ಬ್ಲಾಸ್ಟ್ ಆಗುತ್ತಾ AI ಬಬಲ್?: ಮತ್ತೆ ಸಂಕಷ್ಟದಲ್ಲಿ ಟೆಕ್ ಕಂಪನಿಗಳು

Untitled Design 2026 11 04T113046.660

AI ಇತ್ತೀಚೆಗೆ ಸಿಕ್ಕಪಟ್ಟೆ ಸದ್ದು ಮಾಡುತ್ತಿರುವ ಸಾಧನ. ಸಾಫ್ಟ್ವೇರ್ನಿಂದ ಹಿಡಿದು ಹಾರ್ಡ್ವೇರ್ವರೆಗೂ ಕೂಡ ಈ ಎಐ ತನ್ನ ಸಾಮರ್ಥ್ಯವನ್ನ ಪ್ರೂವ್ ಮಾಡುತ್ತಲೇ ಬಂದಿದೆ. ಇಂತಹ ಎಐ ನಿಂದ ಲಾಭವೂ ಎಷ್ಟಿದೆಯೋ ಅಷ್ಟೇ ನಷ್ಟವೂ ಇದೆ ಎಂಬುದು ಈಗಾಗಲೇ ಕಂಪನಿಗಳಿಗೆ ತಿಳಿದು ಬಂದಿದೆ. ಇದೀಗ ಮತ್ತೆ ಎಐ ಭೀತಿ ದೊಡ್ಡ ದೊಡ್ಡ ಸಾಫ್ಟ್ವೇರ್ ಕಂಪನಿಗಳಿಗೆ ಭೀತಿಯನ್ನ ಹುಟ್ಟಿಸಿದೆ ಎಂಬಂತಹ ಮಾತುಗಳು ಶುರುವಾಗಿದೆ.

ಬ್ಲಾಸ್ಟ್ ಆಗುತ್ತಾ AI ಬಬಲ್?

ಇಂಟೆಲ್, ಅಮೆಜಾನ್, ಮೈಕ್ರೋಸಾಫ್ಟ್‌ ಸೇರಿದಂತೆ ಹಲವು ದಿಗ್ಗಜ ಕಂಪನಿಗಳು AI ಮೇಲೆ ಕಣ್ಣುಮುಚ್ಚಿ ನಂಬಿಕೆ ಇಟ್ಟು ಕೋಟ್ಯಂತರ ಹಣವನ್ನು ಹೂಡಿಕೆ ಮಾಡಿವೆ. ಆದರೆ, ಮನುಷ್ಯನ ಬುದ್ಧಿಚಾತುರ್ಯವನ್ನೇ ಮೀರಿಸುವ ಹಂತಕ್ಕೆ ಬೆಳೆದಿರುವ ಈ AI ತಂತ್ರಜ್ಞಾನದ ನಿರ್ವಹಣೆ ಮತ್ತು ಮುನ್ನಡೆಸುವ ವೆಚ್ಚ ಮಿತಿಮೀರಿದೆ. ವರದಿಗಳ ಪ್ರಕಾರ, ಒಟ್ಟಾರೆ ಮಾರುಕಟ್ಟೆಯಲ್ಲಿ ಸುಮಾರು 4 ಟ್ರಿಲಿಯನ್ ಡಾಲರ್ ವರೆಗಿನ ನಷ್ಟ ಅಥವಾ ಆರ್ಥಿಕ ಹೊರೆಯ ಮುನ್ಸೂಚನೆ ಕಾಣಿಸಿಕೊಂಡಿದೆ. ಹೂಡಿಕೆ ಮಾಡಿದ ಹಣ ವಾಪಸ್ ಬಾರದೆ, ಮುಂದೇನು ಮಾಡಬೇಕು ಎಂಬ ಗೊಂದಲದಲ್ಲಿ ಕಂಪನಿಗಳು ಪರದಾಡುವಂತಾಗಿದೆ.

ಬೀದಿಗೆ ಬೀಳುತ್ತಾ ಸಾವಿರಾರು ಮಂದಿಯ ಬದುಕು?

AI ಅಬ್ಬರ ಶುರುವಾದಾಗಿನಿಂದಲೂ ಜಾಗತಿಕವಾಗಿ ನೂರಲ್ಲ, ಸಾವಿರಾರು ನೌಕರರು ಈಗಾಗಲೇ ತಮ್ಮ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈಗ ಒಂದುವೇಳೆ ಈ ‘AI ಬಬಲ್’ ನಿಜಕ್ಕೂ ಬ್ಲಾಸ್ಟ್ ಆದಲ್ಲಿ ಅಥವಾ ಹೂಡಿಕೆದಾರರ ವಿಶ್ವಾಸ ಕುಸಿದರೆ, ಮತ್ತಷ್ಟು ದೊಡ್ಡ ಮಟ್ಟದಲ್ಲಿ ಉದ್ಯೋಗ ಕಡಿತಗೊಂಡು ಸಾವಿರಾರು ಜನರ ಜೀವನ ಅತಂತ್ರವಾಗಲಿದೆ ಎಂಬ ಆತಂಕ ಶುರುವಾಗಿದೆ.

ಯುದ್ಧದ ಕಾರ್ಮೋಡ: ಅಮೆರಿಕದಿಂದ ಭಾರತದತ್ತ ಟೆಕ್ಕಿಗಳ ವಾಪಸಾತಿ?

ಈ ಆರ್ಥಿಕ ಬಿಕ್ಕಟ್ಟಿನ ಜೊತೆಗೆ ಮತ್ತೊಂದು ಆತಂಕಕಾರಿ ಬೆಳವಣಿಗೆಯೂ ಮುನ್ನೆಲೆಗೆ ಬಂದಿದೆ. ಮೂಲಗಳ ಪ್ರಕಾರ, ಅಮೆರಿಕ ಮತ್ತು ಇರಾನ್‌ ನಡುವಿನ ಉದ್ವಿಗ್ನತೆಯಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲಿ ಜೀವನ ನಡೆಸುವುದು ಕಷ್ಟವಾಗಿರುವುದರಿಂದ, ನೂರಾರು ಭಾರತೀಯ ಟೆಕ್ಕಿಗಳು ಸ್ವದೇಶಕ್ಕೆ (ಭಾರತಕ್ಕೆ) ವಾಪಸಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಈಗಾಗಲೇ ಉದ್ಯೋಗ ಮಾರುಕಟ್ಟೆಯಲ್ಲಿರುವ ಒತ್ತಡವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಒಟ್ಟಾರೆಯಾಗಿ, AI ಕ್ಷೇತ್ರ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಇರುವ ಕೆಲಸಗಳನ್ನೂ ಇದು ಕಿತ್ತುಕೊಳ್ಳುತ್ತದೆ ಎಂದು ಎಚ್ಚರಿಸುತ್ತಿದ್ದಾರೆ. AI ಜಗತ್ತನ್ನು ಎತ್ತೆತ್ತ ಕೊಂಡೊಯ್ಯಲಿದೆ ಮತ್ತು ಇದರ ಅಂತಿಮ ಪರಿಣಾಮವೇನು ಎಂಬುದನ್ನು ಕಾದು ನೋಡಬೇಕಿದೆ.

Exit mobile version