BBK 12: ಆಮೆ-ಮೊಲ ಕಥೆ ಹೇಳಿ ಜಾಹ್ನವಿ ಬಗ್ಗೆ ಮನಬಿಚ್ಚಿ ಮಾತನಾಡಿದ ಅಶ್ವಿನಿ ಗೌಡ

Untitled design 2025 10 27t224238.108

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಯಾವಾಗಲೂ ಏನೋ ಹೊಸ ಡ್ರಾಮಾ, ಹೊಸ ವಾದ-ವಿವಾದಗಳು ನಡೆಯುತ್ತಲೇ ಇವೆ. ಇತ್ತೀಚಿನ ಎಪಿಸೋಡ್‌ನಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿ ನಡುವಿನ ಬಿರುಕು ಎಲ್ಲರ ಗಮನ ಸೆಳೆದಿದೆ. ಇಬ್ಬರು ಹಿಂದಿನ ದಿನಗಳಲ್ಲಿ ‘ಅಳಿಯದ ಗೆಳತಿಯರು’ ಎಂದು ಕಾಣುತ್ತಿದ್ದರು. ಒಬ್ಬರಿಗೊಬ್ಬರು ಬೆಂಬಲ ನೀಡುತ್ತಾ ಪ್ರೇಕ್ಷಕರ ಮನಗೆದ್ದಿದ್ದರು. ಆದರೆ ಇದೀಗ ಆ ಗೆಳೆತನದಲ್ಲಿ ಬಿರುಕು ಮೂಡಿದೆ. ಈ ಕಹಾನಿಯ ಹೊಸ ಅಧ್ಯಾಯಕ್ಕೆ ಕಾರಣವಾಗಿದ್ದು “ಆಮೆ ಮತ್ತು ಮೊಲದ ಕಥೆ”!

ಅಶ್ವಿನಿ ಮತ್ತು ಜಾಹ್ನವಿ ನಡುವಿನ ಸಂಬಂಧ ಈಗ ಬಿಗುವಿನ ಹಾದಿಯಲ್ಲಿದೆ. ಇತ್ತೀಚಿನ ಟಾಸ್ಕ್‌ಗಳ ವೇಳೆ ಉಂಟಾದ ಭಿನ್ನಾಭಿಪ್ರಾಯಗಳು ಈ ಸ್ನೇಹಕ್ಕೆ ದೊಡ್ಡ ಹೊಡೆತ ಬಿಟ್ಟಂತಾಗಿದೆ. ಅಶ್ವಿನಿ ಗೌಡ ತಮ್ಮ ನೋವನ್ನು ರಾಶಿಕಾ ಶೆಟ್ಟಿ ಮುಂದೆ ಬಿಚ್ಚಿಟ್ಟಿದ್ದು, ಅವರ ಮಾತುಗಳು ಎಪಿಸೋಡ್‌ನಲ್ಲಿ ಹೈಲೈಟ್ ಆಗಿವೆ.

ಅಶ್ವಿನಿ ಗೌಡ ರಾಶಿಕಾ ಶೆಟ್ಟಿ ಜೊತೆ ಮನಬಿಚ್ಚಿ ಮಾತನಾಡುತ್ತಾ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ರಾಶಿಕಾ ಶೆಟ್ಟಿ ಮೊದಲು ಮಾತಿಗೆ ಎಳೆಯುತ್ತಾ, “ಇವಾಗ ನೀವು ಎಷ್ಟೆಲ್ಲ ಹೇಳಿಕೊಂಡು ಕೋಪ ಮಾಡಿಕೊಂಡ್ರಿ. ಭಿನ್ನಾಭಿಪ್ರಾಯ ಇದ್ದಾಗ ನೀವು ಕೂತ್ಕೊಂಡು ಬಗೆಹರಿಸಿಕೊಳ್ಳಬಹುದಿತ್ತು” ಎಂದು ಹೇಳಿದ್ದಾರೆ.

ಅಶ್ವಿನಿ ಉತ್ತರಿಸುತ್ತಾ, “ಹೌದು, ನಾನು ತುಂಬಾ ಸಲ ಹೇಳಿದ್ದೀನಿ. ಇವರು ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ. ಯಾಕೋ ನನಗೆ ಇದು ಸರಿ ಬರುತ್ತಿಲ್ಲ” ಎಂದು ಹೇಳಿದ್ದಾರೆ. ಮೊದಲ ಬಾರಿಗೆ ಜಾಹ್ನವಿಯನ್ನು ಎಚ್ಚರಿಸಿದ್ದು ತಾವೇ ಎಂದು ಅಶ್ವಿನಿ ಹೇಳಿಕೊಂಡಿದ್ದಾರೆ. “ಹೋಗಿ ಹೊರಗಡೆ ಬಂದು ಮಾತನ್ನಾಡಿ ಅಂತಾ. ಎಲ್ಲರೂ ಬಂದು ಒಂದು ರೀತಿ ಹೇಳಿದರೆ ಅವರು ಎಲ್ಲಿಯೂ ಕೂಡ ಸ್ಟ್ಯಾಂಡ್ ತೆಗೆದುಕೊಂಡಿರಲಿಲ್ಲ” ಎಂದು ಅವರು ವಿವರಿಸಿದ್ದಾರೆ.

