BBK 12: ‘ಅಶ್ವಿನಿ ಸೇಫ್ ಆಗ್ಬೇಕು’: ಕಿಚ್ಚನ ಎದುರು ಗಿಲ್ಲಿ ಶಾಕಿಂಗ್ ಸ್ಟೇಟ್‌ಮೆಂಟ್

Untitled design 2025 11 23T130017.451

ಬಿಗ್‌ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಈಗ ಸಿಕ್ಕಾಪಟ್ಟೆ ಗಲಾಟೆ, ಜಗಳ, ಆರೋಪ-ಪ್ರತ್ಯಾರೋಪಗಳ ನಡುವೆಯೂ ಒಂದು ಜೋಡಿ ಪ್ರೇಕ್ಷಕರ ಮನ ಗೆದ್ದಿದೆ. ಅದು ಗಿಲ್ಲಿ ನಟ (Gilli Nata) ಮತ್ತು ಅಶ್ವಿನಿ ಗೌಡ (Ashwini Gowda) ಅವರ ಜಗಳಗಳು. ಇಬ್ಬರೂ ಒಬ್ಬರನ್ನೊಬ್ಬರು “ಹಾವು-ಮುಂಗಿಸಿ” ಎನ್ನುವಷ್ಟು ತೀವ್ರ ದ್ವೇಷದ ಮಾತುಗಳನ್ನಾಡಿದ್ದರು. ಗಿಲ್ಲಿ ಅಶ್ವಿನಿಯನ್ನು ಟಾರ್ಗೆಟ್ ಮಾಡಿ ಆಡುತ್ತಿದ್ದರೆ, ಅಶ್ವಿನಿಯೂ ಸುಮ್ಮನಿರದೇ ಕೌಂಟರ್ ಕೊಡುತ್ತಿದ್ದರು. ಆದರೆ ಈ ವಾರದ ನಾಮಿನೇಷನ್ ಸಮಯದಲ್ಲಿ ಗಿಲ್ಲಿ ಎಲ್ಲರನ್ನೂ ದಿಗ್ಭ್ರಮೆಗೊಳಪಡಿಸುವಂತೆ ಒಂದು ಪ್ರೀತಿಯ ಘೋಷಣೆ ಮಾಡಿದ್ದಾರೆ.

ನಾಮಿನೇಷನ್ ಸಂದರ್ಭದಲ್ಲಿ “ಯಾರು ಸೇಫ್ ಆಗಬೇಕು ಗಿಲ್ಲಿ?” ಎಂದು ಕಿಚ್ಚ ಸುದೀಪ್ ಗಿಲ್ಲಿಯನ್ನು ಕೇಳಿದರು. ಗಿಲ್ಲಿ ಒಂದು ಸೆಕೆಂಡ್ ಕೂಡ ಯೋಚಿಸದೇ ಉತ್ತರಿಸಿದರು. “ನನ್ನ ಆತ್ಮೀಯರಾದ ಅಶ್ವಿನಿ ಅವರು ಸೇಫ್ ಆಗಬೇಕು ಸಾರ್!” ಎಂದಿದ್ದಾರೆ.

ನಂತರ ಕಿಚ್ಚನವರು ತಮಾಷೆಯಲ್ಲಿ “ಅರೆ, ಇದಕ್ಕೆ ಕಾರಣ ಬೇಕಲ್ಲವೇ?”, “ಅಶ್ವಿನಿ ಇಲ್ಲದಿದ್ದರೆ ಬಿಗ್‌ ಬಾಸ್ ಬೋರ್ ಹೊಡೀತಾ?” ಎಂದು ಪ್ರಶ್ನಿಸಿದ್ದಾರೆ. ಎಂದು ಕೇಳಿದರು. ಮತ್ತೊಮ್ಮೆ ಗಿಲ್ಲಿ ಧೈರ್ಯವಾಗಿ “ಅಶ್ವಿನಿ ಅವರು ನನಗೆ ಇಷ್ಟ ಸಾರ್!” ಎಂದು ಹೇಳಿದರು.

