ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವೆ ನಡೆದ ಐಪಿಎಲ್ 2026ರ ಮೊದಲ ಪಂದ್ಯವು ಕೇವಲ ರನ್‌ಗಳಷ್ಟೇ ಅಲ್ಲದೆ, ವಿವಾದಾತ್ಮಕ ಅಂಪೈರಿಂಗ್ ತೀರ್ಪಿನಿಂದಲೂ ಸುದ್ದಿಯಾಗಿದೆ. ಪಂದ್ಯದ ನಿರ್ಣಾಯಕ ಹಂತದಲ್ಲಿ ಆರ್‌ಸಿಬಿ ಆಟಗಾರ ಫಿಲ್ ಸಾಲ್ಟ್ ಹಿಡಿದ ಕ್ಯಾಚ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಹಾಗೂ ಸನ್‌ರೈಸರ್ಸ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Your call. I believe the cushion clearly was displaced by Salt’s feet while completing the catch. Not out and six, bad call, don’t know how you can fluff that up as a third umpire. Klaasen was not out.#IPL2026 https://t.co/yQDyLM6BY8 pic.twitter.com/7HzMiQqSvR
— Adarsh (@adarshisit) March 28, 2026
ಏನಿದು ಕ್ಯಾಚ್ ವಿವಾದ?
ಸನ್‌ರೈಸರ್ಸ್ ಇನ್ನಿಂಗ್ಸ್ ವೇಳೆ ಸ್ಪೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಅವರು ರೋಮಾರಿಯೋ ಶೆಫರ್ಡ್ ಎಸೆತವನ್ನು ಸಿಕ್ಸರ್‌ಗೆ ಅಟ್ಟಲು ಯತ್ನಿಸಿದರು. ಡೀಪ್ ಮಿಡ್‌ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಫಿಲ್ ಸಾಲ್ಟ್ ಓಡಿ ಬಂದು ಅದ್ಭುತವಾಗಿ ಚೆಂಡನ್ನು ಹಿಡಿದುಕೊಂಡರು. ಆದರೆ, ನಿಯಂತ್ರಣ ಕಳೆದುಕೊಂಡ ಅವರು ಬೌಂಡರಿ ಲೈನ್ ಬಳಿ ಪಲ್ಟಿ ಹೊಡೆದರು. ಆ ಸಮಯದಲ್ಲಿ ಅವರ ಕಾಲು ಬೌಂಡರಿ ಗೆರೆಗೆ ತಗುಲಿದೆ ಎಂಬುದು ಹೈದರಾಬಾದ್ ತಂಡದ ಆರೋಪವಾಗಿತ್ತು. ಮೈದಾನದ ಅಂಪೈರ್‌ಗಳು ಇದನ್ನು ಥರ್ಡ್ ಅಂಪೈರ್‌ಗೆ ವರ್ಗಾಯಿಸಿದರು. ದೀರ್ಘಕಾಲದ ಪರಿಶೀಲನೆಯ ನಂತರವೂ ಸ್ಪಷ್ಟವಾದ ಆಂಗಲ್‌ಗಳು ಲಭ್ಯವಿಲ್ಲದಿದ್ದರೂ, ಅಂಪೈರ್ ಆರ್‌ಸಿಬಿ ಪರವಾಗಿ ‘ಔಟ್’ ನೀಡಿದರು. ಇದು ಸನ್‌ರೈಸರ್ಸ್ ಪಾಳಯದಲ್ಲಿ ತೀವ್ರ ಅಸಮಾಧಾನ ಮೂಡಿಸಿತು.
ಟಾಸ್ ಸೋತರೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಸನ್‌ರೈಸರ್ಸ್ ತಂಡಕ್ಕೆ ನಾಯಕ ಇಶಾನ್ ಕಿಶನ್ ಆಸರೆಯಾದರು. ಕೇವಲ 38 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 80 ರನ್ ಚಚ್ಚಿದ ಕಿಶನ್, ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕ್ಲಾಸೆನ್ (31) ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ 97 ರನ್‌ಗಳ ಜೊತೆಯಾಟವಾಡಿದ ಕಿಶನ್ ತಂಡದ ಮೊತ್ತ ಏರಿಸಿದರು. ಕೊನೆಯಲ್ಲಿ ಅನಿ ಕೇತ್ ವರ್ಮಾ ಕೇವಲ 18 ಎಸೆತಗಳಲ್ಲಿ 43 ರನ್ (3 ಫೋರ್, 4 ಸಿಕ್ಸರ್) ಸಿಡಿಸಿ ಮಿಂಚಿದ್ದರಿಂದ ಹೈದರಾಬಾದ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿತು.
That’s not just a catch, that’s a full-on rollercoaster at the ropes 😮💨
Screen badi, awaazein badi. Apne smart TV ke JioHotstar app pe dekhiye Champions waali commentary LIVE💥#TATAIPL 2026 | #RCBvSRH | LIVE NOW 👉 https://t.co/LWOEeT2vNG pic.twitter.com/IzIDC3MtkX
— Star Sports (@StarSportsIndia) March 28, 2026
ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ:
50ಕ್ಕೂ ಹೆಚ್ಚು ಕ್ಯಾಮೆರಾಗಳಿದ್ದರೂ ಅಂಪೈರ್ ಸರಿಯಾದ ಆಂಗಲ್ ನೋಡಿಲ್ಲ ಎಂದು ಅಭಿಮಾನಿಗಳು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂಪೈರ್ ಕುರುಡರಾಗಿದ್ದಾರೆ ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದ್ದು, ಕ್ರೀಡೆಯ ಮರ್ಯಾದೆಯನ್ನು ಇಂತಹ ನಿರ್ಧಾರಗಳು ಪ್ರಶ್ನಿಸುವಂತೆ ಮಾಡಿವೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
