ಬಿಗ್‌ಬಾಸ್‌: ವುಮನ್ ಕಾರ್ಡ್ ಪ್ಲೇ ಮಾಡ್ಬೇಡಿ ಎಂದು ಅಶ್ವಿನಿಗೆ ಎಚ್ಚರಿಕೆ ನೀಡಿದ ಕಿಚ್ಚ

Untitled design (55)

ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಈ ವಾರ ನಡೆದ ಬೆಳವಣಿಗೆಗಳು ಪ್ರೇಕ್ಷಕರನ್ನು ಆಕರ್ಷಗೊಳಿಸಿವೆ. ವೈಲ್ಡ್ ಕಾರ್ಡ್ ಎಂಟ್ಟಿ ಕೊಟ್ಟ ಮ್ಯೂಟಂಟ್ ರಘು ಮತ್ತು ಅಶ್ವಿನಿ ಗೌಡ ನಡುವಿನ ತೀವ್ರ ಜಗಳ ಈ ವಾರದ  ಮುಖ್ಯ ಚರ್ಚೆಯ ವಿಷಯವಾಗಿತ್ತು. ಮನೆ ಕೆಲಸಗಳ ವಿವಾದದಿಂದ ಆರಂಭವಾದ ಈ ಘರ್ಷಣೆ, ವುಮನ್ ಕಾರ್ಡ್ ಬಳಸುವಿಕೆ, ಕೆಟ್ಟ ಪದಗಳು ಮತ್ತು ಅವಮಾನದ ಆರೋಪಗಳೊಂದಿಗೆ ಬೆಳೆಯಿತು. ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಈ ವಿಷಯವನ್ನು ತೀವ್ರವಾಗಿ ಚರ್ಚಿಸಿ, ಅಶ್ವಿನಿಗೆ ಕಟ್ಟುನಿಟ್ಟಾದ ಪಾಠ ಮಾಡಿದ್ದಾರೆ

ಈ ವಾರದ ಆರಂಭದಲ್ಲೇ ಬಿಗ್ ಬಾಸ್ ಮನೆಯಲ್ಲಿ ಟೆನ್ಷನ್ ಹೆಚ್ಚಾಯಿತು. ಕ್ಯಾಪ್ಟನ್ ಆಗಿರುವ ರಘು ಮನೆಯ ಕೆಲಸಗಳ ನಿರ್ವಹಣೆಯಲ್ಲಿ ತೊಡಗಿದ್ದರು. ಒಂದೇ ಒಂದು ಕೆಲಸವಿದ್ದರಿಂದ ಅದನ್ನು ಅಶ್ವಿನಿಗೆ ಮಾಡಲು ಹೇಳಿದರು ಆದರೆ ಅಶ್ವಿನಿ 10 ನಿಮಿಷ ಬೇಕು ಈಗ ಕೆಲಸ ಮಾಡಲು ಆಗಲ್ಲ ಎಂದು  ಏರು ಧ್ವನಿಯಲ್ಲಿ ಹೇಳಿದ್ದರು ಇದರಿಂದ ಸಿಟ್ಟಾದ ರಘು ಅವರೂ ಸಹ ಧ್ವನಿ ಏರಿಸಿ ಸಲಹೆ ನೀಡಿದಾಗ, ಅಶ್ವಿನಿ ಅದನ್ನು ಅವಮಾನ ಮಾಡುತ್ತಿದ್ದಾರೆ ಎಂದು ಅಶ್ವಿನಿ ದೂರಿದರು. ಇದು ಇಬ್ಬರ ನಡುವೆ ತೀವ್ರ ಜಗಳಕ್ಕೆ ಕಾರಣವಾಯಿತು. ಮನೆಯ ಇತರ ಸದಸ್ಯರಾದ ರಕ್ಷಿತಾ ಶೆಟ್ಟಿ, ರಿಷಾ ಗೌಡ, ಜನ್ವಿ ಮತ್ತು ಸುಧಿ ಸೇರಿದಂತೆ ಎಲ್ಲರೂ ಈ ಜಗಳವನ್ನ ನಿಲ್ಲಿಸಲು ಪ್ರಯತ್ನಿಸಿದರೂ, ಅದು ನಿಲ್ಲದೇ ಮತ್ತೂ ಹೆಚ್ಚಾಯಿತು