ಜಾಹ್ನವಿಯ ಕಾರಣದಿಂದಾಗಿ ಅಶ್ವಿನಿ ಗೌಡ ಮನೆಯಲ್ಲಿ ಹಲವು ಜಂಟಿಗಳಿಂದ ದುಷ್ಮನಿ ಕಟ್ಟಿಕೊಂಡಿದ್ದಾರೆ. “ಅವಳಿಂದಾಗಿಯೇ ನಾನು ಮಾತನ್ನಾಡಿ, ಮತನ್ನಾಡಿ ಎಲ್ಲಾ ಜಂಟಿಗಳಿಂದಲೂ ದುಷ್ಮನಿ ಕಟ್ಟಿಕೊಂಡೆ. ಆದರೆ ನಂಗೆ ಗೊತ್ತಿಲ್ಲ” ಎಂದು ಅಶ್ವಿನಿ ನೋವು ಹೇಳಿಕೊಂಡಿದ್ದಾರೆ.

ಇದರ ಮಧ್ಯೆ ಜಾಹ್ನವಿ ಹೇಳಿದ ಆಮೆ ಮತ್ತು ಮೊಲದ ಕಥೆಯು ಇಡೀ ವಿವಾದದ ಕಾರಣವಾಗಿದೆ. ಈ ಕಥೆಯಲ್ಲಿ ಮೊಲ (ಮೊಲ) ವೇಗವಾಗಿ ಓಡಿ ಆಯಾಸಗೊಂಡು ಸೋತರೆ, ಆಮೆ ನಿಧಾನವಾಗಿ ನಡೆದು ಗೆಲ್ಲುತ್ತದೆ. ಆದರೆ ಜಾಹ್ನವಿ ಇದನ್ನು ಬಿಗ್‌ಬಾಸ್‌ ರೇಸ್‌ಗೆ ಹೋಲಿಸಿ ಹೇಳಿದ್ದು ಅಶ್ವಿನಿಗೆ ಕೋಪ ತರಿಸಿದೆ. ಅಶ್ವಿನಿ ಹೇಳಿದ್ದು, “ಇವರೆಲ್ಲ, ನೀನು ಮುಂದೆ ಹೋಗು, ನಿನ್ನ ಹಳ್ಳವನ್ನು ನೀನೇ ತೋಡಿಕೋ. ನಿಧಾನಕ್ಕೆ ನಿನ್ನನ್ನು ಮನೆಯಿಂದ ಕಳುಹಿಸಿ, ನಾವು ರೇಸ್‌ನಲ್ಲಿ ನಿಧಾನಕ್ಕೆ ಬರ್ತೀವಿ ಅಂತಾ ಅವರು ಕತೆ ಹೇಳಿದರು ಗೊತ್ತಾ? ಆಗಲೇ ನನಗೆ ಅರ್ಥವಾಯಿತು.” ಎಂದರು.

ಈ ಹೇಳಿಕೆ ಬಿಗ್ ಬಾಸ್ ಮನೆಯ ವಾತಾವರಣವೇ ಬದಲಾಯಿಸಿದೆ. ಉಳಿದ ಸ್ಪರ್ಧಿಗಳು ಈ ಕತೆ ಕೇಳಿ ಬೆಚ್ಚಿಬಿದ್ದಿದ್ದಾರೆ. ಕೆಲವರು ಅಶ್ವಿನಿಯ ಪರ ಮಾತನಾಡಿದರೆ, ಕೆಲವರು ಜಾಹ್ನವಿಯನ್ನು ಬೆಂಬಲಿಸಿದ್ದಾರೆ. ಈ ಸ್ನೇಹ ಮತ್ತೆ ಬದಲಾಗುತ್ತದೆಯೇ? ಅಶ್ವಿನಿ–ಜಾಹ್ನವಿ ನಡುವಿನ ಬಿರುಕು ಶಾಶ್ವತವಾಗುತ್ತದೆಯೇ? ಬಿಗ್ ಬಾಸ್ ಮನೆ ಈ ಕಹಾನಿಯನ್ನು ಹೇಗೆ ತಿರುಗಿಸಲಿದೆ ಎಂಬುದೇ ಕುತೂಹಲ.

Exit mobile version