ವಿಶ್ವದ ಅತಿ ದೊಡ್ಡ ಹಾವು..!

ದೈತ್ಯ ಹಾವು ಪತ್ತೆ ಭಾರತದ ವಿಜ್ಞಾನಿಗಳು 50 ಅಡಿ ಎತ್ತರದ ಹಾವು ವಾಸುಕಿ ಇಂಡಿಕಸ್‌ನ ಪಳೆಯುಳಿಕೆಗಳನ್ನು ಪತ್ತೆಹಚ್ಚಿದ್ದಾರೆ.

ಹಾವಿನ ಹೆಸರಿಗೆ ಪೌರಾಣಿಕ ಲಿಂಕ್! ಶಿವನ ಕೊರಳು ಅಲಂಕರಿಸಿದ ಸರ್ಪ  ವಾಸುಕಿ. ಹೀಗಾಗಿ, ಈ ಹಾವಿಗೆ ವಾಸುಕಿ ಇಂಡಿಕಸ್ ಎಂದು ಹೆಸರಿಡಲಾಗಿದೆ

ಗುಜರಾತ್‌ನಲ್ಲಿ ಪಳೆಯುಳಿಕೆಗಳು ಪತ್ತೆ ಐಐಟಿ ರೂರ್ಕಿಯ ಸಂಶೋಧಕರು ಗುಜರಾತ್‌ನ ಕಲ್ಲಿದ್ದಲು ಗಣಿಗಳಲ್ಲಿ 27 ಪಳೆಯುಳಿಕೆಗೊಂಡ ಕಶೇರುಖಂಡಗಳನ್ನು ಕಂಡುಹಿಡಿದರು.

ನಿಜವಾದ ದೈತ್ಯ ಅಂದಾಜು 36 ರಿಂದ 50 ಅಡಿ ಉದ್ದವಿದ್ದ ವಾಸುಕಿ ಇಂಡಿಕಸ್, ಸುಮಾರು 2,200 ಪೌಂಡ್‌ಗಳಷ್ಟು ತೂಕವಿತ್ತು ಎಂಬ ಅಂದಾಜು

ಹಾವಿಗೆ ಬೇಕಿತ್ತು ಹಿತಕರ ಹವಾಮಾನ ಈ ಪ್ರಾಚೀನ ಹಾವು ಸುಮಾರು 28°C ಬೆಚ್ಚಗಿನ ತಾಪಮಾನದಲಿ ಬೆಳೆಯುತ್ತೆ

ಹೊಂಚು ಹಾಕಿ ದಾಳಿ! ವಾಸುಕಿ ಇಂಡಿಕಸ್ ಬೇಟೆಯನ್ನು ಸೆರೆ ಹಿಡಿಯುವ ಅತಿ ದೊಡ್ಡ ತಂತ್ರಗಾರನಾಗಿತ್ತು!

ಒಂದು ವಿಶಿಷ್ಟ ಪ್ರಭೇದ ಭಾರತ, ಆಫ್ರಿಕಾ ಮತ್ತು ಯುರೋಪ್‌ನಾದ್ಯಂತ 100 ಮಿಲಿಯನ್ ವರ್ಷಗಳಷ್ಟು ಹಿಂದೆ ಇದ್ದ ಹಾವು.. 

ಜೀವ ವಿಕಾಸದ ಹಾದಿ..  ವಿಭಿನ್ನ ಪ್ರದೇಶಗಳಲ್ಲಿ ವೈವಿದ್ಯಮಯ ಜೀವ ಸಂತತಿ ಹರಡಿದ್ದ ಸಂಕೇತವಿದು..

ಭಾರತದಲ್ಲಿ ಸಿಕ್ಕ ಜೀವ ವೈವಿದ್ಯತೆಯ ನಿಧಿ ಇತಿಹಾಸ ಪೂರ್ವ ದೈತ್ಯ ಜೀವಿಗಳ ಯುಗದ ಜೀವ ವೈವಿದ್ಯತೆಗೆ ಸಿಕ್ತು ಸಾಕ್ಷಿ 

ಭೂಮಿಯ ಭೂತಕಾಲವಿದು! ವಾಸುಕಿ ಇಂಡಿಕಸ್ ಭೂಮಿಯ ಪ್ರಾಚೀನ ಪರಿಸರ ವ್ಯವಸ್ಥೆಗಳ ಬಗ್ಗೆ ಅಪರೂಪದ ನೋಟ ಒದಗಿಸುತ್ತದೆ.