ಮಹೀಂದ್ರ 3XO REVX ಕಾರು ಲಾಂಚ್, 5 ಆಕರ್ಷಕ ಬಣ್ಣಗಳಲ್ಲಿ ಲಭ್ಯ!

Web 2025 07 26t183620.279

ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಕಂಪನಿಯು ಭಾರತದ SUV ವಿಭಾಗದಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ತನ್ನ ಅತ್ಯಂತ ಜನಪ್ರಿಯ ಮಹೀಂದ್ರ 3XO ಕಾರಿನ ಹೊಸ ವೇರಿಯೆಂಟ್ ‘REVX’ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಅತ್ಯಾಧುನಿಕ ಫೀಚರ್ಸ್, ಆಕರ್ಷಕ ವಿನ್ಯಾಸ ಮತ್ತು ಉನ್ನತ ಕಾರ್ಯಕ್ಷಮತೆಯೊಂದಿಗೆ ಬಂದಿರುವ ಈ ಕಾರಿನ ಆರಂಭಿಕ ಎಕ್ಸ್-ಶೋರೂಮ್ ಬೆಲೆ ₹8.94 ಲಕ್ಷ ರೂಪಾಯಿಗಳಾಗಿದೆ.

ಮಹೀಂದ್ರ 3XO ಕಾರು ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳನ್ನು ಮಾರಾಟ ಮಾಡಿ ದಾಖಲೆ ಸೃಷ್ಟಿಸಿದೆ. ಇದು ಮಹೀಂದ್ರದ ಎಸ್‌ಯುವಿ ವಿಭಾಗದಲ್ಲಿ ಅತೀ ವೇಗವಾಗಿ ಈ ಮೈಲಿಗಲ್ಲು ತಲುಪಿದ ಕಾರಾಗಿದೆ. ಹೊಸ REVX ಸರಣಿಯು ಪ್ರೀಮಿಯಂ ವೈಶಿಷ್ಟ್ಯಗಳು, ವಿಶಿಷ್ಟ ಸ್ಟೈಲ್, ಮತ್ತು ಉನ್ನತ ಕಾರ್ಯಕ್ಷಮತೆಯೊಂದಿಗೆ ಗ್ರಾಹಕರ ಆಕಾಂಕ್ಷೆಗಳಿಗೆ ತಕ್ಕಂತೆ ರೂಪುಗೊಂಡಿದೆ. ಈ ಸರಣಿಯು ವೈಯಕ್ತಿಕ ಸ್ಟೈಲ್ ಮತ್ತು ವಿಭಿನ್ನತೆಯನ್ನು ಆಧರಿಸಿ ವಿನ್ಯಾಸಗೊಳಿಸಲಾಗಿದ್ದು, ಗ್ರಾಹಕರಿಗೆ ಆಕರ್ಷಕ ಅನುಭವವನ್ನು ಒದಗಿಸುತ್ತದೆ.

ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯ

REVX ಸರಣಿಯ ಮೂರು ವೇರಿಯೆಂಟ್‌ಗಳು ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿವೆ: ಗ್ಯಾಲಕ್ಸಿ ಗ್ರೇ, ಟಾಂಗೋ ರೆಡ್, ನೆಬ್ಯುಲಾ ಬ್ಲೂ, ಎವರೆಸ್ಟ್ ವೈಟ್, ಮತ್ತು ಸ್ಟೆಲ್ತ್ ಬ್ಲ್ಯಾಕ್. ಈ ಬಣ್ಣಗಳು ಕಾರಿನ ವಿನ್ಯಾಸಕ್ಕೆ ಹೆಚ್ಚಿನ ಆಕರ್ಷಣೆಯನ್ನು ತಂದಿವೆ.

REVX ಸರಣಿಯ ವಿಶೇಷತೆಗಳು
1. REVX M (ಎಕ್ಸ್-ಶೋರೂಮ್ ಬೆಲೆ: ₹8.94 ಲಕ್ಷ)
2. REVX M(O) (ಎಕ್ಸ್-ಶೋರೂಮ್ ಬೆಲೆ: ₹9.44 ಲಕ್ಷ)
3. REVX A (ಎಕ್ಸ್-ಶೋರೂಮ್ ಬೆಲೆ: ₹11.79 ಲಕ್ಷದಿಂದ ಆರಂಭ)

ಮಹೀಂದ್ರ 3XO REVX ಸರಣಿಯು ಆಧುನಿಕ ಗ್ರಾಹಕರ ಆಕಾಂಕ್ಷೆಗೆ ತಕ್ಕಂತೆ ವಿನ್ಯಾಸಗೊಂಡಿದ್ದು, ಸ್ಟೈಲ್, ಕಾರ್ಯಕ್ಷಮತೆ ಮತ್ತು ಸುರಕ್ಷತೆಯ ಸಮತೋಲನವನ್ನು ಒದಗಿಸುತ್ತದೆ. ಈ ಕಾರು ಯುವ ಗ್ರಾಹಕರಿಗೆ ಮತ್ತು ವೈಯಕ್ತಿಕ ಸ್ಟೈಲ್‌ಗೆ ಆದ್ಯತೆ ನೀಡುವವರಿಗೆ ಆದರ್ಶ ಆಯ್ಕೆಯಾಗಿದೆ.

Exit mobile version