ಬಿಗ್‌ಬಾಸ್ ಸೀಸನ್ 12 ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ಒಂದು ವಾರ ಬಾಕಿಯಿದೆ. ಸದ್ಯ ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ ನಟನದ್ದೇ ಜಪ. ಯೆಸ್.. ಕಿಚ್ಚನ ಅಡ್ಡಾದಲ್ಲಿರೋ ದಚ್ಚು ಹುಡುಗ ಗಿಲ್ಲಿ ರಾತ್ರೋ ರಾತ್ರಿ ಫೇಮಸ್ ಆಗಿಬಿಟ್ಟಿದ್ದಾನೆ. ಅದಕ್ಕೆ ಕಿಚ್ಚ-ದಚ್ಚುನೇ ಕಾರಣ. ಅಷ್ಟೇ ಅಲ್ಲ, ಬಿಗ್‌ಬಾಸ್ ಟ್ರೋಫಿ ಎತ್ತಿ ಹಿಡಿಯಬಲ್ಲ ಮೊದಲ ದಾಂಡಿಗ ಕೂಡ ಗಿಲ್ಲಿನೇ ಅನ್ನೋದು ಹಲವರ ಪ್ರೆಡಿಕ್ಷನ್.
ಪ್ರತಿಭೆ ಅನ್ನೋದು ಯಾರಪ್ಪನ ಸ್ವತ್ತೂ ಅಲ್ಲ. ಗಾಡ್‌ಫಾದರ್, ಹಣ, ರೆಫರೆನ್ಸ್, ಬ್ಯಾಗ್ರೌಂಡ್ ಎಲ್ಲಾ ಇದ್ದರೂ ಸಹ ನೆಲೆ ನಿಲ್ಲೋದು ಕಷ್ಟ ಕಷ್ಟ. ಆದ್ರೆ ಟ್ಯಾಲೆಂಟ್ ಒಂದು ಇದ್ರೆ ಸಾಕು ಯಾರು ಎಲ್ಲಿ ಬೇಕಾದ್ರೂ ಸರ್ವೈವ್ ಆಗ್ತಾರೆ ಅನ್ನೋದಕ್ಕೆ ರೈತ ಕುಟುಂಬದಿಂದ ಬಂದಂತಹ ಗಿಲ್ಲಿ ನಟ ಜ್ವಲಂತ ಸಾಕ್ಷಿ. ಯೆಸ್.. ಸದ್ಯ ಬಿಗ್‌ಬಾಸ್ ಮನೆಯಲ್ಲಿ ವ್ಯಕ್ತಿತ್ವಗಳ ಆಟ ಆಡ್ತಿರೋ ಗಿಲ್ಲಿ ಗಲ್ಲಿ ಗಲ್ಲಿಯಲ್ಲಿ ಮಾತನಾಡಿಕೊಳ್ಳುವ ರೇಂಜ್‌ಗೆ ಬೆಳೆದಿದ್ದಾರೆ.
ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ ಜಪ.. ಕಿಚ್ಚನ ಅಡ್ಡಾದಲ್ಲಿ ದಚ್ಚು ಹುಡ್ಗ
ಬಿಗ್‌ಬಾಸ್ ಟ್ರೋಫಿ ಹಿಡಿಯೋಕೆ ಒಂದೇ ವಾರ ಬಾಕಿ..!!
ಯೆಸ್.. ಮಂಡ್ಯದ ಮಠದಪುರದ ಹೈದ ಗಿಲ್ಲಿ ಮೂಲತಃ ರೈತಾಪಿ ಕುಟುಂಬದವರು. ಐಟಿಐ ಓದಿರೋ ಗಿಲ್ಲಿ ನಟನ ಅಸಲಿ ಹೆಸರು ನಟರಾಜ್. ಯೂಟ್ಯೂಬ್‌ವೊಂದನ್ನ ಮಾಡಿಕೊಂಡು, ಅದರಲ್ಲಿ ಕಾಮಿಡಿ ಸ್ಕಿಟ್‌ಗಳನ್ನ ಮಾಡಿಕೊಂಡು ಲಕ್ಷಾಂತರ ಮಂದಿಯ ಮುಖದಲ್ಲಿ ನಗು ತರಿಸುತ್ತಿದ್ದರು. ಇಂತಹ ಟ್ಯಾಲೆಂಟ್‌ನ ಗುರ್ತಿಸಿ, ಕಾಮಿಡಿ ಕಿಲಾಡಿಗಳು ಆತನಿಗೊಂದು ವೇದಿಕೆ ನೀಡಿತು. ಅದನ್ನ ಸಮರ್ಪಕವಾಗಿ ಬಳಸಿಕೊಂಡ ಗಿಲ್ಲಿ, ಗಿಲ್ಲಿ ನಟ ಅಂತಲೇ ಎಲ್ಲೆಡೆ ಫೇಮಸ್ ಆದ್ರು.
