ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಈ ಬಾರಿ ವೀಕ್ಷಕರಿಗೆ ಸಂಪೂರ್ಣ ಹೊಸ ಮನರಂಜನೆ ನೀಡುತ್ತಿದೆ. ಹಬ್ಬದ ಸಮಯದಲ್ಲಿ ಪ್ರಾರಂಭವಾದ 2.0 ಹಂತದಲ್ಲಿ ಮನೆಯ ವಾತಾವರಣ ಸಂಪೂರ್ಣ ಬದಲಾಯಿಸಿದೆ. ಮೊದಲ ಫಿನಾಲೆ ಬಳಿಕ, ಸ್ಪರ್ಧಿಗಳ ನಡುವೆ ಉಂಟಾದ ಮೈತ್ರಿ ಈಗ ಮತ್ತಷ್ಟು ತೀವ್ರವಾಗಿದೆ. ತಮ್ಮದೇ ರಾಜ್ಯಭಾರವನ್ನು ಮೆರೆದಾಡುತ್ತಿದ್ದ ಸ್ಪರ್ಧಿಗಳ ಮನಸ್ಸಿನಲ್ಲಿ ನಡುಕ ಮೂಡಿಸಲು ಬಿಗ್ ಬಾಸ್ ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನು ಪರಿಚಯಿಸಿದ್ದಾರೆ. ಈ ಸಲ, ಮೂವರು ಸ್ಪರ್ಧಿಗಳು ಮನೆಯಲ್ಲಿ ಕಾಲಿಟ್ಟ ತಕ್ಷಣವೇ ಮತ್ತಷ್ಟು ರಂಗೇರಿದೆ.
ಬೆಳ್ಳಂಬೆಳಿಗ್ಗೆ, ಮೈಕ್ ಹಿಡಿದುಕೊಂಡು ಮನೆಗೆ ಕಾಲಿಟ್ಟ ರಘು, “ವೇಕ್-ಅಪ್ ಟೈಮ್ ರೆಸಾರ್ಟ್‌ಗೆ ಬಂದಿಲ್ಲ ನೀವು.. ಬಿಗ್ ಬಾಸ್ ಮನೆಗೆ ಬಂದಿರೋದು ನೀವು” ಎಂದು ಸ್ಪರ್ಧಿಗಳ ಗಮನ ಸೆಳೆದಿದ್ದಾರೆ. ಇಂತಹ ಶಕ್ತಿಶಾಲಿ ಪ್ರವೇಶದಿಂದಲೇ ಮನೆಯಲ್ಲಿ ಹೊಸ ಉತ್ಸಾಹ ಮೂಡಿತು.
ರಘು ಈ ಟಾಸ್ಕ್‌ನಲ್ಲಿಯೇ ಧ್ರುವ್ ಮತ್ತು ಕಾಕ್ರೋಚ್ ಸುಧಿ ವಿರುದ್ಧ ನಿರಂತರವಾಗಿ ನೀರು ಹಾಕುವ ಮೂಲಕ ತಮ್ಮ ದೃಢಸಂಕಲ್ಪವನ್ನು ತೋರಿಸಿದ್ದಾರೆ. ಈ ನಡುವೆ, ಅಶ್ವಿನಿ ಗೌಡ ರಘು ಅವರ ಗಮನಕ್ಕೆ ಬಂದಿದ್ದಾರೆ. ರಘು, ಅಶ್ವಿನಿಯ ಹೆಸರನ್ನು ಉಲ್ಲೇಖಿಸಿ, “ಔಟ್‌ಸೈಡ್‌ನಲ್ಲಿ ಹೆಣ್ಣಿಗೆ ಫೈಟ್ ಮಾಡ್ತಾರೆ, ಅದೇ ಹೆಣ್ಣಿಗೆ ಮನೆ ಒಳಗೆ ಪರ್ಸನಲ್ ಪೋಸಿಷನ್ ತೋರಿಸಿಕೊಡೋಕೆ ಟ್ರೈ ಮಾಡ್ತಾರೆ” ಎಂದಿದ್ದಾರೆ.
ಅಶ್ವಿನಿ, ರಘು ಮಾತುಗಳಿಂದ ರೊಚ್ಚಿಗೆದ್ದು, “ನೀವು ಹೇಳಿದ್ದನ್ನ ಕೇಳೋಕೆ ನಾವೇನು ಪಪ್ಪೆಟ್‌ಗಳಲ್ಲ, ನಾವಿಲ್ಲಿ” ಎಂದಿದ್ದಾರೆ. ಇದರಿಂದ ರಘು ಕೋಪಗೊಂಡು, “ಏನು ಪಪ್ಪೆಟ್? ನೀನು ಪಪ್ಪೆಟ್ ಮಾಡಿಕೊಂಡಿರುವುದು ಇಲ್ಲಿ” ಎಂದು ಪ್ರತಿಕ್ರಿಯಿಸಿದ್ದಾರೆ. ‘ನೀನು’ ಎಂದು ಏಕವಚನದಲ್ಲಿ ಮಾತನಾಡಿದ ಮಾತು, ಅಶ್ವಿನಿಗೆ ಮತ್ತಷ್ಟು ಸಿಟ್ಟು ತಂದುಕೊಟ್ಟಿದೆ.
ಅಶ್ವಿನಿ, “ಏಕವಚನದಲ್ಲಿ ಮಾತನಾಡಬೇಡಿ” ಎಂದು ಕೈ ತೋರಿದರು. ಇದಕ್ಕೆ ತಿರುಗೇಟು ನೀಡಿದ ರಘು, “ನಾನು ಮಾತಾಡ್ತೀನಿ.. ಕೈಯಲ್ಲಿ ತೋರಿಸ್ಕೋ ಬೇಡ ನನ್ನ ಹತ್ರ” ಎಂದು ಹೇಳಿದರು. ಈ ಸಂದರ್ಭದಲ್ಲೇ ಜಾನ್ವಿ ಮಧ್ಯೆ ಬಂದು, “ನಮ್ಮ ಹತ್ರ ಬಂದುಬಿಟ್ಟು ಏಕವಚನದಲ್ಲಿ ಎಲ್ಲ ಮಾತನಾಡಿದ್ರೆ ಹೋಗ್ತಾ ಇರಬಹುದು” ಎಂದಿದ್ದಾರೆ.
ಇದರಿಂದ ಅಶ್ವಿನಿ-ರಘು ನಡುವಿನ ವಾದವು ಮತ್ತಷ್ಟು ತೀವ್ರವಾಗಿದೆ. “ಏಯ್.. ಏಯ್..” ಎಂದು ಸದ್ದು ಉಂಟುಮಾಡಿದ ಸಂಭಾಷಣೆ ಮನೆಯಲ್ಲಿ ಹೊಸ ಆಯಾಮ ಮೂಡಿಸಿದೆ. ತೀಕ್ಷ್ಣ ಜಗಳವು ಮನೆಯಲ್ಲಿ ಎಷ್ಟು ಮಟ್ಟಕ್ಕೆ ತಲುಪುತ್ತದೆ ಎಂಬುದನ್ನು ನೋಡಬೇಕಾಗಿದೆ.