ಕಿಕಿಚ್ಚ ಸುದೀಪ್ ಕೂಡಾ ಇದನ್ನು ಕೇಳಿ ನಕ್ಕು, “ಬಾಗಿಲು ಓಪನ್ ಮಾಡಿ ಅಂತ ನೀವು ಹೇಳ್ತಾ ಇದ್ರಿ!” ಅಂತ ಕೇಳಿದರು. ಗಿಲ್ಲಿ, “ಇಲ್ಲ ಸಾರ್, ಬಾಗಿಲು ಓಪನ್ ಮಾಡಲ್ಲ ಅನ್ನೋ ಧೈರ್ಯಕ್ಕೋಸ್ಕರ ಹೇಳಿದ್ದು. ರೂಲ್ ಬುಕ್ ಪ್ರಕಾರ ಸುಮ್ಮನೆ ಹೋಗಲು ಆಗೋಲ್ಲ.” ಎಂದು ಉತ್ತರಿಸಿದರು.

ಕಿಚ್ಚನವರು ನಗುತ್ತಲೇ ಕೊನೆಯಲ್ಲಿ “ಅವರ ಹೆಸರು ತೆಗೆದುಕೊಂಡು ಗೆಲ್ಲಬೇಕು ಅನ್ನೋ ಸ್ಟ್ರಾಟಜಿನೋ ಏನೋ ಗೊತ್ತಿಲ್ಲ, ಆದರೆ ಕೇಳಿಕೊಳ್ಳಲು ತುಂಬಾ ಸ್ವೀಟಾಗಿತ್ತು!” ಈ ಸಂಭಾಷಣೆಯ ಕ್ಲಿಪ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆದರೆ ಇದೇ ಗಿಲ್ಲಿ ಕೆಲವೇ ದಿನಗಳ ಹಿಂದೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅಶ್ವಿನಿಯನ್ನು ತೀವ್ರವಾಗಿ ಟೀಕಿಸಿದ್ದರು. ಅಭಿಷೇಕ್ ಮತ್ತು ಅಶ್ವಿನಿ ಗೌಡ ಇಬ್ಬರೂ 12 ನಿಮಿಷಗಳ ಟೈಮಿಂಗ್ ಟಾಸ್ಕ್‌ನಲ್ಲಿ ಸ್ಪರ್ಧಿಸುತ್ತಿದ್ದರು. ಅಶ್ವಿನಿಯ ಲೆಕ್ಕಾಚಾರ ತಪ್ಪಿಸಬಹುದಿತ್ತು ಎಂಬ ಕಾರಣಕ್ಕೆ ಗಿಲ್ಲಿ ಹೋಗಿ ಅವರ ಮೇಲೆ ವ್ಯಕ್ತಿಗತ ಆಗ್ರಹ ತೋಡಿಕೊಂಡಿದ್ದರು. “ಆಟವನ್ನು ಆಟವಾಗಿ ಆಡಬೇಕು, ಇದು ಛೇ ಛೇ” ಎಂದು ಮಿತಿ ಮೀರಿದ ಮಾತುಗಳನ್ನಾಡಿದ್ದರು. ಆಗ ಅಶ್ವಿನಿ ಗಾಬರಿಯಾಗಿ ಕಣ್ಣೀರು ಹಾಕಿದ್ದರು. ನಂತರ ಗಿಲ್ಲಿಯೇ ಮುಂದೆ ಬಂದು ಕ್ಷಮೆ ಕೇಳಿದ್ದರು.

ಈ ವಾರದ ಎಲಿಮಿನೇಷನ್ ಯಾರಿಗೆ ಬೀಳಲಿದೆ ಎಂಬ ಕುತೂಹಲದ ನಡುವೆ, ಗಿಲ್ಲಿ-ಅಶ್ವಿನಿ ಜೋಡಿಯ ಈ “ಹೇಟ್ ಟು ಲವ್” ಕಥೆಯೇ ಬಿಗ್‌ಬಾಸ್ ಮನೆಯ ಈ ವಾರದ ಹೈಲೈಟ್ ಆಗಿದೆ.

Exit mobile version