ಬಿಗ್‌ಬಾಸ್‌ ಮನೆಗೆ ಕಿಚ್ಚ ಸುದೀಪ್‌ ಎಂಟ್ರಿ

Untitled design 2025 09 28t185820.699

ಈ ಬಾರಿ ದೊಡ್ಡಮನೆಯನ್ನು ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಿರ್ಮಾಣ ಮಾಡಲಾಗಿದೆ. ವಿಶೇಷವೆಂದರೆ, ಬಿಗ್ ಬಾಸ್ ಮನೆಯ ಸೆಟ್ ಅನ್ನು ಮೈಸೂರು ಅರಮನೆಯ ಥೀಮ್‌ನಲ್ಲಿ ನಿರ್ಮಿಸಲಾಗಿದೆ. ದಸರಾ ಉತ್ಸವದ ವೇಳೆಯಲ್ಲಿ ಶೋ ಪ್ರಾರಂಭವಾಗುತ್ತಿರುವುದರಿಂದ, ಈ ಥೀಮ್ ಸಂಪೂರ್ಣವಾಗಿ ಹೊಂದಿಕೆಯಾಗಿದೆ. ಮನೆಯ ವಿನ್ಯಾಸವು ಕರ್ನಾಟಕದ ಶ್ರೀಮಂತ ಸಂಪ್ರದಾಯ, ಇತಿಹಾಸ, ಪ್ರಾದೇಶಿಕತೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿದ್ದು, ಕನ್ನಡಿಗರ ಹೃದಯವನ್ನು ಗೆದ್ದಿದೆ ಎನ್ನಬಹುದು.

 ಬಿಗ್ ಬಾಸ್ನ ಅಧಿಕೃತ ಸ್ಪರ್ಧಿಗಳು ದೊಡ್ಡಮನೆಗೆ ಪ್ರವೇಶಿಸುವುದಕ್ಕೂ ಮುನ್ನ, ಕಾಮನ್ ಮ್ಯಾನ್‌ಗಳಿಗೆ ಮನೆ ನೋಡುವ ಅವಕಾಶ ನೀಡಲಾಗಿತ್ತು. ಸ್ಪರ್ಧಿಗಳ ಎಂಟ್ರಿಗೆ ಮುಂಚೆಯೇ ಸಾಮಾನ್ಯ ಜನತೆಯು ದೊಡ್ಡಮನೆಯೊಳಗೆ ಪ್ರವೇಶಿಸಿ, ಅದರ ಅಂದವನ್ನು ನೋಡಿ ಸಖತ್ ಖುಷಿ ಪಟ್ಟಿದ್ದಾರೆ. 

ಹೊಸ ಸ್ಟೈಲ್‌ನಲ್ಲಿ ಕಿಚ್ಚ ಸುದೀಪ್

ನಿರೂಪಕ ಕಿಚ್ಚ ಸುದೀಪ್ ಅವರು ಈ ಬಾರಿ ನ್ಯೂ ಸ್ಟೈಲ್ ಮತ್ತು ನ್ಯೂ ಲುಕ್‌ನಲ್ಲಿ ಮಿಂಚಿದ್ದಾರೆ. ಸಮಾರಂಭದಲ್ಲಿ ಸುದೀಪ್ ಅವರ ಸಿನಿಮಾಗಳ ಹಿಟ್ ಹಾಡುಗಳ ಸಂಗೀತವು ವಾತಾವರಣವನ್ನು ಉತ್ಸಾಹದಿಂದ ತುಂಬಿಸಿದ್ದವು. ಪ್ರೇಕ್ಷಕರನ್ನು ಆಹ್ಲಾದಿತರಾಗಿಸಿದ ಸುದೀಪ್ ಅವರು, ಪ್ರತಿ ಬಾರಿಯಂತೆ ಈ ಬಾರಿಯೂ ಅಭಿಮಾನಿಗಳಿಗಾಗಿ ವಿಶೇಷವಾದ ಪ್ರವೇಶವನ್ನು ನೀಡಿದರು.ಗ್ರ್ಯಾಂಡ್ ಓಪನಿಂಗ್ ಸಮಾರಂಭದಲ್ಲಿ, ಸ್ಪರ್ಧಿಗಳು ಒಬ್ಬೊಬ್ಬರಾಗಿ ವೇದಿಕೆಗೆ ಆಗಮಿಸಿ ದೊಡ್ಡಮನೆಗೆ ಸೇರಿಕೊಂಡರು. ಈ ಬಾರಿ ಯಾರು ಯಾರು ಸ್ಪರ್ಧಿಗಳಾಗಿ ದಾಪುಗಾಲು ಇಡುತ್ತಾರೆ ಎಂಬ ಕುತೂಹಲವನ್ನು ಕಾರ್ಯಕ್ರಮವು ಸೃಷ್ಟಿಸಿದೆ. ಪ್ರತಿ ಸೀಸನ್‌ಗಿಂತ ಭಿನ್ನವಾಗಿ ಸ್ಪರ್ಧಿಗಳು ಮನೆಗೆ ಪ್ರವೇಶಿಸುವ ರೀತಿಯೂ ಹೊಸತನವನ್ನು ಕಾಣಿಸಿತು.

 

Exit mobile version