BBK 12: ಬಿಗ್ ಬಾಸ್ ಮನೆಯಲ್ಲಿ ಬೈಗುಳ-ಗುದ್ದಾಟ: ಅಶ್ವಿನಿ, ರಜತ್ ಜಗಳದ ವಿಡಿಯೋ ವೈರಲ್

Untitled design 2025 12 09T233212.886

ಬಿಗ್ ಬಾಸ್‌ ಮನೆಯ ವಾತಾವರಣ ಯಾವಾಗ ಹೇಗೆ ಬದಲಾಯಿಸಿಕೊಳ್ಳುತ್ತದೆ ಎಂದು ಯಾರೂ ಊಹಿಸೋಕೆ ಆಗೋದಿಲ್ಲ. ವಿಶೇಷವಾಗಿ ನಾಮಿನೇಷನ್ ವಾರ ಬಂದಾಗ ಮನೆಯಲ್ಲಿ ಒತ್ತಡ, ಭಾವನೆ, ಜಗಳ ಎಲ್ಲವೂ ಒಟ್ಟಿಗೆ ಕಾಣಬಹುದು. ಇದೇ ರೀತಿ, ಈ ವಾರದ ಟಾಸ್ಕ್ ವೇಳೆ ಅಶ್ವಿನಿ ಗೌಡ ಮತ್ತು ರಜತ್ ಕಿಶನ್ ನಡುವೆ ನಡೆದ ಗಲಾಟೆ, ಬಿಗ್ ಬಾಸ್ ಸೀಸನ್ 12ರಲ್ಲೇ ಒಂದು ದೊಡ್ಡ ಗಲಾಟೆಯೇ ನಡೆದಿದೆ.

ಈ ಬಾರಿ ‘ವಿಲನ್ ಸಾಮ್ರಾಜ್ಯ’ ಟಾಸ್ಕ್ ಅಡಿಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ. ನಿಯಮದ ಪ್ರಕಾರ, ಮನೆಯಿಂದ ಹೊರಹಾಕಬೇಕಾದ ಸ್ಪರ್ಧಿಗಳ ಹೆಸರು ಸೂಚಿಸಲು, ಅವರನ್ನು ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಬೇಕಾಗಿದೆ. ಹೀಗಾಗಿ ಸಾಮಾನ್ಯ ನಾಮಿನೇಷನ್ ಗಿಂತ ಈ ಟಾಸ್ಕ್‌ ಹೆಚ್ಚು ದೈಹಿಕ, ಹೆಚ್ಚು ಸಂವೇದನಾಶೀಲ. ಇದೇ ವೇಳೆ ರಜತ್, ಅಶ್ವಿನಿ ಗೌಡ ಅವರ ಹೆಸರನ್ನು ನಾಮಿನೇಟ್ ಮಾಡಿದ್ದಾರೆ.

ನಾಮಿನೇಷನ್ ಹೇಳುವಾಗ ರಜತ್ ನೀಡಿದ ಕಾರಣವೇ ಗಲಾಟೆಗೆ ಕಾರಣವಾಗಿದೆ. ಧ್ರುವಂತ್ ಟಿ-ಗಾಂಚಲಿ ಎಂದಾಗ ಅಶ್ವಿನಿ ಮೌನವಾಗಿದ್ದರು. ಆದರೆ ರಘು ಏನನ್ನೋ ಟೀಕೆ ಮಾಡಿದಾಗ ಮಾತ್ರ ತೀವ್ರವಾಗಿ ಪ್ರತಿಕ್ರಿಯಿಸಿರುವ ಬಗ್ಗೆ ರಜತ್ ಆರೋಪ ಮಾಡಿದರು. “ಇವರ ಜೊತೆ ಫೈಟ್ ಆಡೋಕೆ ಆಗಲ್ಲ. ಕಾನ್ಸಿಸ್ಟನ್ಸಿ ಇಲ್ಲ” ಎಂದು ರಜತ್ ನಾಮಿನೇಷನ್ ಕಾರಣ ಹೇಳಿದರು.

