ಬಿಗ್‌ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಅತ್ಯಂತ ಆಪ್ತ ಸ್ನೇಹಿತೆಯರಾಗಿ ಕಾಣಿಸಿಕೊಂಡಿದ್ದ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರ ಜೋಡಿ ಈಗ ದೂರವಾಗಿದೆ. ಎಲ್ಲಿಗೆ ಹೋದರೂ ಜೊತೆಯಲ್ಲೇ ಇರುತ್ತಿದ್ದ, ಎಲ್ಲಾ ಕೆಲಸಗಳನ್ನೂ ಒಟ್ಟಿಗೆ ಮಾಡುತ್ತಿದ್ದ ಈ ಜೋಡಿಯ ನಡುವೆ ಬಿರುಕು ಮೂಡಿದೆ. ಬಿಬಿ ಕಾಲೇಜ್‌ನ ಚರ್ಚಾ ಸ್ಪರ್ಧೆಯಲ್ಲಿ ವಿರೋಧಿಗಳಾಗಿ ಮಾತನಾಡಿದ್ದ ಇವರಿಬ್ಬರೂ ತಮ್ಮ ಸ್ನೇಹದ ಬಗ್ಗೆಯೂ ಪ್ರಸ್ತಾಪಿಸಿದ್ದರು. ಅಶ್ವಿನಿ ಅವರು ಜಾಹ್ನವಿ ಅವರೊಂದಿಗಿನ ಸ್ನೇಹವನ್ನು ಸ್ಟ್ರಾಟರ್ಜಿ ಎಂದು ಕರೆದಿದ್ದರು. ಆ ಮಾತುಗಳೇ ಈ ಜೋಡಿಯ ನಡುವೆ ದೂರವಾಗಲು ಕಾರಣವಾಗಿದೆ.
ಬಿಗ್‌ಬಾಸ್ ಮನೆಯಲ್ಲಿ ಆರಂಭದ ದಿನಗಳಲ್ಲಿ ಅಂಟಿಕೊಂಡೇ ಇರುತ್ತಿದ್ದ ಅಶ್ವಿನಿ ಮತ್ತು ಜಾಹ್ನವಿ ಅವರ ಸ್ನೇಹವು ಮನೆಯವರಿಗೆಲ್ಲ ಆದರ್ಶವಾಗಿತ್ತು. ರಾತ್ರಿ ಮೂರು ಗಂಟೆವರೆಗೂ ಇಬ್ಬರೂ ಜೊತೆಯಲ್ಲಿದ್ದು, ಮನೆಯ ಇತರ ಸದಸ್ಯರ ಬಗ್ಗೆ ಚರ್ಚಿಸುತ್ತಿದ್ದರು ಎಂಬುದು ಜಾಹ್ನವಿ ಅವರೇ ಬಹಿರಂಗಪಡಿಸಿದ್ದಾರೆ. ಆದರೆ ಚರ್ಚಾ ಸ್ಪರ್ಧೆಯ ನಂತರ ಇವರು ಒಬ್ಬರನ್ನೊಬ್ಬರು ಮಾತನಾಡಿಸುತ್ತಿಲ್ಲ. ಅಶ್ವಿನಿ ಅವರ ಸ್ಟ್ರಾಟರ್ಜಿ ಮಾತುಗಳು ಜಾಹ್ನವಿ ಅವರ ಮನಸ್ಸಿನಲ್ಲಿ ನೋವು ಮೂಡಿಸಿದ್ದವು ಎಂಬುದು ಸ್ಪಷ್ಟವಾಗಿದೆ. ಈಗ ಜಾಹ್ನವಿ ಅವರು ತಮ್ಮ ಸ್ನೇಹಿತೆಯೊಂದಿಗೆ ಮತ್ತೆ ಒಡನಾಡುವ ಆಸೆಯನ್ನು ಹೊಂದಿದ್ದಾರೆ. ಅದಕ್ಕಾಗಿಯೇ ಅವರು ಕಣಿ ಹೇಳುವವಳಾದ ಕಾವ್ಯ ಅವರ ಬಳಿ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಅಶ್ವಿನಿ ಗೌಡ ಕಣಿ ಕೇಳಲಿಲ್ಲ, ಆದ್ರೂ ಜಾನ್ವಿ ಬಿಡಲಿಲ್ಲ!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BBK12 #ColorsKannada #jiohotstarkannada #CKSP pic.twitter.com/0YlcmgZ3g3
— JioHotStar Kannada (@JHSKannada) November 4, 2025
