ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘನೆ: ಕೈಮುಗಿದು ಕ್ಷಮೆ ಕೇಳಿದ ಅಶ್ವಿನಿ ಗೌಡ..!

Untitled design (91)

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಅಶ್ವಿನಿ ಗೌಡ ಅವರು ಮನವೊಲಿಸಿ ಕ್ಷಮೆ ಕೇಳಿದ್ದಾರೆ. ಕಳೆದ ಎಪಿಸೋಡ್ನಲ್ಲಿ ಹೋಸ್ಟ್ ಕಿಚ್ಚ ಸುದೀಪ್ ಅವರಿಂದ ಮತ್ತೊಮ್ಮೆ ‘ಕ್ಲಾಸ್’ ಪಡೆದ ನಂತರ, ಅಶ್ವಿನಿ ಅವರು ಕರ್ನಾಟಕದ ಜನತೆ ಮತ್ತು ಬಿಗ್ ಬಾಸ್ ತಂಡಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. 

ಮನೆಯ ಸದಸ್ಯರ ಪ್ರದರ್ಶನವನ್ನು ಮೌಲ್ಯಮಾಪನ ಮಾಡಿದ ಕ್ಯಾಪ್ಟನ್ ರಘು ಅಶ್ವಿನಿ ಗೌಡ ಅವರ ಪ್ರದರ್ಶನವನ್ನು ‘ಕಳಪೆ’ ಎಂದು ಪಟ್ಟಿ ಮಾಡಿದ್ದರು. ಶೋ ನಿಯಮಗಳ ಪ್ರಕಾರ, ಕಳಪೆ ಪ್ರದರ್ಶನ ನೀಡಿದವರು ‘ಜೈಲಿಗೆ  ಹೋಗಬೇಕಾಗಿತ್ತು. ಆದರೆ, ಜೈಲಿನ ಶಿಕ್ಷೆಯ ಸಮಯದಲ್ಲಿ ಅಶ್ವಿನಿ ಅವರು ಪದೇ ಪದೇ ನಿಯಮಗಳನ್ನು ಉಲ್ಲಂಘಿಸಿದ್ದು ವಿವಾದಕ್ಕೆ ಕಾರಣವಾಯಿತು.

ಅವರು ಜೈಲಿನಲ್ಲಿ ಇರಬೇಕಾದ್ದಕ್ಕಿಂತ ಹೊರಗೆ ಹೆಚ್ಚು ಸಮಯ ಕಳೆದರು. ಇದರ ಜೊತೆಗೆ, ಜೈಲಿನಲ್ಲಿದ್ದರೂ ಅನುಮತಿ ಇಲ್ಲದೆ ಆಪಲ್ ಮತ್ತು ಇತರ ಆಹಾರ ಪದಾರ್ಥಗಳನ್ನು ಸೇವಿಸಿ ಬಿಗ್ ಬಾಸ್ ಮನೆಯ ಮೂಲ ನಿಯಮಗಳನ್ನು ಮುರಿದದ್ದು ಗಂಭೀರವಾದ ಅಪರಾಧವಾಗಿದೆ.

ಸುದೀಪ್ ಅವರ ಮಾತಿನ ನಂತರ, ಅಶ್ವಿನಿ ತಮ್ಮ ತಪ್ಪನ್ನು ಒಪ್ಪಿಕೊಂಡು ಹೃದಯಪೂರ್ವಕ ಕ್ಷಮೆಯಾಚಿಸಿದ್ದಾರೆ. ಅವರ ಮಾತಿನಲ್ಲಿ, ರಘು ಅವರು ನನಗೆ ಕಳಪೆ ಕೊಟ್ಟಿರುತ್ತಾರೆ. ಆ ಕೋಪದಲ್ಲಿ ನಾನು ಬಿಗ್ ಬಾಸ್‌ನ ಮೂಲ ನಿಯಮಗಳನ್ನು ಉಲ್ಲಂಘನೆ ಮಾಡಿದ್ದೇನೆ. ಇದನ್ನೂ ಸುದೀಪ್ ಸರ್ ಕೂಡ ಹೇಳಿದ್ದಾರೆ. ನಿಜವಾಗಿಯೂ ನನ್ನಿಂದ ನಿಯಮ ಉಲ್ಲಂಘನೆ ಆಗಿದ್ದರೆ ಕ್ಷಮೆ ಕೇಳ್ತೀನಿ… ಇಡೀ ಬಿಗ್ ಬಾಸ್ ತಂಡಕ್ಕೆ ಕ್ಷಮೆ ಕೇಳ್ತಿದ್ದೀನಿ. ಹಾಗೆಯೇ ಇಡೀ ಕರ್ನಾಟಕಕ್ಕೆ ಕ್ಷಮೆ ಕೇಳ್ತೀನಿ. ನಾನೇನಾದ್ರೂ ತಪ್ಪು ಮಾಡಿದ್ರೆ ಖಂಡಿತ ಕ್ಷಮೆ ಕೇಳ್ತೀನಿ ಎಂದು ಹೇಳಿದ್ದಾರೆ.

Exit mobile version