ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA)ಯ ಅಧ್ಯಕ್ಷೀಯ ಹಾಗೂ ಇತರ ಪದಾಧಿಕಾರಿಗಳ ಚುನಾವಣೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮಾಜಿ ಭಾರತೀಯ ವೇಗಿ ಬಿ.ಕೆ. ವೆಂಕಟೇಶ್ ಪ್ರಸಾದ್ ನೇತೃತ್ವದ ಬಣ ಹಾಗೂ ಪ್ರಸ್ತುತ ಅಧ್ಯಕ್ಷ ರೊಗರ್ ಬಿನ್ನಿ ಬೆಂಬಲಿತ ಬ್ರಿಜೇಶ್ ಪಟೇಲ್ ಬಣದ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ಶನಿವಾರ ಸಂಜೆ ಪ್ಯಾಲೇಸ್ ಗ್ರೌಂಡ್‌ನಲ್ಲಿ ವೆಂಕಟೇಶ್ ಪ್ರಸಾದ್ ಬಣ ಆಯೋಜಿಸಿದ್ದ ಸಂವಾದ ಕಾರ್ಯಾಂಪೇನ್‌ನಲ್ಲಿ ನೂರಾರು ಕೆಎಸ್‌ಸಿಎ ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಾರತದ ಮಹಾನ್ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪ್ರಸಾದ್ ಬಣಕ್ಕೆ ತೆರೆದ ಬೆಂಬಲ ಘೋಷಿಸಿದರು.
“ಕರ್ನಾಟಕ ಕ್ರಿಕೆಟ್ ಈಗ 10 ಹೆಜ್ಜೆ ಹಿಂದೆ ಹೋಗಿದೆ. ನಮ್ಮ ಅಧಿಕಾರಾವಧಿಯಲ್ಲಿ ಎರಡು ಹೆಜ್ಜೆ ಮುಂದೆ ಇತ್ತು. ಚಿನ್ನಸ್ವಾಮಿ ಸ್ಟೇಡಿಯಂನ ಮೂಲಸೌಕರ್ಯ ದಯನೀಯ ಸ್ಥಿತಿಯಲ್ಲಿದೆ. ಹಣದ ಕೊರತೆ ಇಲ್ಲ, ಆದರೆ ಇಚ್ಛಾಶಕ್ತಿ ಇಲ್ಲ. ರಾಜ್ಯದ ಯುವ ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ ಬೇಕು. ಈ ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್ ತಂಡದ ಗೆಲೇ ಕರ್ನಾಟಕ ಕ್ರಿಕೆಟ್‌ನ ಭವಿಷ್ಯ ಇದೆ,” ಎಂದು ಕುಂಬ್ಳೆ ತೀವ್ರವಾಗಿ ಹೇಳಿದರು.
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಟೀಂ ಗೇಮ್ ಚೇಂಜರ್ಸ್:
• ಅಧ್ಯಕ್ಷ – ಬಿ.ಕೆ.ವೆಂಕಟೇಶ್ ಪ್ರಸಾದ್
• ಉಪಾಧ್ಯಕ್ಷ – ಸುಜಿತ್ ಸೋಮಸುಂದರ್,
• ಜಂಟಿ ಕಾರ್ಯದರ್ಶಿ – ಎ.ವಿ. ಶಶಿಧರ್
• ಖಜಾಂಚಿ – ಬಿ.ಎನ್.ಮಧುಕರ್
ಟೀಂ ಬ್ರಿಜೇಶ್ ಪಟೇಲ್:
• ಅಧ್ಯಕ್ಷ – ಕೆ.ಎನ್.ಶಾಂತಕುಮಾರ್
• ಉಪಾಧ್ಯಕ್ಷ – ಡಿ.ವಿನೋದ್ ಶಿವಪ್ಪ
• ಕಾರ್ಯದರ್ಶಿ – ಜೈರಾಮ್ ಇ.ಎಸ್
• ಖಜಾಂಚಿ – ಎಂ.ಎಸ್.ವಿನಯ್
ಮತದಾನ ವಿವರ
- ಒಟ್ಟು ಮತದಾರರು: 1,911
- ಆಜೀವ ಸದಸ್ಯರು: 1,563
- ಸಾಂಸ್ಥಿಕ (ಕ್ಲಬ್) ಮತಗಳು: 348
- ಮತದಾನ ಸಮಯ: ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ
- ಫಲಿತಾಂಶ: ಇಂದು ರಾತ್ರಿಯೇ ಹೊರಬೀಳುವ ಸಾಧ್ಯತೆ
ಕೆಎಸ್‌ಸಿಎ ಚುನಾವಣೆ ಈ ಬಾರಿ ಕೇವಲ ಆಡಳಿತ ಬದಲಾವಣೆಯಲ್ಲ, ರಾಜ್ಯ ಕ್ರಿಕೆಟ್‌ನ ಭವಿಷ್ಯದ ಕುರಿತಾದ ದೊಡ್ಡ ಚರ್ಚೆಯಾಗಿ ಮಾರ್ಪಟ್ಟಿದೆ. ಮೈದಾನದ ಆಟಗಾರರಿಗೆ ಉತ್ತಮ ತರಬೇತಿ, ಆಧುನಿಕ ಮೂಲಸೌಕರ್ಯ, ಪಾರದರ್ಶಕ ಆಯ್ಕೆ ಪ್ರಕ್ರಿಯೆ ಇವೆಲ್ಲವೂ ಚುನಾವಣಾ ಪ್ರಣಾಳಿಕೆಯ ಮುಖ್ಯ ಅಂಶಗಳಾಗಿವೆ.
ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜವಗಲ್ ಶ್ರೀನಾಥ್ ನಂತಹ ಮಾಜಿ ದಿಗ್ಗಜರು ಈ ಬಾರಿ ಪ್ರಸಾದ್ ಬಣಕ್ಕೆ ತೆರೆದ ಬೆಂಬಲ ನೀಡಿದ್ದಾರೆ. ಇತ್ತ ಬ್ರಿಜೇಶ್ ಪಟೇಲ್ ಬಣ ಸಹ ತನ್ನದೇ ಆದ ಬಲಿಷ್ಠ ತಂಡವನ್ನು ಹೊಂದಿದ್ದು, ಈ ಚುನಾವಣೆ ಯಾರ ಪಾಲಾಗುತ್ತದೆ ಎಂಬುದು ಇಂದು ರಾತ್ರಿಗೆ ಗೊತ್ತಾಗಲಿದೆ.





