ವಾಹನ ಸವಾರರಿಗೆ ಶಾಕ್: ಎಮಿಷನ್ ಟೆಸ್ಟ್ ಶುಲ್ಕ ಧಿಡೀರ್ ಹೆಚ್ಚಳ

ಅರ್ಷದ್ (5)

ಬೆಂಗಳೂರು, ಆಗಸ್ಟ್ 16: ರಾಜ್ಯದ ಲಕ್ಷಾಂತರ ವಾಹನ ಚಾಲಕರಿಗೆ ಸಾರಿಗೆ ಇಲಾಖೆ (RTO) ತೀವ್ರ ಬಿಸಿ ಮುಟ್ಟಿಸಿದೆ. ವಾಹನಗಳ ಹೊರಸೂಸುವ ಹೊಗೆಯ ಪ್ರಮಾಣವನ್ನು ತಪಾಸಣೆ ಮಾಡಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC – Pollution Under Control) ನೀಡುವ ಶುಲ್ಕವನ್ನು ಸಾರಿಗೆ ಇಲಾಖೆ ಧಿಡೀರ್ ಹೆಚ್ಚಳ ಮಾಡಿದೆ. 1989ರ ಕರ್ನಾಟಕ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ ಈ ಹೊಸ ದರಗಳನ್ನು ಪರಿಷ್ಕರಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿವೆ.

ಯಾವ ವಾಹನಕ್ಕೆ ಎಷ್ಟು ಹೆಚ್ಚಳ?

ಸರ್ಕಾರದ ಹೊಸ ಸೂಚನೆಯಂತೆ ಎಲ್ಲಾ ವರ್ಗದ ವಾಹನಗಳ PUC ತಪಾಸಣಾ ದರಗಳನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ.

ವಾಹನದ ಪ್ರಕಾರ ಹಳೇ ದರ (₹) ಹೊಸ ದರ (₹) ಏರಿಕೆ (₹)
ದ್ವಿಚಕ್ರ ವಾಹನಗಳು (ಬೈಕ್/ಸ್ಕೂಟರ್) 65 80 15
ಆಟೋರಿಕ್ಷಾ 75 80 5
ಪೆಟ್ರೋಲ್/ಎಲ್ಪಿಜಿ/ಸಿಎನ್ಜಿ ಕಾರುಗಳು 115 150 35
ಡೀಸೆಲ್ ವಾಹನಗಳು 160 200 40

ದ್ವಿಚಕ್ರ ವಾಹನಗಳ ಶುಲ್ಕವು 65 ರೂಪಾಯಿಯಿಂದ 80 ರೂಪಾಯಿಗೆ ಏರಿಕೆಯಾಗಿದ್ದರೆ, ಆಟೋರಿಕ್ಷಾಗಳ ಶುಲ್ಕವು 75 ರಿಂದ 80 ರೂಪಾಯಿಗೆ ಹೆಚ್ಚಳವಾಗಿದೆ. ಪೆಟ್ರೋಲ್, ಎಲ್ಪಿಜಿ ಹಾಗೂ ಸಿಎನ್ಜಿ ಚಾಲಿತ ಕಾರುಗಳ ತಪಾಸಣಾ ದರವನ್ನು 115 ರಿಂದ 150 ರೂಪಾಯಿಗೆ ಮತ್ತು ಡೀಸೆಲ್ ವಾಹನಗಳ ದರವನ್ನು 160 ರಿಂದ 200 ರೂಪಾಯಿಗೆ ಏರಿಸಲಾಗಿದೆ.

ದರ ಹೆಚ್ಚಳಕ್ಕೆ ಕಾರಣವೇನು?

ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ಹೆಚ್ಚುತ್ತಿರುವ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರಗಳ ಬಾಡಿಗೆ, ವಿದ್ಯುತ್ ಬಿಲ್, ಇಂಟರ್ನೆಟ್ ಸಾಧನಗಳ ನಿರ್ವಹಣೆ, ಪ್ರಿಂಟರ್ ಕಾರ್ಟ್ರಿಡ್ಜ್ ದರಗಳು ಮತ್ತು ಸಿಬ್ಬಂದಿಗಳ ವೇತನದಲ್ಲಿ ಏರಿಕೆಯಾಗಿರುವುದರಿಂದ ದರ ಪರಿಷ್ಕರಣೆಯ ಅನಿವಾರ್ಯತೆ ಉಂಟಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, “ಕಳೆದ ಹಲವು ವರ್ಷಗಳಿಂದ PUC ದರದಲ್ಲಿ ಯಾವುದೇ ಪರಿಷ್ಕರಣೆಯಾಗಿರಲಿಲ್ಲ. ಈಗಿನ ವೆಚ್ಚದ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಈ ತೀರ್ಮಾನ ಕೈಗೊಂಡಿದೆ. ಹೊಸ ದರವು ಕೇಂದ್ರಗಳ ಸುಸ್ಥಿರ ಕಾರ್ಯಾಚರಣೆಗೆ ಸಹಕಾರಿಯಾಗಲಿದೆ” ಎಂದು ತಿಳಿಸಿದ್ದಾರೆ.

ಕಂಪ್ಯೂಟರೀಕೃತ ಕೇಂದ್ರಗಳಿಗೆ ಮಾತ್ರ ಅನ್ವಯ

ಈ ಹೊಸ ದರ ಸಂಗ್ರಹಣೆಯು ಕಂಪ್ಯೂಟರೀಕೃತ ಮಾಲಿನ್ಯ ತಪಾಸಣಾ ಕೇಂದ್ರಗಳಿಗೆ ಮಾತ್ರ ಅನ್ವಯಿಸಲಿದೆ. ಸರ್ಕಾರವು ಈ ಕೇಂದ್ರಗಳಿಗೆ ಕೆಲವು ಕಡ್ಡಾಯ ಮಾರ್ಗಸೂಚಿಗಳನ್ನೂ ಜಾರಿಗೊಳಿಸಿದೆ.

PUC ಪ್ರಮಾಣಪತ್ರದ ಮಹತ್ವ

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಸಂಚಾರ ಪೊಲೀಸರು PUC ತಪಾಸಣೆಯನ್ನು ಕಟ್ಟುನಿಟ್ಟಾಗಿ ನಡೆಸುತ್ತಿದ್ದಾರೆ. ಮಾನ್ಯತೆ ಹೊಂದಿರುವ ಪ್ರಮಾಣಪತ್ರ ಇಲ್ಲದಿದ್ದರೆ ಮೋಟಾರು ವಾಹನ ಕಾಯ್ದೆಯಡಿ ಭಾರಿ ದಂಡ ತೆರಬೇಕಾಗುತ್ತದೆ. PUC ಪ್ರಮಾಣಪತ್ರವು ವಾಹನದ ಹೊಗೆ ಪ್ರಮಾಣವು ನಿಗದಿತ ಮಿತಿಯಲ್ಲಿದೆ ಎಂಬುದನ್ನು ದೃಢಪಡಿಸುತ್ತದೆ. ಇದು ಪರಿಸರ ಸಂರಕ್ಷಣೆಗೂ ಮುಖ್ಯವಾಗಿದೆ.

ವಾಹನ ಸವಾರರಿಗೆ ಸಲಹೆಗಳು

 

Exit mobile version