BBK 12: ಲಕ್ಸುರಿ ಬಜೆಟ್ ಟಾಸ್ಕ್‌ನಲ್ಲಿ ಭಾರೀ ಡ್ರಾಮಾ: ಅಶ್ವಿನಿ-ಗಿಲ್ಲಿ ನಡುವೆ ಮಾತಿನ ಚಕಮಕಿ

Untitled design 2025 12 22T191151.612

ಬಿಗ್ ಬಾಸ್ ಕನ್ನಡ 12 (Bigg Boss Kannada 12) ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಫಿನಾಲೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ಬಿಗ್ ಬಾಸ್ ಮನೆ ಒಳಗೆ ನಡೆಯುತ್ತಿರುವ ಪ್ರತಿಯೊಂದು ಟಾಸ್ಕ್ ಕೂಡ ಸ್ಪರ್ಧಿಗಳಿಗೆ ದೊಡ್ಡ ಸವಾಲಾಗಿದೆ. ಅದರಲ್ಲೂ ಈ ವಾರ ನೀಡಲಾದ ಲಕ್ಸುರಿ ಬಜೆಟ್ ಟಾಸ್ಕ್ ಮನೆಯ ವಾತಾವರಣವನ್ನೇ ಬದಲಾಯಿಸಿದೆ.

ಈಗಾಗಲೇ ಚೈತ್ರಾ ಕುಂದಾಪುರ ಹಾಗೂ ರಜತ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಫಿನಾಲೆ ಹತ್ತಿರವಾಗುತ್ತಿರುವುದರಿಂದ ಪ್ರತಿಯೊಬ್ಬರೂ ಆಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಸಣ್ಣ ತಪ್ಪು ಕೂಡ ದೊಡ್ಡ ಜಗಳಕ್ಕೆ ಕಾರಣವಾಗುತ್ತಿದೆ.

ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಲಕ್ಸುರಿ ಬಜೆಟ್ ಟಾಸ್ಕ್‌ಗೆ ಸಂಬಂಧಿಸಿದಂತೆ ಅಶ್ವಿನಿ ಮತ್ತು ಗಿಲ್ಲಿ (Gilli Nata) ನಡುವೆ ಭಾರೀ ವಾಗ್ವಾದ ನಡೆದಿದೆ. ಬಿಗ್ ಬಾಸ್ ಸೂಚನೆಯಂತೆ, ನಿಗದಿತ ಸಮಯದೊಳಗೆ ನಿರ್ದಿಷ್ಟ ಸ್ಥಳಕ್ಕೆ ತಲುಪಿ ನೃತ್ಯ ಪ್ರದರ್ಶನ ನೀಡಬೇಕಾಗಿತ್ತು. ಈ ಅವಧಿಯೊಳಗೆ ಟಾಸ್ಕ್ ಪೂರ್ಣಗೊಳಿಸಿದರೆ ವಾರದ ಸಾಮಗ್ರಿಗಳನ್ನು ಗೆಲ್ಲಬಹುದಾಗಿತ್ತು. ಆದರೆ ಅಶ್ವಿನಿ ಅವರು ಸಮಯಕ್ಕೆ ಸರಿಯಾಗಿ ಆ ಸ್ಥಳಕ್ಕೆ ತಲುಪದೆ ಇರುವುದರಿಂದ ಟಾಸ್ಕ್ ವಿಫಲವಾಗಿದೆ.