ಕಾವ್ಯ ಅವರು ಕಣಿ ಹೇಳುವವಳಾಗಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಜಾಹ್ನವಿ ಅವರು ಕಾವ್ಯ ಅವರಲ್ಲಿ, ನಾನು ಮತ್ತು ಅಶ್ವಿನಿ ಮತ್ತೆ ಒಂದಾಗುತ್ತೇವಾ? ನಮ್ಮ ಸ್ನೇಹ ಮತ್ತೆ ಹಳೆಯ ರೀತಿಯಲ್ಲಿ ಮುಂದುವರಿಯುತ್ತದೆಯೇ? ಎಂದು ಕೇಳಿದ್ದಾರೆ. ಜಾಹ್ನವಿ ಅವರು ತಮ್ಮ ಆಂತರಿಕ ನೋವನ್ನು ಹಂಚಿಕೊಂಡು, ಆರಂಭದಲ್ಲಿ ನಾವು ಎಲ್ಲವನ್ನೂ ಒಟ್ಟಿಗೆ ಮಾಡುತ್ತಿದ್ದೆವು. ರಾತ್ರಿ ಮೂರು ಗಂಟೆವರೆಗೂ ಮಾತನಾಡುತ್ತಿದ್ದೆವು. ಆದರೆ ಈಗ ಅವಳು ನನ್ನೊಂದಿಗೆ ಮಾತನಾಡುವುದೇ ಇಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ನೀವಿಬ್ಬರು ಮತ್ತೆ ಒಂದಾಗುವ ಚಾನ್ಸ್ ಇಲ್ಲ. ಯಾವತ್ತೂ ದೂರವೇ ಇರುತ್ತೀರಿ. ನಿಮ್ಮ ನಡುವಿನ ಬಿರುಕು ಈಗಾಗಲೇ ದೊಡ್ಡದಾಗಿದೆ. ಅದು ತುಂಬಲಾರದು ಎಂದು ಹೇಳಿದ್ದಾರೆ. ಆದರೆ ಅವರು ಇದನ್ನು ಸ್ವೀಕರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಅಶ್ವಿನಿ ಅವರು ತಮ್ಮ ಸ್ನೇಹವನ್ನು ಸ್ಟ್ರಾಟರ್ಜಿ ಎಂದು ಕರೆದಿದ್ದು ಜಾಹ್ನವಿ ಅವರ ಮನಸ್ಸಿನಲ್ಲಿ ಆಳವಾದ ನೋವು ಮೂಡಿಸಿದೆ. ಬಿಗ್‌ಬಾಸ್ ಮನೆಯಲ್ಲಿ ಸ್ನೇಹಗಳು ಆಟದ ಭಾಗವೇ ಆದರೂ, ಜಾಹ್ನವಿ ಅವರಿಗೆ ಇದು ನಿಜವಾದ ಸ್ನೇಹವಾಗಿತ್ತು. ಚರ್ಚಾ ಸ್ಪರ್ಧೆಯಲ್ಲಿ ವಿರೋಧಿಗಳಾಗಿ ಮಾತನಾಡಿದ್ದರಿಂದ ಆರಂಭವಾದ ಈ ದೂರವು ಈಗ ಶಾಶ್ವತವಾಗುತ್ತದೆಯೇ ಎಂಬುದು ಪ್ರೇಕ್ಷಕರ ಕುತೂಹಲ. ಮನೆಯ ಇತರ ಸದಸ್ಯರು ಇವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅಶ್ವಿನಿ ಅವರು ಜಾಹ್ನವಿ ಅವರೊಂದಿಗೆ ಮಾತನಾಡುವ ಲಕ್ಷಣಗಳೇ ಕಾಣುತ್ತಿಲ್ಲ.
ಬಿಗ್‌ಬಾಸ್ ಸೀಸನ್ 12ರಲ್ಲಿ ಸ್ನೇಹ, ದ್ರೋಹ, ಆಟದ ಸ್ಟ್ರಾಟರ್ಜಿಗಳು ಮಿಶ್ರಣವಾಗಿ ಡ್ರಾಮಾ ಮೂಡಿಸುತ್ತಿವೆ. ಅಶ್ವಿನಿ-ಜಾಹ್ನವಿ ಜೋಡಿಯ ಈ ಬಿರುಕು ಮನೆಯ ಡೈನಾಮಿಕ್ಸ್ ಬದಲಾಯಿಸುತ್ತದೆ. ಜಾಹ್ನವಿ ಅವರು ಈಗ ಇತರ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಅಶ್ವಿನಿ ಅವರು ತಮ್ಮ ಆಟದಲ್ಲಿ ಗಮನ ಹರಿಸುತ್ತಿದ್ದಾರೆ.
