ಗಿಲ್ಲಿಯನ್ನು ಕಳಪೆ ಕೊಡುವ ಬರದಲ್ಲಿ, ಕಾವ್ಯ ಗೌರವಕ್ಕೆ ಧಕ್ಕೆ ತಂದ್ರಾ ಧೃವಂತ್..?

Untitled design 2025 11 07t194116.808

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮತ್ತೊಮ್ಮೆ ಗಲಾಟೆಯ ಜ್ವಾಲೆಯು ಉರಿದಿದೆ. ಗಿಲ್ಲಿ ನಟರಾಜ್ ಅವರನ್ನು ಕಳಪೆ ಆಟಗಾರ ಎಂದು ಆರೋಪಿಸಿದ ದ್ರುವಂತ್ ಅವರು, ತಮ್ಮ ವಾದಕ್ಕೆ ಕಾವ್ಯ ಅವರ ಹೆಸರನ್ನು ಬಳಸಿಕೊಂಡು ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿದ್ದಾರೆ. ಪ್ರತಿವಾರ ನಡೆಯುವ ಉತ್ತಮ ಮತ್ತು ಕಳಪೆ ಆಟಗಾರ ಆಯ್ಕೆಯಲ್ಲಿ ದ್ರುವಂತ್ ಗಿಲ್ಲಿಯನ್ನು ಕಳಪೆ ಎಂದು ಹೆಸರಿಸಿದ್ದಾರೆ. ಆದರೆ, ಅದಕ್ಕೆ ನೀಡಿದ ಕಾರಣವು ಮನೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ಉತ್ತಮ ಆಟಗಾರ ಮತ್ತು ಕಳಪೆ ಆಟಗಾರನ ಆಯ್ಕೆ ನಡೆಯುತ್ತದೆ. ಈ ವಾರವೂ ಅದೇ ರೀತಿ ಕಳಪೆ ಆಟಗಾರನ ಆಯ್ಕೆಯ ಸಮಯದಲ್ಲಿ ದ್ರುವಂತ್ ಗಿಲ್ಲಿಯನ್ನು ಆರಿಸಿದ್ದಾರೆ. ಕೇವಲ ಹೆಸರು ಹೇಳಿದ್ದರೆ ಸಮಸ್ಯೆಯಿಲ್ಲ, ಆದರೆ ಕಾರಣ ವಿವರಿಸುವಾಗ ದ್ರುವಂತ್ ಹೇಳಿದ್ದು: “ಗಿಲ್ಲಿ ಬಗ್ಗೆ ಹಾಗೂ ಅವರ ಕಾವ್ಯ ಬಗ್ಗೆ ಬಿಟ್ರೆ ಬೇರೆ ಎಲ್ಲರ ಬಗ್ಗೆಯೂ ತಮಾಷೆ ಮಾಡಿಕೊಂಡಿರುತ್ತಾರೆ. ಇದು ಕಾವ್ಯ ಅವರಿಗೆ ತೀವ್ರ ಅಸಮಾಧಾನ ಉಂಟುಮಾಡಿದೆ. “ಅವರ ಕಾವ್ಯ ಎಂದು ಹೇಳುವ ಅವಶ್ಯಕತೆ ಇಲ್ಲ ಎಂದು ಕಾವ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

ದ್ರುವಂತ್ ಇದಕ್ಕೆ ಇದು ನನ್ನ ದೃಷ್ಟಿಕೋನ ಎಂದು ಹೇಳಿದ್ದಾರೆ. ಆದರೆ, ಕಾವ್ಯ ಇದನ್ನು ಸ್ವೀಕರಿಸದೇ, ನಿಮ್ಮ ಅಭಿಪ್ರಾಯ ಹೇಳುವುದಕ್ಕಾಗಿ ಇನ್ನೊಬ್ಬರ ಕ್ಯಾರೆಕ್ಟರ್ ಹಾಳು ಮಾಡಬಾರದು ಎಂದು ತೀವ್ರವಾಗಿ ಟೀಕಿಸಿದ್ದಾರೆ. ಗಿಲ್ಲಿಯೂ ದ್ರುವಂತ್‌ಗೆ ಸರಿಯಾಗಿ ಉತ್ತರ ನೀಡಿದ್ದಾರೆ. ತಮ್ಮ ಬಗ್ಗೆ ಯಾವ ಅಭಿಪ್ರಾಯ ಇದೆಯೋ ಅದನ್ನು ಹೇಳಬೇಕು, ಇನ್ನೊಬ್ಬರನ್ನು ಮಧ್ಯೆ ತರುವುದು ಸರಿಯಲ್ಲ ಎಂದು ದೃವಂತ್‌ಗೆ ಚಳಿಬಿಡಿಸಿದ್ದಾರೆ.

ಮೊದಲು ಗಿಲ್ಲಿ ಬೇರೆಯವರ ಹೆಸರು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂದು ಆರೋಪಿಸಿದ್ದ ದ್ರುವಂತ್, ಈಗ ಅದೇ ದಾರಿಯಲ್ಲಿ ಸಾಗುತ್ತಿರುವಂತೆ ಕಾಣುತ್ತಿದೆ. ಗಿಲ್ಲಿಯನ್ನು ಕಳಪೆ ಎಂದು ಹೇಳುವಾಗ ಕಾವ್ಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಕಾವ್ಯ ಆರೋಪಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ತಮ್ಮ ಕಾಮಿಡಿ ಮತ್ತು ಎಂಟರ್‌ಟೈನ್‌ಮೆಂಟ್ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಆದರೆ, ಇದು ಕೆಲವರಿಗೆ ಕಣ್ಣುಕುಕ್ಕುತ್ತಿದೆ. ಮೊದಲು ಅಶ್ವಿನಿ ಗೌಡ, ನಂತರ ರಿಷಾ ಗೌಡ ಮತ್ತು ಈಗ ದ್ರುವಂತ್ ಗಿಲ್ಲಿ ವಿರುದ್ಧ ನಿಂತಿದ್ದಾರೆ. ದ್ರುವಂತ್ ಮಲ್ಲಮ್ಮ ಎಲಿಮಿನೇಷನ್ ನಂತರ ಬದಲಾವಣೆ ಕಂಡಿದ್ದಾರೆ. ಮೊದಲು ಅಶ್ವಿನಿ ವಿರುದ್ಧ ಇದ್ದ ಅವರು ಈಗ ಅವರ ಪಕ್ಷ ಸೇರಿ ಗಿಲ್ಲಿ ಮತ್ತು ಕಾವ್ಯ ವಿರುದ್ದ ಕಿಡಿಕಾರಿದ್ದಾರೆ.

Exit mobile version