ಬಿಗ್‌ಬಾಸ್‌: ಮನೆಯವರ ನೆಚ್ಚಿನ ಸ್ಪರ್ಧಿಯಾದ ಸೂರಜ್‌

Untitled design 2025 10 23t233221.611

ಬಿಗ್ ಬಾಸ್‌ ಸ್ಪರ್ಧಿಗಳನ್ನು ಮೂರು ತಂಡಗಳಾಗಿ ವಿಂಗಡಿಸಿ, ನಕಲಿ ನಾಣ್ಯಗಳನ್ನು ಸುರಿದರು. ಯಾವ ತಂಡವು ಅತಿ ಹೆಚ್ಚು ನಾಣ್ಯಗಳನ್ನು ಸಂಗ್ರಹಿಸುತ್ತದೋ ಆ ತಂಡ ಫೈನಲ್ ಟಾಸ್ಕ್‌ಗೆ ತಲುಪುವುದು ಎಂಬುದು ನಿಯಮವಾಗಿತ್ತು.

ಬಿಗ್ ಬಾಸ್ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಸೂರಜ್, ರಿಶಾ ಮತ್ತು ರಘು ಅವರನ್ನು ಕನ್ಫೆಷನ್ ರೂಮ್‌ಗೆ ಕರೆದರು. ಅವರೆಲ್ಲರಿಗೂ ಒಂದು ವಿಶೇಷ ನಾಣ್ಯ ನೀಡಲಾಯಿತು. ಈ ನಾಣ್ಯವನ್ನು ಸ್ವೀಕರಿಸಿದವರು ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುವ ಆಫರ್‌ನೀಡಲಾಯಿತು. ಆದರೆ, ಅವರ ತಂಡವು ಟಾಸ್ಕ್‌ನಿಂದ ಹೊರಗುಳಿಯುವುದು ಎಂಬ ನಿಯಮವಿತ್ತು.

ಈ ಆಫರ್‌ನನ್ನು ರಘು ಮತ್ತು ರಿಶಾ ಸ್ವೀಕರಿಸಿದರು. ಆದರೆ, ಸೂರಜ್ ತನ್ನ ತಂಡದ ಬಗ್ಗೆ ಹೆಚ್ಚಿನ ನಿಷ್ಠೆ ತೋರಿಸಿ, ನನ್ನ ತಂಡದ ಜೊತೆಗೇ ಆಡುತ್ತೇನೆ, ಗೆದ್ದು ಎಲ್ಲರೂ ಟಾಸ್ಕ್‌ಗೆ ಆಯ್ಕೆಯಾಗುತ್ತೇವೆ ಎಂದು ಹೇಳಿದರು.

ಕನ್ಫೆಷನ್ ರೂಮ್‌ನಲ್ಲಿ ನಡೆದದ್ದೆಲ್ಲವನ್ನೂ ಬೇರೆ ಸ್ಪರ್ಧಿಗಳು ನೋಡಿಬಿಟ್ಟರು. ತಮ್ಮ ತಂಡಗಳನ್ನು ಬಿಟ್ಟುಕೊಟ್ಟ ರಘು ಮತ್ತು ರಿಶಾ ಅವರ ಮೇಲೆ ಇಡೀ ಮನೆಯೇ ಕೋಪಗೊಂಡಿತು. ಧನುಶ್ ರಘು ಅವರನ್ನು ಸ್ವಾರ್ಥಿ ಎಂದು ಬೈದರೆ, ಜಾನ್ವಿ ರಿಶಾ ಅವರನ್ನು ಛತ್ರಿ ಎಂದು ಕರೆದರು. ಮನೆಯವರು ಎಲ್ಲರೂ ಸೇರಿ ಇಬ್ಬರ ಮೇಲೆಯೇ ಛೀಮಾರಿ ಹಾಕಿದರು. ತನ್ನ ತಂಡದ ಬಗ್ಗೆ ನಿಷ್ಠೆ ತೋರಿದ ಸೂರಜ್ ಅವರು ಎಲ್ಲರೂ ಮೆಚ್ಚುವ ಹೀರೋ ಆದರು.

Exit mobile version