಕೃತವಾದಲ್ಲಿ, ಶೋ ಮುಂದಿನ ಭವಿಷ್ಯ ಮತ್ತಷ್ಟು ಸಂಕಷ್ಟಕ್ಕೀಡಾಗಬಹುದು. 

ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದು ಏಕಾಏಕಿ ಕ್ರಮವಲ್ಲ ಎಂಬುದು ಇಲ್ಲಿ ಗಮನಾರ್ಹ. ರಾಮನಗರ ಕಂದಾಯ ಅಧಿಕಾರಿಗಳು 2024ರ ಮಾರ್ಚ್ ಮತ್ತು ಜೂನ್‌ನಲ್ಲಿ ಎರಡು ಬಾರಿ ಪರಿಶೀಲನೆ ನೋಟಿಸ್ ನೀಡಿದ್ದರು. 2024ರ ಏಪ್ರಿಲ್‌ನಲ್ಲಿ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಕಳೆದ ವರ್ಷ ಮಾರ್ಚ್‌ನಿಂದಲೇ ನೋಟಿಸ್ ಮೇಲೆ ನೋಟಿಸ್ ನೀಡಿತ್ತು.

ಅಂತಿಮವಾಗಿ, ಸೆಪ್ಟೆಂಬರ್ 16ರಂದು ನಡೆದ ರಾಜ್ಯ ಮಟ್ಟದ ಪರಿಸರ ಸಮಿತಿ (SLEC) ಸಭೆಯಲ್ಲಿ ಬೀಗ ಹಾಕುವ ನಿರ್ಣಯಕ್ಕೆ ಮುಹೂರ್ತ ನಿಗದಿಯಾಯಿತು. ಈ ನಿರ್ಣಯದ ನಂತರ ಜಾಲಿವುಡ್ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲೇರಿತು, ಆದರೆ ಅಂತಿಮವಾಗಿ ಬೀಗ ಹಾಕುವ ಕ್ರಮ ಜಾರಿಯಾಗಿದೆ.ಸ್ಪರ್ಧಿಗಳನ್ನು ಕರೆದೊಯ್ಯಲು ಹೊರಗಡೆ 13 ಕಾರುಗಳು ಸಜ್ಜಾಗಿ ನಿಂತಿವೆ. ಆದರೆ, ಪ್ರಸ್ತುತ ಪೊಲೀಸರ ವತಿಯಿಂದ ನಡೆಯುತ್ತಿರುವ ವಿಚಾರಣೆಯ ನಂತರವೇ ಸ್ಪರ್ಧಿಗಳು ಎಲ್ಲಿಗೆ ಮತ್ತು ಹೇಗೆ ಸಾಗಿಸಲ್ಪಡುತ್ತಾರೆ ಎಂಬುದು ಸ್ಪಷ್ಟವಿಲ್ಲ. 

Exit mobile version