ಇದರ ಪರಿಣಾಮವಾಗಿ ಮನೆಯ ಸ್ಪರ್ಧಿಗಳು ವಾರದ ದಿನಸಿ ಸಾಮಗ್ರಿಗಳನ್ನು ಕಳೆದುಕೊಳ್ಳಬೇಕಾಯಿತು. ಈ ವಿಷಯವೇ ಗಿಲ್ಲಿ ಅವರಿಗೆ ತೀವ್ರ ಅಸಮಾಧಾನ ಉಂಟಾಗಿದೆ. ಟಾಸ್ಕ್ ವೇಳೆ ಶಿಸ್ತಿನ ಕೊರತೆ ಹಾಗೂ ನಿರ್ಲಕ್ಷ್ಯವೇ ಸೋಲಿಗೆ ಕಾರಣ ಎಂದು ಗಿಲ್ಲಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ, “ನಾನು ಬೇಕು ಅಂತ ಟಾಸ್ಕ್ ಹಾಳು ಮಾಡಿದ್ದೇನಾ?” ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಮಾತಿನ ಚಕಮಕಿ ಮನೆಯಲ್ಲಿ ತೀವ್ರಗೊಂಡಿದೆ. ರಾಶಿಕಾ ಕೂಡ ಮಧ್ಯಪ್ರವೇಶಿಸಿ, “ಗಿಲ್ಲಿ ಎರಡು ಬಾರಿ ಮಾಡಿದ ತಪ್ಪಿನಿಂದಲೂ ದಿನಸಿ ಹೋಗಿತ್ತು ಅಲ್ಲವಾ?” ಎಂದು ಪ್ರಶ್ನಿಸಿದಾಗ, ಗಿಲ್ಲಿ “ನಾನು ತಪ್ಪು ಮಾಡಿದ್ರೆ ನೀವೂ ಅದೇ ಮಾಡಬೇಕಾ?” ಎಂದು ತಿರುಗೇಟು ನೀಡಿದ್ದಾರೆ. ಇದಕ್ಕೆ ಅಶ್ವಿನಿ ಮತ್ತಷ್ಟು ಕೋಪಗೊಂಡು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಗಿಲ್ಲಿ ಮಾತ್ರ ಟಾಸ್ಕ್‌ಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ವೀಕ್ಷಕರು ಗಮನಿಸಿದ್ದಾರೆ. ಫಿನಾಲೆಗೆ ಹತ್ತಿರವಾಗುತ್ತಿರುವುದರಿಂದ ಪ್ರತಿಯೊಂದು ಅವಕಾಶವನ್ನು ಗಿಲ್ಲಿ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ.

ಚೈತ್ರಾ ಹೊರಬಂದ ನಂತರ ಗಿಲ್ಲಿ ಅಶ್ವಿನಿಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಅದೇ ರೀತಿ ರಜತ್ ಹೊರಬಂದ ಬಳಿಕ ಗಿಲ್ಲಿ, ರಘು ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.

ಇನ್ನು ಕಳೆದ ವಾರ ಯಾರನ್ನೂ ಎಲಿಮಿನೇಟ್ ಮಾಡಲಾಗಿರಲಿಲ್ಲ. ಈ ವಾರವೂ ವೋಟಿಂಗ್ ಓಪನ್ ಆಗಿಲ್ಲ. ಬಿಗ್ ಬಾಸ್ ಮನೆಗೆ ಎರಡು ವಾರಗಳ ಹಿಂದೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ರಜತ್ ಹಾಗೂ ಚೈತ್ರಾ ಎಂಟ್ರಿ ನೀಡಿದ್ದರು. ಇವರಲ್ಲಿ ಮಂಜು, ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ಒಂದು ವಾರದಲ್ಲೇ ಹೊರಬಂದರೆ, ರಜತ್ ಮತ್ತು ಚೈತ್ರಾ ಹೆಚ್ಚು ದಿನ ಉಳಿದು ಇದೀಗ ಮನೆಯಿಂದ ಹೊರನಡೆದಿದ್ದಾರೆ.

ಅತಿಥಿಗಳಾಗಿ ಬಂದು ಮನೆಯ ಸದಸ್ಯರೊಂದಿಗೆ ಆಟ ಆಡಿದಕ್ಕಾಗಿ ರಜತ್ ಹಾಗೂ ಚೈತ್ರಾ ಅವರಿಗೆ ಕಿಚ್ಚ ಸುದೀಪ್ ಧನ್ಯವಾದ ತಿಳಿಸಿದ್ದಾರೆ. ಇದೀಗ ಫಿನಾಲೆ ಹತ್ತಿರವಾಗುತ್ತಿದ್ದಂತೆ ಬಿಗ್ ಬಾಸ್ ಮನೆ ಇನ್ನಷ್ಟು ಬಿಸಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಡ್ರಾಮಾ ಹಾಗೂ ತಿರುವುಗಳು ಕಾದಿವೆ ಎಂಬ ನಿರೀಕ್ಷೆ ವೀಕ್ಷಕರಲ್ಲಿದೆ.

Exit mobile version