ನಳ್ಳಿ ಮೂಳೆ ತಿಂದು ತೇಗಿದ ನಟ: ಕಾರ್ತಿ ಖೈದಿ ಲುಕ್‌ಗೆ ಹೋಲಿಸಿದ ಫ್ಯಾನ್ಸ್‌

Untitled design 2026 01 13T231032.116

ಬಿಗ್ ಬಾಸ್ ಕನ್ನಡ 12ನೇ ಸೀಸನ್ ಈಗ ಕುತೂಹಲದ ಘಟ್ಟ ತಲುಪಿದೆ. ಅದರಲ್ಲೂ ಈ ವಾರ ಕಡೆಯಾಗಿದ್ದು ಜ.18 ರಂದು ಫೈನಲ್‌ ಇದೆ. ಹೀಗಾಗಿ ಬಿಗ್‌ ಮನೆಯಲ್ಲಿರುವ ಸ್ಪರ್ದಿಗಳಿಗೆ ತಮ್ಮ ಆಸೆ ಏನಿದೆ ಹೇಳಿ ಎಂದು ಕೇಳಿದ್ದಾಗ ಪ್ರತಿ ಸ್ಪರ್ಧಿಗಳು ತಮ್ಮ ಆಸೆಗಳನ್ನ ಹೇಳಿಕೊಂಡಿದ್ದರು. ಅದರಲ್ಲಿ ಗಿಲ್ಲಿಯೂ ತಮ್ಮ ಆಸೆಯನ್ನು ಹೇಳಿಕೊಂಡಿದ್ದರು.

ಮನೆಯಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ಒಂದೆಡೆಯಾದರೆ, ಮನೆಯಲ್ಲಿನ ಭಾವನಾತ್ಮಕ ಕ್ಷಣಗಳು ವೀಕ್ಷಕರನ್ನು ಸೆಳೆಯುತ್ತಿವೆ. ಅದರಲ್ಲೂ ಗಿಲ್ಲಿ ನಟ ಹಾಗೂ ಕರಾವಳಿ ಬೆಡಗಿ ರಕ್ಷಿತಾ ತಮ್ಮದೇ ಆದ ಕಾರಣಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದ್ದಾರೆ.

1. ಗಿಲ್ಲಿ ನಟನ ನಳ್ಳಿ ಮೂಳೆ ಸಮಾಚಾರ

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಏನೇ ಮಾಡಿದರೂ ಅದು ಹೈಲೈಟ್ ಆಗುತ್ತಿದೆ. ಇತ್ತೀಚೆಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಮೂರು ಬೇಡಿಕೆಗಳನ್ನು ಇಡಲು ಅವಕಾಶ ನೀಡಿದ್ದರು. ಅದರಲ್ಲಿ ಒಂದು ಬೇಡಿಕೆಯನ್ನು ಈಡೇರಿಸುವುದಾಗಿ ಬಿಗ್ ಬಾಸ್ ಭರವಸೆ ನೀಡಿದ್ದರು. ಗಿಲ್ಲಿ ನಟ ಇಟ್ಟ ಬೇಡಿಕೆಗಳು ವಿಚಿತ್ರ ಹಾಗೂ ಮಜವಾಗಿದ್ದವು. ಗಿಲ್ಲಿ ಕೇಳಿದ ಬೇಡಿಯೆಂದರೆ, ಟಿವಿಯಲ್ಲಿ ಸಿನಿಮಾ ನೋಡಬೇಕು, ಮನೆಯಲ್ಲಿರುವ ಆನೆ ಮೇಲೆ ಕುಳಿತುಕೊಳ್ಳಬೇಕು ಮತ್ತು ನಳ್ಳಿ ಮೂಳೆ ಸವಿಯಬೇಕು ಎಂದು ಕೇಳಿದ್ದರು.

2. ರಕ್ಷಿತಾ ಅವರ ಸಾಮಾಜಿಕ ಕಳಕಳಿ

ಇನ್ನೊಂದೆಡೆ ರಕ್ಷಿತಾ ಅವರು ಇಟ್ಟ ಬೇಡಿಕೆಗಳು ಅವರ ಪ್ರಬುದ್ಧತೆಯನ್ನು ಮೆರೆದಿವೆ. ಸ್ವಾರ್ಥಕ್ಕಾಗಿ ಏನನ್ನೂ ಕೇಳದ ಅವರು, ತಮ್ಮ ಕರಾವಳಿಯ ಮೀನುಗಾರರ ಪರವಾಗಿ ಧ್ವನಿ ಎತ್ತಿದ್ದಾರೆ:

3. ಅಭಿಮಾನಿಗಳ ಮುಂದೆ ವೋಟ್‌ಗಾಗಿ ಮನವಿ

ಬಿಗ್ ಬಾಸ್ ಮನೆಯೊಳಗೆ ಈಗ ಅಭಿಮಾನಿಗಳ ಎಂಟ್ರಿಯಾಗಿದೆ. ಫ್ಯಾನ್ಸ್ ಮುಂದೆ ನಿಂತು ಸ್ಪರ್ಧಿಗಳು ತಮ್ಮ ವ್ಯಕ್ತಿತ್ವವನ್ನು ಸಾಬೀತುಪಡಿಸಲು ಮತ್ತು ಮತ ನೀಡುವಂತೆ ಮನವಿ ಮಾಡಲು ಬಿಗ್ ಬಾಸ್ ಅವಕಾಶ ನೀಡಿದ್ದಾರೆ. ಹೊಸ ಪ್ರೋಮೋದಲ್ಲಿ ಧ್ರುವಂತ್ ಅವರು ತಮ್ಮ ಗತ್ತು ಪ್ರದರ್ಶಿಸಿದ್ದರೆ, ಧನುಷ್ ಅವರು ನಾನು ಕಷ್ಟಪಟ್ಟಿದ್ದೇನೆ ಎಂದು ಹೇಳಲ್ಲ, ಸಾಧಿಸಬೇಕೆಂದರೆ ನಾವೇ ಕಷ್ಟಪಡಬೇಕು. ನೀವೆಲ್ಲಾ ಸ್ಟಾರ್‌ಗಳು, ನಾನು ನಿಮಗೆ ಫ್ಯಾನ್ ಎಂದು ಹೇಳುವ ಮೂಲಕ ಜನರ ಮನ ಗೆದ್ದಿದ್ದಾರೆ. ಕಾವ್ಯ ಕೂಡ ಅಭಿಮಾನಿಗಳನ್ನು ಕಂಡು ಭಾವುಕರಾಗಿದ್ದಾರೆ.

Exit mobile version