ಅಶ್ವಿನಿ ಈ ಘಟನೆಯನ್ನು ಮಹಿಳೆಯರಿಗೆ ಅವಮಾನ ವಾಗುತ್ತಿದೆ ಎಂದು ಹೇಳಿ, ಉಪವಾಸ ಕೂರಿದರು. ಇದು ಮನೆಯಲ್ಲಿ ಹೊಸ ಚರ್ಚೆಗೆ ಕಾರಣವಾಯಿತು. ಇದರೊಂದಿಗೆ ಅಶ್ವಿನಿ ಬಳಸಿದ ಕೆಟ್ಟ ಪದಗಳು – ‘ಅಮಾವಾಸ್ಯೆ, ಜೋಕರ್, ಕಾರ್ಟೂನ್, ಫ್ರೀ ಪ್ರಾಡಕ್ಟ್, ಯಾವನೋ ನೀನು, ಹೋಗಲೋ, ಮುಚ್ಕೊಂಡು ಮಲ್ಕೊ, ಬೇಜಾನ್ ಐತಿ ಗಾಂಚಲಿ ಹೀಗೆ ಅವರು ಮಾತನಾಡಿದ ಅವಾಚ್ಯ ಪದಗಳನ್ನ ಕಿಚ್ಚ ಸುದೀಪ್‌ ವೀಟಿಯಲ್ಲಿ ತೋರಿಸಿದರು.

ವೀಕೆಂಡ್ ಎಪಿಸೋಡ್‌ನಲ್ಲಿ ಸುದೀಪ್ ಅವರು ಈ ವಿಷಯವನ್ನು ತೆಗೆದುಕೊಂಡರು. ಅಶ್ವಿನಿ ಬಳಿ ಪ್ರಶ್ನೆ ಮಾಡಿ, “ರಘು ಅವರು ಕ್ಯಾಪ್ಟನ್ ಆಗಿದ್ದಾರೆ. ಅವರಿಗೆ ಗೌರವ ಕೊಡಬಹುದಿತ್ತಲ್ಲ? ಕ್ಯಾಪ್ಟನ್ ಮನೆಯನ್ನು ನೋಡಿಕೊಳ್ಳಲು ಇರುವವರಿಗೆ ಗೌರವ ಕೊಡಬೇಕು” ಎಂದು ಹೇಳಿದರು. ಅಶ್ವಿನಿ ವುಮನ್ ಕಾರ್ಡ್ ಬಳಸಿ ಮಹಿಳೆಯರಿಗೆ ಅವಮಾನ ಆಗುತ್ತಿದೆ ಎಂದಾಗ, ಸುದೀಪ್ ಕಟ್ಟುನಿಟ್ಟಾಗಿ ಮಾತನಾಡಿದರು. ಮಹಿಳೆಯರಿಗೆ ಅವಮಾನ ಆಗುತ್ತಿಲ್ಲ. ಆ ರೀತಿ ಆದರೆ ಬಿಗ್ ಬಾಸ್ ಮಧ್ಯೆ ಬರುತ್ತಾರೆ. ಪದೇ ಪದೇ ಇದನ್ನು ಹೇಳಬೇಡಿ. ಗೌರವವನ್ನು ನೀಡಿ ಆನಂತರ ನೀವು ಗೌರವ ಕೇಳಿ ಎಂದು ಸಲಹೆ ನೀಡಿದರು.

ಅಶ್ವಿನಿ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದರು. ಆದರೆ ಸುದೀಪ್ ಅವರು ಇದನ್ನು ನಿಲ್ಲಿಸದೆ, ಮನೆಯ ಇತರ ಮಹಿಳಾ ಸದಸ್ಯರಾದ ರಕ್ಷಿತಾ, ರಿಷಾ ಮತ್ತು ಜನ್ವಿಯವರನ್ನು ಕೇಳಿ, ನಿಮಗೂ ಅವಮಾನ ಆಗಿದೆಯೇ ? ಎಂದು ಪ್ರಶ್ನಿಸಿದರು. ಯಾರೂ ಕೈ ಎತ್ತಲಿಲ್ಲ. ಇದರಿಂದ ಅಶ್ವಿನಿಯ ಆರೋಪಗಳು ಸುಳ್ಳು ಎಂದು ಅವರಿಗೆ ಮನವರಿಕೆ ಮಾಡಲಾಯಿತು. ಇದೇ ರೀತಿ, ರಘು ಮತ್ತು ಗಿಲ್ಲಿ ಅವರನ್ನು ಬಳಸಿದ ಅಪಮಾನಕಾರಿ ಪದಗಳ ಆಡಿಯೋಗಳನ್ನು ಪ್ರದರ್ಶಿಸಿ, ಸುದೀಪ್ “ಇಂತಹ ಪದಗಳನ್ನು ಬಳಸಬೇಡಿ. ಇದು ಮನೆಯ ಶಿಸ್ತನ್ನು ಉಲ್ಲಂಘಿಸುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

Exit mobile version