ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಕಳೆದ ಕೆಲವು ದಿನಗಳಿಂದ ಗಿಲ್ಲಿ ನಟ (Gilli Nata) ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ವಿಶೇಷವಾಗಿ ವೀಕೆಂಡ್ ಎಪಿಸೋಡ್ ನಂತರ, ಹಲವು ಸ್ಪರ್ಧಿಗಳು ಗಿಲ್ಲಿ ವಿರುದ್ಧ ಒಂದಾಗಿ ಮಾತಾಡುತ್ತಿರುವುದು ಈಗ ಮನೆಯೊಳಗಿನ ದೊಡ್ಡ ಟಾಪಿಕ್ ಆಗಿದೆ. ಇದೀಗ ಧನುಷ್, ಕಾವ್ಯ ಶೈವ (Kavya Shaiva) ಬಳಿ ಧನುಷ್ ಗಿಲ್ಲಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಧನುಷ್ ಅವರು , “ಗಿಲ್ಲಿನೇ ಕೆದಕಿ ಕೆದಕಿ ಅಶ್ವಿನಿ ಹತ್ತಿರ ಜಗಳ ಶುರು ಮಾಡ್ತಾನೆ. ಅವನಿಗೆ ಈಗ ಯಾರೇ ಸಪೋರ್ಟ್ ಇಲ್ಲ. ಕಂಟೆಂಟ್‌ಗಾಗಿ ಹುಡುಕಾಡ್ತಾ ಇದ್ದಾನೆ. ಅಶ್ವಿನಿ ಸೈಲೆಂಟ್ ಆಗಿ ಇದ್ದೀಯಾ ಅಂದ್ರೆ ಅದೇ ಗಿಲ್ಲಿಗೆ ತಲೆನೋವು ಆಗ್ತಿದೆ. ಅಶ್ವಿನಿಗೆ ಯಾವ ಸಮಸ್ಯೆಯೂ ಇಲ್ಲ, ಗಿಲ್ಲಿಗೇ ಸಮಸ್ಯೆ!” ಎಂದು ಕಾವ್ಯ ಬಳಿ ಹೇಳಿದ್ದಾರೆ.
ಈ ಹಿಂದೆ ಸುದೀಪ್ ಅವರು ಅಶ್ವಿನಿ ಗೌಡಗೆ “ವುಮನ್ ಕಾರ್ಡ್ ಆಡಬೇಡ” ಎಂದು ಎಚ್ಚರಿಕೆ ನೀಡಿದ್ದರು. ಅಂದಿನಿಂದ ಅಶ್ವಿನಿ ಸಂಪೂರ್ಣ ಸೈಲೆಂಟ್ ಆಗಿದ್ದಾರೆ. ಆದರೆ ಧನುಷ್ ಇದನ್ನೇ ಗಿಲ್ಲಿಯ ವಿರುದ್ಧ ಆಯುಧವಾಗಿ ಬಳಸಿದ್ದಾರೆ. “ರಘುವಿಗೆ ಗಿಲ್ಲಿ ಇದ್ದರೆ ಮೈಲೇಜ್, ಅಶ್ವಿನಿ ಇದ್ದರೆ ಗಿಲ್ಲಿಗೆ ಮೈಲೇಜ್” ಎಂದು ಸುದೀಪ್ ಅವರೇ ಹೇಳಿದ ಮಾತನ್ನು ಉಲ್ಲೇಖಿಸಿ, ಧನುಷ್ ವಾಗ್ದಾಳಿ ನಡೆಸಿದ್ದಾರೆ.
ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಫ್ಯಾನ್ಸ್ ಧನುಷ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಗಿಲ್ಲಿಗೆ ಯಾರ ಮೈಲೇಜ್‌ನೂ ಬೇಡ. ಅವನೇ ಮನೆಗೂ, ಶೋಗೂ, ನಿಮ್ಮೆಲ್ಲರಿಗೂ ಮೈಲೇಜ್! ಸುಮ್ಮನೆ ಅವನ ಹಿಂದೆ ಬಿದ್ದು ಗೊತ್ತಿಲ್ಲದ ಆರೋಪ ಮಾಡಬೇಡಿ” ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. “ಗಿಲ್ಲಿ ಟೈಟಲ್ ಕನ್ಫರ್ಮ್” ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ.
