ಬಿಗ್ ಬಾಸ್12ರ ಮನೆಯಲ್ಲಿ ಯಾರಿಗೆ ಯಾವ ಜಾಗ ಫೇವರಿಟ್?

BeFunky collage 2026 01 17T232830.484

ಬಿಗ್ ಬಾಸ್ ಮನೆಯ ಆಟ ಈಗ ಕೊನೆಯ ಹಂತಕ್ಕೆ ಬಂದಿದ್ದರೂ, ಸ್ಪರ್ಧಿಗಳ ಮನಸ್ಸಿನಲ್ಲಿ ಮನೆಯ ನೆನಪುಗಳು ಇನ್ನು ಹಾಗೆ ಇವೆ. ಫ್ರೀ ಫೈನಲ್ ದಿನ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳನ್ನು ಕೇಳಿದರು. “ಮನೆಯಲ್ಲಿ ನಿಮಗೆ ಅತ್ಯಂತ ಇಷ್ಟವಾದ ಜಾಗ ಯಾವುದು? ಏಕೆ?” ಈ ಪ್ರಶ್ನೆಗೆ ಎಲ್ಲರೂ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಆದರೆ ಕೆಲವರ ಉತ್ತರಗಳು ಎಮೋಷನಲ್ ಆಗಿ ಹೃದಯಕ್ಕೆ ತಟ್ಟಿದವು. ಅದರಲ್ಲೂ ರಕ್ಷಿತಾ ಶೆಟ್ಟಿ ಅವರ ಉತ್ತರವು ಎಲ್ಲರನ್ನೂ ಭಾವುಕಗೊಳಿಸಿತು.

ರಕ್ಷಿತಾ ಶೆಟ್ಟಿ ಮಾತನಾಡುವಾಗ ಕಣ್ಣೀರು ತುಂಬಿಕೊಂಡಿತು. “ನನಗೆ ಇಲ್ಲಿ ಅತ್ಯಂತ ಇಷ್ಟವಾದ ಜಾಗ ಕಿಚ್ಚನ್ ಅಲ್ಲಿ ನಾವೆಲ್ಲಾ ಒಟ್ಟಾಗಿ ಕುಳಿತು ಊಟ ಮಾಡ್ತಿದ್ದೆವು, ಹಾಸ್ಯ ಮಾಡ್ತಿದ್ದೆವು, ಜಗಳವಾಡ್ತಿದ್ದೆವು. ಆದರೆ ಈಗ ಆ ಜಾಗ ಖಾಲಿಯಾಗುತ್ತಿದೆ ಅಂತ ಅನಿಸುತ್ತೆ. ಕಿಚ್ಚನ್ ಮಿಸ್ ಮಾಡ್ತೀನಿ” ಎಂದು ಹೇಳುವಾಗ ಧ್ವನಿ ತಡೆದುಕೊಳ್ಳಲು ಪ್ರಯತ್ನಿಸಿದರು. ಕಿಚ್ಚ ಸುದೀಪ್ ಸಹ ಭಾವುಕರಾಗಿ “ಇದು ನಿಜವಾದ ಭಾವನೆ” ಎಂದು ಹೇಳಿದ ರಕ್ಷಿತಾ.

ಗಿಲ್ಲಿ ನಟನಿಗೆ ಮನೆಯ ಗಾರ್ಡನ್ ಏರಿಯಾ ಅತ್ಯಂತ ಇಷ್ಟವಾದ ಜಾಗ. “ಗಾರ್ಡನ್‌ನಲ್ಲಿ ಒಂದು ಜಾಗ ಇದೆ. ಅಲ್ಲಿ ಕುಳಿತುಕೊಂಡ್ರೆ ಎದುರಿಗೆ ಎರಡು ಮರಗಳು ಕಾಣಿಸುತ್ತವೆ. ನನ್ನ ತೋಟದಲ್ಲಿರೋ ಎರಡು ಮರಗಳ ನೆನಪು ಬರುತ್ತೆ. ಅಲ್ಲಿ ಕುಳಿತುಕೊಂಡ್ರೆ ಮನಸ್ಸು ಶಾಂತವಾಗುತ್ತೆ” ಎಂದು ಹೇಳಿದರು. ಈ ಉತ್ತರವು ಗಿಲ್ಲಿಯ ಸರಳತೆ ಮತ್ತು ಗ್ರಾಮೀಣ ಹಿನ್ನೆಲೆಯನ್ನು ತೋರಿಸಿತು.