ಇದಕ್ಕೆ ಕೋಪಗೊಂಡ ಅಶ್ವಿನಿ, ರಜತ್‌ ಅವರ ಮಾತಿಗೆ ತೀವ್ರವಾಗಿ ಪ್ರತಿಕ್ರಿಯಿಸಿದರು. “ನೀವು ಇಲ್ಲಿ ಬಳಸೋ ಭಾಷೆ ಬೇರಾರೂ ಬಳಸಿಲ್ಲ. ಗಂಡಸರ ಜೊತೆ ಗುದ್ದಾಡ್ತೀವಿ ಅಂತಾ ನೀವೇ ಹೇಳಿದ್ರಿ. ಅಲ್ಲಿಗೆ ನೀವು ಗಂಡಸಾ? ನೀವೇ ಹೇಳಿದ್ದೀರಲ್ಲ!” ಎಂದು ಅಶ್ವಿನಿ ಜೋರಾಗಿ ಕೂಗಿದರು.

ಅಶ್ವಿನಿ ಮಾತು ಮುಗಿಯುವಷ್ಟರಲ್ಲಿ ಪರಿಸ್ಥಿತಿ ಇನ್ನಷ್ಟು ಕೆಟ್ಟಿತು. ಅಶ್ವಿನಿ ಮಾತಿಗೆ ರಜತ್ ಕೂಡ “ಗಂಡಸರ ಹತ್ತಿರ ಬರ್ತೀರಲ್ಲ ಅಂದ್ಕೊಳ್ರೆ” ಎಂದು ಹೇಳುತ್ತ, ಅವರು ಅಶ್ವಿನಿಯನ್ನು ಬಲವಾಗಿ ನೀರಿಗೆ ತಳ್ಳಿದರು. ಪ್ರೊಮೋದಲ್ಲಿ ಈ ಕ್ಷಣ ಅತ್ಯಂತ ತೀವ್ರವಾಗಿ ತೋರಿಸಲಾಗಿದ್ದು, ವೀಕ್ಷಕರಿಗೂ ಶಾಕ್ ಕೊಟ್ಟಿದೆ.

ಅಶ್ವಿನಿ ನೀರಿನಿಂದ ಮೇಲೆದ್ದು, ಕೈ ತೋರಿಸುತ್ತಾ ರಜತ್ ಕಡೆಗೆ “ಏ ಥೂ… ಕಚಡಾ!” ಎಂದು ಕೂಗಿದರು. ತಕ್ಷಣವೇ ರಜತ್ ಕೂಡ “ಕಚಡಾ ಅಂತೆ ಕಚಡಾ… ನಿನಗೇನು ಹೇಳೋದು ಕಚಡಾ!” ಎಂದು ಕೌಂಟರ್ ಕೊಟ್ಟರು.

ಇಬ್ಬರ ನಡುವಿನ ಈ ವಾಗ್ಯುದ್ಧ ಪ್ರೊಮೋ ಮುಖ್ಯ ಆಕರ್ಷಣೆಯಾಗಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ರಜತ್‌ನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಅಶ್ವಿನಿ ಅವರ ಮಾತುಗಳೇ ಗಲಾಟೆ ಹುಟ್ಟಿಸಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಜಗಳ, ಬೈಗುಳ, ಭಾವನಾತ್ಮಕ ಕ್ಷಣಗಳು ಹೊಸದೇನಲ್ಲ. ಆದರೆ ದೈಹಿಕವಾಗಿ ತಳ್ಳುವ ಘಟನೆಗಳು ವಿವಾದಕ್ಕೆ ಕಾರಣವಾಗುವುದು ಸಹಜ.  ಈಗ ಮನೆ ಒಳಗಿನ ಉಳಿದ ಸ್ಪರ್ಧಿಗಳು ಈ ಗಲಾಟೆಗೆ ಹೇಗೆ ಪ್ರತಿಕ್ರಿಯಿಸುತ್ತಾರೋ ಕಾದು ನೋಡಬೇಕಾಗಿದೆ.

Exit mobile version