ಬಿಗ್ ಬಾಸ್ 12: ಮಧ್ಯರಾತ್ರಿ ಎಲಿಮಿನೇಷನ್‌, ಸತೀಶ್ ಕಡಬಂಗೆ ಗೇಟ್ ಪಾಸ್..!

Untitled design 2025 10 16t231330.147

ಬೆಂಗಳೂರು: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12ರಲ್ಲಿ ಮಧ್ಯರಾತ್ರಿ ಅನಿರೀಕ್ಷಿತ ತಿರುವು ನೀಡಿದೆ. ಗ್ರ್ಯಾಂಡ್ ಫಿನಾಲೆಗೆ ಮುನ್ನವೇ ಒಬ್ಬ ಸ್ಪರ್ಧಿಗೆ ಗೇಟ್ ಪಾಸ್ ನೀಡಲು ಮುಂದಾಗಿದೆ. 

ಗಾಢ ನಿದ್ರೆಯಲ್ಲಿದ್ದ ಸ್ಪರ್ಧಿಗಳನ್ನು ಮಧ್ಯರಾತ್ರಿ ಸೈರನ್ ಮೂಲಕ ಎಬ್ಬಿಸಿದ ಬಿಗ್ ಬಾಸ್, ತಮಗೆ ಬೇಡವಾದ ಸ್ಪರ್ಧಿಯನ್ನು ನಾಮಿನೇಷನ್ ಮಾಡಲು ಹೇಳಿದ್ದರು. ಈ ಪ್ರಕ್ರಿಯೆಯಲ್ಲಿ ಬಹುತೇಕ ಸ್ಪರ್ಧಿಗಳು ಸತೀಶ್ ಕಡಬಂ ಹೆಸರನ್ನು ಸೂಚಿಸಿದ್ದರು. ಬಿಗ್ ಬಾಸ್ ನಿಯಮದಂತೆ, ಯಾರ ಫೋಟೋ ದೊಡ್ಡಮನೆಯ ಮುಖ್ಯದ್ವಾರಕ್ಕೆ ಅತಿ ಸಮೀಪವಾಗಿರುತ್ತದೋ ಅವರು ಮನೆಯಿಂದ ಹೊರಹೋಗಬೇಕೆಂದು ನಿರ್ಧಾರವಾಗಿತ್ತು.

ಈ ನಿಯಮದ ಪ್ರಕಾರ ಸತೀಶ್ ಕಡಬಂ ಅವರ ಫೋಟೋ ಮುಖ್ಯದ್ವಾರಕ್ಕೆ ಸಮೀಪದಲ್ಲಿದ್ದುದರಿಂದ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈ ಮಧ್ಯವೇ ಎಲಿಮಿನೇಷನ್ ಪ್ರಕ್ರಿಯೆ ಬಿಗ್ ಬಾಸ್ ಸೀಸನ್ 12ರ ಮೊದಲ ಮಹತ್ತ್ವಪೂರ್ಣ ತಿರುವಾಗಿದೆ.

Exit mobile version