ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಜಂಟಿ ಸ್ಪರ್ಧಿಗಳು ನಿಯಮ ಉಲ್ಲಂಘನೆ ಮಾಡಿದ್ದರೂ, ಅದರ ಶಿಕ್ಷೆಗೆ ಬಲಿಯಾದವರು ಒಂಟಿ ಸ್ಪರ್ಧಿಗಳು. ಈ ಅನಿರೀಕ್ಷಿತ ತೀರ್ಪು ಮನೆಯಲ್ಲಿ ಬಿರುಗಳನ್ನು ಸೃಷ್ಟಿಸಿದೆ.
ಬಿಗ್ ಬಾಸ್ ಮನೆಯಲ್ಲಿ ಜಂಟಿ ಸ್ಪರ್ಧಿಗಳಿಗೆ ಮಲಗುವ ಹೊರತುಪಡಿಸಿ, ಉಳಿದ ಎಲ್ಲ ಸಮಯದಲ್ಲಿ ಒಟ್ಟಿಗೆ ಇರಬೇಕು ಎಂಬ ಕಟ್ಟುನಿಟ್ಟಾದ ನಿಯಮವಿದೆ. ಆದರೆ, ಅನೇಕ ಜಂಟಿ ಸ್ಪರ್ಧಿಗಳು ಈ ನಿಯಮವನ್ನು ಉಲ್ಲಂಘಿಸಿ, ತಮ್ಮನ್ನು ಬಂಧಿಸಿರುವ ಹಗ್ಗವನ್ನು ಕಟ್ಟಿಕೊಳ್ಳದೆ, ಒಂಟೊಂಟಿಯಾಗಿ ಸುತ್ತಾಡಿದ್ದಾರೆ. ಮನೆಯಲ್ಲಿ ಜಂಟಿ ಸ್ಪರ್ಧಿಗಳ ಮೇಲ್ವಿಚಾರಣೆ ಒಂಟಿ ಸ್ಪರ್ಧಿಗಳ ಹೊಣೆಗಾರಿಕೆಯಾಗಿತ್ತು. ತಮ್ಮ ಅಡಿಯಾಳುಗಳಂತಿರುವ ಜಂಟಿ ಸ್ಪರ್ಧಿಗಳನ್ನು ಒಂಟಿಗಳು ಸರಿಯಾಗಿ ನೋಡಿಕೊಳ್ಳದಿದ್ದದ್ದು ಬಿಗ್ ಬಾಸ್‌ಗೆ ಕೋಪ ತಂದಿತ್ತು.
ತಪ್ಪು ಮಾಡಿದವರು ಜಂಟಿ ಸ್ಪರ್ಧಿಗಳಾದರೂ, ಶಿಕ್ಷೆ ಒಂಟಿ ಸ್ಪರ್ಧಿಗಳಿಗೆ. ಬಿಗ್ ಬಾಸ್ ಅವರು ನೀಡಿದ ಶಿಕ್ಷೆಯು ಎರಡು ಭಾಗಗಳಲ್ಲಿತ್ತು:
-
ಆಹಾರ ಸಾಮಗ್ರಿ ವಾಪಸಾತಿ: ಒಂಟಿ ಸ್ಪರ್ಧಿಗಳು ಗೆದ್ದು ತಂದಿದ್ದ 14 ದಿನಸಿ ಸಾಮಗ್ರಿಗಳ ಪೈಕಿ 11 ಸಾಮಗ್ರಿಗಳನ್ನು ತಕ್ಷಣ ಸ್ಟೋರ್ ರೂಮ್‌ಗೆ ತಂದಿಡಬೇಕೆಂದು ಆದೇಶಿಸಲಾಯಿತು. ಇದರಿಂದಾಗಿ ಅವರು “ಉಪವಾಸದಲ್ಲೇ ಉಳಿಯುವ” ಗಂಭೀರ ಪರಿಸ್ಥಿತಿ ಉಂಟಾಗಿದೆ.
-
ಜಂಟಿ ಸ್ಪರ್ಧಿಗಳ ಮೇಲ್ವಿಚಾರಣೆಯ ಜವಾಬ್ದಾರಿ: ಜಂಟಿ ಸ್ಪರ್ಧಿಗಳನ್ನು ಮತ್ತೆ ಉತ್ತಮವಾಗಿ ನೋಡಿಕೊಳ್ಳುವ ಜವಾಬ್ದಾರಿ ಒಂಟಿ ಸ್ಪರ್ಧಿಗಳ ಮೇಲೆಯೇ ಉಳಿದಿದೆ.
ಈ ಶಿಕ್ಷೆಯನ್ನು ಪ್ರಕಟಿಸಿದಾಗ, ಮನೆಯಲ್ಲಿದ್ದ ಬಹುತೇಕ ಎಲ್ಲಾ ಸ್ಪರ್ಧಿಗಳು – ಜಾಹ್ನವಿ, ಚಂದ್ರಪ್ರಭ, ರಾಶಿಕಾ, ಸ್ಪಂದನಾ, ಮಲ್ಲಮ್ಮ, ಅಭಿಷೇಕ್, ಧ್ರುವ್, ಆಶ್ವಿನಿ – ಎಲ್ಲರೂ “ಫುಲ್ ಡಲ್” ಆಗಿ, ನಿರಾಶೆ ಮತ್ತು ಕೋಪವನ್ನು ವ್ಯಕ್ತಪಡಿಸಿದ್ದರೆ, ಗಿಲ್ಲಿ ನಟ ಮಾತ್ರ ಸಖತ್ ಖುಷಿಯಲ್ಲಿ ನಗುತ್ತಿದ್ದ.
ಸದ್ಯ ಮನೆಯಲ್ಲಿ 6 ಒಂಟಿ ಸ್ಪರ್ಧಿಗಳು ಮತ್ತು 12 ಜಂಟಿ ಸ್ಪರ್ಧಿಗಳು ಇದ್ದು, ಈ ಶಿಕ್ಷೆಯು ಮನೆಯ ಸಮತೋಲನವನ್ನು ಪೂರ್ಣವಾಗಿ ಬದಲಾಯಿಸಿಬಿಟ್ಟಿದೆ. ಗಿಲ್ಲಿ ನಟ ಅವರು ಕಾಮಿಡಿ ಕಿಲಾಡಿಗಳು ಮುಂತಾದ ಶೋಗಳಲ್ಲಿ ತಮ್ಮ ಪ್ರಾಪರ್ಟಿ ಕಾಮಿಡಿ ಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಕೆಲಸ ಇಲ್ಲದೆ ಹಣಕಾಸಿನ ತೊಂದರೆ ಎದುರಿಸುತ್ತಿದ್ದ ಎಂದು ಕೂಡಾ ತಿಳಿದುಬಂದಿದೆ.
