ಆಸ್ಟ್ರೇಲಿಯಾ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಟ್ವೀಟ್..!

Untitled design 2025 10 16t170023.105

ಚಾಂಪಿಯನ್ಸ್ ಟ್ರೋಫಿಯ ಫೈನಲ್ ನಂತರ ಮೊದಲ ಬಾರಿಗೆ ಟೀಮ್ ಇಂಡಿಯಾ ತ್ರಿವರ್ಣ ಜೆರ್ಸಿ ಧರಿಸಲಿರುವ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ನಿಗೂಢ ಸಂದೇಶ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಅಕ್ಟೋಬರ್ 19ರಿಂದ ಶುರುವಾಗಲಿರುವ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಯ ಮುನ್ನಾದಿನದಂದು ಕೊಹ್ಲಿ ಹಂಚಿಕೊಂಡ ಟ್ವೀಟ್ ಅಭಿಮಾನಿಗಳ ಮಧ್ಯೆ ಹೊಸ ಚರ್ಚೆಗೆ ಕಾರಣವಾಗಿತ್ತು.

ಸಾಮಾನ್ಯವಾಗಿ ತಮ್ಮ ವೈಯಕ್ತಿಕ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳದ ವಿರಾಟ್ ಕೊಹ್ಲಿ, ಈ ಸಲ ನೀವು ನಿಜವಾಗಲೂ ಸೋಲುವುದು ಯಾವಾಗ ಅಂದರೆ, ನೀವು ಬಿಟ್ಟು ಕೊಡಲು ನಿರ್ಧರಿಸಿದಾಗ…” ಎಂಬ ಸಂದೇಶವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಟೀಮ್ ಇಂಡಿಯಾ ಮರುಸಂಘಟನೆಯ ಹಂತದಲ್ಲಿ ಇದ್ದಿದ್ದು, ಹೊಸದಾಗಿ ಹೀಡ್ ಕೋಚ್ ಆಗಿ ಗೌತಮ್ ಗಂಭೀರ್ ಅವರು ನೇಮಕಗೊಂಡಿದ್ದ ಕಾರಣ ಈ ಟ್ವೀಟ್ ಬಹಳಷ್ಟು ಮಂದಿಗೆ ದೊಡ್ಡ ಪ್ರಶ್ನೆಯಾಗಿತ್ತು. ಕೆಲವು ಅಭಿಮಾನಿಗಳು ಮತ್ತು ವಿಮರ್ಶಕರು ಇದು ಹೊಸ ಕೋಚ್ ಗಂಭೀರ್ ಅವರಿಗೆ ನೀಡಿದ ತಿರುಗೇಟು ಎಂದು ಕೂಡ ಭಾವಿಸಿದ್ದರು.

ಆದರೆ, ಈ ಚರ್ಚೆಗಳು ವೈರಲ್ ಆಗುತ್ತಿದ್ದ ಹಾಗೆಯೇ ವಿರಾಟ್ ಕೊಹ್ಲಿಯಿಂದಲೇ ಸ್ಪಷ್ಟತೆ ಬಂತು. ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದು ಒಂದು ಬ್ರಾಂಡ್ ಜಾಹೀರಾತಿಗೆ ಸಂಬಂಧಿಸಿದ ಸ್ಲೋಗನ್ ಎಂದು ಅವರು ಸೂಚಿಸುವ ವಿಡಿಯೋವನ್ನು ಪೋಸ್ಟ್ ಮಾಡಿ, ಎಲ್ಲಾ ಊಹಾಪೋಹಗಳಿಗೆ ತಡೆ ಹಾಕಿದರು. ಈ ವಿಡಿಯೋ ಪ್ರತಿಕ್ರಿಯೆಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿದ್ದ ಗೊಂದಲಕ್ಕೆ ಅಂತ್ಯ ಹಾಡಿದರು.

ಅಕ್ಟೋಬರ್ 19ರಿಂದ ಶುರುವಾಗಲಿರುವ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿಯ ಹಿಂತಿರುಗುವಿಕೆ ಅತ್ಯಂತ ದೊಡ್ಡ ಆಕರ್ಷಣೆಯಾಗಿದೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮುಂತಾದ ಪ್ರಮುಖ ಆಟಗಾರರನ್ನು ವಿಶ್ರಾಂತಿಯಲ್ಲಿ ಇಡಲಾಗಿದೆ. 

ಭಾರತದ ಏಕದಿನ ತಂಡ: ಶುಭ್ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ , ಅಕ್ಷರ್ ಪಟೇಲ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಧ್ರುವ್ ಜುರೆಲ್.

ಆಸ್ಟ್ರೇಲಿಯಾ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಅಲೆಕ್ಸ್ ಕ್ಯಾರಿ, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಓವನ್, ಮ್ಯಾಥ್ಯೂ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ.

ಈ ಸರಣಿಯು ಎರಡೂ ತಂಡಗಳಿಗೆ ವಿಶ್ವಕಪ್ ತಯಾರಿಯ ಉತ್ತಮ ಅವಕಾಶವನ್ನು ನೀಡಲಿದೆ. ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದು ಮತ್ತು ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ವಿವಾದ ಈ ಸರಣಿಯ ಆರಂಭಕ್ಕೆ ಹೆಚ್ಚಿನ ಉತ್ಸಾಹ ಸೃಷ್ಟಿಸಿದೆ.

Exit mobile version