ಇನ್ನು ಮನೆಯಲ್ಲಿ ಬಿಗ್ ಬಾಸ್ ಸೀಸನ್ 11ರ ಮಾಜಿ ಸ್ಪರ್ಧಿಗಳ ಭರ್ಜರಿ ಎಂಟ್ರಿ ಕೊಟ್ಟಿದ್ದು, ಉಗ್ರಂ ಮಂಜು, ರಜತ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಸೇರಿದಂತೆ ಹಲವು ಸ್ಟಾರ್ ಸ್ಪರ್ಧಿಗಳು ಅತಿಥಿಗಳಾಗಿ ಆಗಮಿಸಿದ್ದಾರೆ. ದೊಡ್ಡ ಮನೆ ಈಗ ನಿಜವಾಗ್ಲೂ “ಬಿಬಿ ರೆಸಾರ್ಟ್” ಆಗಿ ಬದಲಾಗಿದೆ.
ಅತಿಥಿಗಳ ಪೈಕಿ ಎಲ್ಲರ ಗಮನ ಸೆಳೆದಿದ್ದು ಉಗ್ರಂ ಮಂಜು. ಅವರಿಗೆ ಇತ್ತೀಚೆಗೆ ಮದುವೆ ಫಿಕ್ಸ್ ಆಗಿದೆ ಎಂಬ ಸುದ್ದಿಯನ್ನು ಬಿಗ್ ಬಾಸ್ ಅವರೇ ಘೋಷಿಸಿದರು. “ನಮ್ಮ ನಲ್ಮೆಯ ಮಹಾರಾಜ ಮಂಜುಗೆ ಕಂಕಣ ಭಾಗ್ಯ ಕೂಡಿಬಂದಿದೆ” ಎಂದು ಬಿಗ್ ಬಾಸ್ ಹೇಳುತ್ತಿದ್ದಂತೆಯೇ ಮನೆಯವರೆಲ್ಲಾ “ಓಹೋ.. ಕಾಂಗ್ರಾಚುಲೇಷನ್ಸ್” ಎಂದು ಕೂಗಾಡಿದ್ದರು.
ಆದರೆ ಗಿಲ್ಲಿ ಮಾತ್ರ ತಮಾಷೆಯ ಮೂಡ್‌ನಲ್ಲಿ “ಎರಡನೇಯದ್ದಾ.. ಮೂರನೇಯದ್ದಾ?” ಎಂದು ಕೇಳಿಬಿಟ್ಟ. ಈ ಒಂದು ಪ್ರಶ್ನೆಗೆ ಮಂಜು ಖಡಕ್ ಲುಕ್ ಕೊಟ್ಟು, “ಕೆಲವೊಂದು ವಿಷಯಗಳು ಪರ್ಸನಲ್. ನೀನು ಸಪ್ಲೈಯರ್ ಅಲ್ಲ, ನಾನು ಅತಿಥಿಯಲ್ಲ.. ಇನ್ನೊಂದು ಆಗಿಬಿಡ್ತೀವಿ” ಎಂದು ನೇರ ವಾರ್ನಿಂಗ್ ಕೊಟ್ಟಿದ್ದಾರೆ. ಪ್ರೋಮೋದಲ್ಲಿ ಈ ಡೈಲಾಗ್ ಈಗಾಗಲೇ ವೈರಲ್ ಆಗಿದೆ.
ಇಂದಿನ ಎಪಿಸೋಡ್‌ನಲ್ಲಿ ಗಿಲ್ಲಿ ಈ ವಾರ ಎಲ್ಲ ಕಡೆಯಿಂದಲೂ ಟಾರ್ಗೆಟ್ ಆಗುತ್ತಿದ್ದಾರೆ.
