ಪರೀಕ್ಷಾ ಗದ್ದಲ, ನಿರೀಕ್ಷೆಗಳ ಮಧ್ಯೆ ವಿದ್ಯಾರ್ಥಿಯೊಬ್ಬನು ಎದುರಿಸಿದ ಅಪರೂಪದ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೋತಿಗಳು ಮನುಷ್ಯರ ಕೈಯಲ್ಲಿದ್ದ ವಸ್ತುಗಳನ್ನು ಕಿತ್ತುಕೊಂಡು ಮರಕ್ಕೆ ಏರಿ ಕುಳಿತುಕೊಳ್ಳುವುದು ಸಾಮಾನ್ಯ. ಆದರೆ ಹದ್ದುಗಳು, ಅಂದರೆ ಹಕ್ಕಿಗಳು ಈ ರೀತಿ ಮನುಷ್ಯರ ಕೈಯಿಂದ ಏನಾದರೂ ಕಸಿದುಕೊಳ್ಳುವುದು ಬಹಳ ಅಪರೂಪ. ಆದರೆ ಕೇರಳದ ಕಾಸರಗೋಡಿನಲ್ಲಿ ಸಂಭವಿಸಿದ ಈ ಘಟನೆಯು ಎಲ್ಲರ ಗಮನ ಸೆಳೆದಿದೆ.
ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯೊಬ್ಬನಿಗೆ ಬೆಳಗ್ಗೆ 7:30ಕ್ಕೆ ಪರೀಕ್ಷೆ ಆರಂಭವಾಗಬೇಕಿತ್ತು. ಹಾಲ್ ಟಿಕೆಟ್ ಹಿಡಿದು ಪರೀಕ್ಷಾ ಹಾಲ್ ಎದುರು ನಿಂತಿದ್ದ ಆ ವಿದ್ಯಾರ್ಥಿಗೆ ನಿರೀಕ್ಷೆಯೇ ಇಲ್ಲದ ರೀತಿಯಲ್ಲಿ ಹದ್ದೊಂದು ಬಂದು ಹಾಲ್ ಟಿಕೆಟ್ ಕಸಿದುಕೊಂಡು ಹಾರಿತ್ತು. ಆ ಹದ್ದು ಶಾಲೆಯ ಮೇಲ್ಮಹಡಿಗೆ ಹಾರಿ, ಕಿಟಕಿಯ ಬಾಗಿಲಿನಲ್ಲಿ ಕುಳಿತು, ತನ್ನ ಕೊಕ್ಕಿನಲ್ಲಿ ಹಾಲ್ ಟಿಕೆಟ್ ಹಿಡಿದು ಕುತಿತ್ತು.
ಈ ದೃಶ್ಯ ನೋಡಿ ವಿದ್ಯಾರ್ಥಿಯು ಆತಂಕಗೊಂಡಿದ್ದನು. ಪರೀಕ್ಷೆಯ ತಕ್ಷಣದ ಹೊತ್ತಿನಲ್ಲಿ, ಇದೊಂದು ದೊಡ್ಡ ಅಡೆತಡೆಯಾಗಿತ್ತು. ವಿದ್ಯಾರ್ಥಿ ಮತ್ತು ಸುತ್ತಮುತ್ತಲಿನವರನ್ನು ಈ ಘಟನೆ ಅಚ್ಚರಿಗೊಳಿಸಿತ್ತು. ಹದ್ದು ಯಾವುದೇ ಭಯವಿಲ್ಲದೆ, ಜನಸಂದಣಿ ಇರುವ ಕೆಳಗೆ ತಿರುಗಿ ನೋಡದೆ ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿತ್ತು.
ಆತಂಕದ ಆ ಕ್ಷಣದಲ್ಲಿ ವಿದ್ಯಾರ್ಥಿ ಎಷ್ಟು ದೇವರನ್ನು ಪ್ರಾರ್ಥಿಸಿದನೋ ತಿಳಿಯದು, ಆದರೆ ಕೊನೆಗೂ ಹದ್ದು ದಯೆ ತೋರಿ, ಪರೀಕ್ಷೆ ಆರಂಭವಾಗಲು ಕೆಲ ಸೆಕೆಂಡುಗಳು ಬಾಕಿ ಇರುವ ಹೊತ್ತಿನಲ್ಲಿ ಹಾಲ್ ಟಿಕೆಟ್ ಕೆಳಗೆ ಬಿಟ್ಟಿತ್ತು. ವಿದ್ಯಾರ್ಥಿ ತಕ್ಷಣವೇ ಟಿಕೆಟ್ ಪಡೆದುಕೊಂಡು ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ಪಡೆದಿದ್ದಾನೆ. ಅಧಿಕಾರಿಗಳು ಕೂಡ ಕೂಡಲೇ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು, ಯಾವುದೇ ಅಡಚಣೆ ಇಲ್ಲದಂತೆ ಪರೀಕ್ಷೆಗೆ ಅವಕಾಶ ನೀಡಿದ್ದಾರೆ. ವಿದ್ಯಾರ್ಥಿಯು ಯಾವುದೇ ಆತಂಕವಿಲ್ಲದೇ ಪರೀಕ್ಷೆ ಬರೆದಿದ್ದಾರೆ.
ಈ ದೃಶ್ಯವನ್ನು ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
परीक्षा से पहले एडमिट कार्ड उड़ा ले गया चील, फिर जो हुआ…
केरल के कासरगोड में एक स्कूल में उस समय हड़कंप मच गया गया जब केरल लोक सेवा आयोग की परीक्षा से ठीक पहले जब एक चील ने एक अभ्यर्थी का हॉल टिकट झपट लिया और स्कूल की खिड़की पर बैठकर उसे अपनी चोंच में दबाए रखा, pic.twitter.com/f7TlDLP8of
— tarun yadav / तरुण यादव (@CameramanTarun) April 11, 2025
ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
- Tata Play-1665
- U-Digital-ಮೈಸೂರು-160
- Metro Cast Network-ಬೆಂಗಳೂರು-ಬೆಳಗಾವಿ-30-828
- V4 digital network-623
- Abhishek network-817
- Malnad Digital network-45
- JBM network-ರಾಮದುರ್ಗ-54
- Channel net nine-ಧಾರವಾಡ-128
- Basava cable network-ಚಳ್ಳಕೆರೆ-54
- City channel network– ಚಳ್ಳಕೆರೆ-54
- RST digital-ಕಾರ್ಕಳ-101
- Vinayak cable-ಪಟ್ಟನಾಯಕನಹಳ್ಳಿ-54
- Mubarak digital-ಸಂಡೂರು-54
- SB cable-ಸವದತ್ತಿ-54
- Bhosale network-ವಿಜಯಪುರ-54
- Surya digital-ಜಗಳೂರು-54
- Gayatri network-ಸಿಂಧನೂರು-54
- Global vision-ದಾವಣಗೆರೆ-54
- Janani cable-ಮಂಡ್ಯ-54
- Hira cable-ಬೆಳಗಾವಿ-ಹುಬ್ಬಳ್ಳಿ-54
- UDC network-ಹಾರೋಗೇರಿ-54
- Moka cable-ಬಳ್ಳಾರಿ-100
- CAN network-ಚಿಕ್ಕೋಡಿ-54
- KK digital-ಗಂಗಾವತಿ-54
- Victory network-ದಾವಣಗೆರೆ-54