ಅಂದಹಾಗೆ ಗಿಲ್ಲಿ ನಟಿಸಿರೋದು ಕೇವಲ ಐದು ಸಿನಿಮಾ. ಆ ಪೈಕಿ ರಿಲೀಸ್ ಆಗಿರೋದು ಮೂರು ಸಿನಿಮಾ. ಕಳೆದ ವರ್ಷ ಸೂಪರ್ ಹಿಟ್, ಲಂಗೋಟಿ ಮ್ಯಾನ್ ಅನ್ನೋ ಚಿತ್ರಗಳಲ್ಲಿ ನಟಿಸಿದ್ರು. ವರ್ಷಾಂತ್ಯದಲ್ಲಿ ತೆರೆಕಂಡ ಡಿಬಾಸ್ ದರ್ಶನ್ ನಟನೆಯ ಡೆವಿಲ್ ಚಿತ್ರದಲ್ಲಿ ಸಿಬಿಐ ಐಡಿ ಕಾರ್ಡ್‌ನೊಂದಿಗೆ ಇನ್ಸ್‌ಪೆಕ್ಟರ್ ಶೋಭರಾಜ್‌ಗೆ ಚೌಕ್ ಕೊಡೋ ಕುಡುಕನ ಪಾತ್ರದಲ್ಲಿ ಗಿಲ್ಲಿ ಮಿಂಚಿದ್ರು. ಆ ಪಾತ್ರ ನಿಜಕ್ಕೂ ಡಿಬಾಸ್ ಫ್ಯಾನ್ಸ್ ಜೊತೆ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರಿಗೂ ಇಷ್ಟವಾಯ್ತು. ಇದೀಗ ಚೌಕಿದಾರ್, ಸರ್ಕಾರಿ ಶಾಲೆ ಹೆಚ್-8 ಅನ್ನೋ ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿವೆ.
ಮಾಡಿದ್ದು ನಾಲ್ಕೇ ಸಿನಿಮಾ.. ರಿಲೀಸ್ ಆಗಿದ್ದು ಎರಡೇ ಚಿತ್ರ
ಡಿಬಾಸ್ ಡೆವಿಲ್‌ನಲ್ಲಿ CBI ಐಡಿ.. ಗಿಲ್ಲಿ ಕುಡುಕನ ರೋಲ್
ನಾನು ನಿನ್ನ ಫ್ಯಾನ್ ಕಣೋ ಗಿಲ್ಲಿ. ನಿಮ್ಮೊಟ್ಟಿಗೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬಹುದಾ ಅಂತ ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ಅವರೇ ಗಿಲ್ಲಿ ನಟನ ಬಳಿ ಕೇಳಿದ್ರು ಒಮ್ಮೆ. ಅಷ್ಟೇ ಯಾಕೆ ನಿನ್ನೊಟ್ಟಿಗೆ ಒಂದು ಸಿನಿಮಾ ಮಾಡ್ಬೇಕು ಅಂತ ಸ್ವತಃ ಶಿವಣ್ಣ ಅವರೇ ಗಿಲ್ಲಿಗೆ ಹೇಳಿದ್ರು. ಸೂಪರ್ ಸ್ಟಾರ್ ರಜನೀಕಾಂತ್ ಮನೆಯಲ್ಲಿ ಕೂಡ ಗಿಲ್ಲಿ ಬಗ್ಗೆ ಚರ್ಚೆ ಆಗಿತ್ತು ಅನ್ನೋ ಸುದ್ದಿ ಹರಿದಾಡಿತ್ತು. ಹೀಗಿರುವಾಗ ಗಿಲ್ಲಿಗೆ ಬಿಗ್‌ಬಾಸ್ ಗೆಲ್ಲೋದು ದೊಡ್ಡ ಮ್ಯಾಟರ್ ಅಲ್ಲ. ಎಲ್ಲರೂ ಈ ಬಾರಿಯ ಟ್ರೋಫಿ ಗಿಲ್ಲಿಯದ್ದೇ ಅಂತಿದ್ದಾರೆ. ಇಡೀ ಮನೆಯಲ್ಲಿರೋ ಕಂಟೆಸ್ಟೆಂಟ್ಸ್‌ನ ಎದುರು ಹಾಕಿಕೊಂಡು ಗಿಲ್ಲಿ ಸೋಲದೆ ಸೋಲೋ ಆಟ ಆಡ್ತಿದ್ದಾರೆ.
ಆದ್ರೀಗ ಅತಿಯಾದ ಆತ್ಮವಿಶ್ವಾಸ ಹಾಗೂ ಕಾವ್ಯ ಸಹವಾಸದಿಂದ ಕೊನೆ ಗಳಿಗೆಯಲ್ಲಿ ಟ್ರೋಫಿ ಕೈ ತಪ್ಪುವ ಚಾನ್ಸಸ್ ಕೂಡ ಇದೆ. ಆಟ ಅಶ್ವಿನಿ ಗೌಡ ಕಡೆ ತಿರುಗಿದ್ದು, ಅದನ್ನ ಇನ್ನೊಂದು ವಾರದಲ್ಲಿ ಗಿಲ್ಲಿ ಹೇಗೆ ತನ್ನತ್ತ ತಿರುಗಿಸಿಕೊಳ್ತಾರೆ ಅನ್ನೋದೇ ಬಿಗ್ ಟಾಸ್ಕ್. ಪ್ರತಿಭಾವಂತ ಗಿಲ್ಲಿ ಗೆದ್ರೆ ಅದಕ್ಕಿಂತ ಖುಷಿ ಮತ್ತೊಂದಿರಲು ಸಾಧ್ಯವಿಲ್ಲ. ಆದ್ರೆ ಕುರಿಗಾಹಿ ಹನುಮಂತು ರೀತಿ ರಿಯಲ್ ಟ್ಯಾಲೆಂಟ್ ಗೆಲ್ಲಬೇಕು ಅನ್ನೋದು ಬಹುತೇಕ ಮಂದಿಯ ಆಶಯವಾಗಿದೆ. ಆಟವನ್ನ ಕಾದು ನೋಡಬೇಕಿದೆ.