ಅಶ್ವಿನಿ ಗೌಡ ಅವರ ಫೇವರಿಟ್ ಜಾಗವೇ ಕಿಚ್ಚ ಸುದೀಪ್ ಅವರ ಚಪ್ಪಾಳೆ ಫೋಟೋಗಳು ಇರುವ ಗೋಡೆಯ ಬಳಿ. “ಅಲ್ಲಿ ನನ್ನ ಫೋಟೋ ಇದೆ. ಕಿಚ್ಚನ್ ಚಪ್ಪಾಳೆ ಕೊಟ್ಟ ಫೋಟೋ. ಅದನ್ನ ನೋಡಿದ್ರೆ ನನಗೆ ಆತ್ಮವಿಶ್ವಾಸ ಬರುತ್ತೆ. ಕಿಚ್ಚನ್ ಚಪ್ಪಾಳೆಗಾಗಿ ದೇವರನ್ನೇ ಬೇಡಿಕೊಂಡಿದ್ದೇನೆ” ಎಂದು ಹೇಳುವಾಗ ಅವರ ಕಣ್ಣುಗಳು ತುಂಬಿ ಬಂದವು. ಈ ಉತ್ತರವು ಅಶ್ವಿನಿಯ ಭಾವನಾತ್ಮಕ ಆಳವನ್ನು ತೋರಿಸಿತು.

ರಘು ಅವರಿಗೆ ಸ್ಮೋಕಿಂಗ್ ಏರಿಯಾ ಇಷ್ಟವಾಗಿತ್ತು. “ಅಲ್ಲಿ ಕುಳಿತು ಧೂಮಪಾನ ಮಾಡುತ್ತಾ ಎಲ್ಲರ ಜೊತೆ ಮಾತನಾಡ್ತಿದ್ದೆ. ಆ ಜಾಗ ನನ್ನ ರಿಲ್ಯಾಕ್ಸ್ ಸ್ಪಾಟ್” ಎಂದರು. ಧನುಷ್ ಗೌಡ ಅವರಿಗೆ ಜಿಮ್ ಏರಿಯಾ ಫೇವರಿಟ್ ಆಗಿತ್ತು. “ಅಲ್ಲಿ ವ್ಯಾಯಾಮ ಮಾಡುತ್ತಾ ಮನಸ್ಸು ಶಾಂತವಾಗುತ್ತೆ” ಎಂದು ಹೇಳಿದರು. ಕಾವ್ಯಾ ಶೈವ ಅವರಿಗೆ ಬೆಡ್‌ರೂಮ್‌ನ ತಮ್ಮ ಬೆಡ್ ಇಷ್ಟವಾಗಿತ್ತು. “ಅಲ್ಲಿ ಮಲಗಿ ಎಲ್ಲರ ಜೊತೆ ಮಾತನಾಡುತ್ತಿದೆ. ಆ ಜಾಗ ನನ್ನ ಕಂಫರ್ಟ್ ಜೋನ್” ಎಂದರು.

ಈ ಎಪಿಸೋಡ್‌ನಲ್ಲಿ ಸ್ಪರ್ಧಿಗಳು ತಮ್ಮ ಭಾವನೆಗಳನ್ನು ತೆರೆದು ಹಂಚಿಕೊಂಡರು. ಮನೆಯ ಆಟ ಮುಗಿದ ನಂತರ ಈ ನೆನಪುಗಳು ಎಲ್ಲರ ಜೊತೆಗೂ ಉಳಿಯಲಿವೆ ಎಂಬುದು ಸ್ಪಷ್ಟವಾಯಿತು. ಫೈನಲ್ ಸಂಚಿಕೆಯಲ್ಲಿ ಯಾರು ಟ್ರೋಫಿ ಗೆಲ್ಲುತ್ತಾರೋ ಎಂಬ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

Exit mobile version